ನವ ದೆಹಲಿ : ದೇಶದ ರಾಜಧಾನಿ ದೆಹಲಿಯಲ್ಲಿ ಆಡಳಿತರೂಢ ಆಮ್ ಆದ್ಮಿ ಪಕ್ಷದ ಸದಸ್ಯರು ಕೇಂದ್ರ ಸರಕಾರದ ಕೋವಿಡ್ ಲಸಿಕೆ ನೀತಿಯು ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣದ ಬದಲಾಗಿ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಕಚೇರಿಯ ಮುಂದೆ ರಸ್ತೆಗಳಲ್ಲಿ ಮಾಸ್ಕ್ ಇಲ್ಲದೆ, ಅಂತರ ಕಾಪಾಡಿಕೊಳ್ಳದೆ ಓಡಾಡುವ ಮೂಲಕ ಪ್ರತಿಭಟಿಸಿದರು.
ಈ ಬಗ್ಗೆ ವರದಿ ಮಾಡಿರುವ ಎನ್‌ಡಿಟವಿಯು ಎಎಪಿ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಮುಖಗವಸು ಇಲ್ಲದೆ ಓಡಾಡಿದರ ಬಗ್ಗೆ ವಿವರಿದೆ. ಕೋವಿಡ್ ನಿಯಂತ್ರಣದ ನಿಮಯಮಗಳ ಪ್ರಕಾರ ಪ್ರತಿಭಟನೆ ನಡೆಸಲು ಅವಕಾಶವಿಲ್ಲ, ಇದು ಕಾನೂನು ಬಾಹಿರ ಎಂದು ಪೋಲಿಸರು ಹೇಳಿದರು. ಅಲ್ಲದೆ, ದೆಹಲಿಯಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗುತ್ತಿರುವ ಬಗ್ಗೆ ಗಮನ ಸೆಳೆದರು.
ಇದನ್ನು ಓದಿ : ಕೋವಿಡ್ ನಿಯಮ : ಆಡಳಿತಾರೂಢ ಪಕ್ಷಕ್ಕೆ ಒಂದು ನಿಯಮ, ಸಾಮಾನ್ಯರಿಗೆ ಒಂದು ನಿಯಮ?
ಈ ಬಗ್ಗೆ ಎಎಪಿ ಪಕ್ಷದ ಹಿರಿಯ ಮುಖಂಡ ಸೌರಭ್ ಭಾರದ್ವಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಬಗ್ಗೆ ಗಮನ ಸೆಳೆದರು.
ದೇಶದ ಪ್ರಧಾನಿ ಏನು ಮಾಡುತ್ತಾರೋ ಅದನ್ನೇ ಜನರು ಸಹ ಅನುಸರಿಸುವರು ಎಂದು ವ್ಯಂಗ್ಯ ಮಾಡಿದ ಅವರು. ಬಿಜೆಪಿ ಇತ್ತೀಚಿಗೆ ಅತಿ ಹೆಚ್ಚು ಬಹಿರಂಗ ರ‍್ಯಾಲಿಗಳನ್ನು ಹಮ್ಮಿಕೊಂಡಿದೆ. ಬಿಹಾರದ ನಂತರ ಇತ್ತೀಚಿಗೆ ಅಸ್ಸಾಂ ಸೇರಿದಂತೆ ಇತರೆ ಕಡೆಗಳಲ್ಲಿ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅಲ್ಲಿ ನಿಮಯಗಳನ್ನು ಗಾಳಿಗೆತೂರಲಾಯಿತು. ಎಂದು ಭಾರದ್ವಾಜ್ ಆರೋಪಿಸಿದರು.
ರಾಜ್ಯದಲ್ಲಿ ಸರಕಾರ ಒಳಗೊಂಡು ಎಎಪಿ ಕಾರ್ಯಕರ್ತರು ಲಕ್ಷಾಂತರ ಜನರಿಗೆ ಲಸಿಕೆ ನೀಡಲು ಸಹಕಾರ ಮಾಡುತ್ತಿದ್ದಾರೆ. ನಿನ್ನೆ ದೆಹಲಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 5100 ಹೊಸ ಪ್ರಕರಣ ದಾಖಲಾಗುತ್ತಿದ್ದಂತೆ ದೆಹಲಿ ರಾಜ್ಯ ಸರಕಾರವು ತಕ್ಷಣಕ್ಕೆ ಜಾರಿಗೊಳ್ಳುವಂತ್ತೆ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದೆ. ಅಲ್ಲದೆ, ದೆಹಲಿ ಹೈಕೋರ್ಟ್ ಸಹ ಮಾಸ್ಕ್ ಮಹತ್ವದ ಬಗ್ಗೆಯೂ ವಿವರಿದೆ ಎಂದು ಹೇಳಿದರು.
ಇದನ್ನು ಓದಿ : ರಫೇಲ್ ಹಗರಣ : ಕೇಂದ್ರ ಸರಕಾರದ ಮೇಲೆ ತೂಗುಕತ್ತಿ
ಕೋವಿಡ್-19ರ ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಹೊರದೇಶಗಳಿಗೆ 64.5 ಮಿಲಿಯನ್ ಡೋಸ್ ಲಸಿಕೆಯನ್ನು ಕಳುಹಿಸಲುವ ಬದಲು ದೇಶದಲ್ಲಿಯೇ ಅತಿ ಹೆಚ್ಚು ಬಾಧಿತವಾಗಿರುವ ರಾಜ್ಯಗಳಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಡೋಸ್ ಗಳನ್ನು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರವು ನಾಗರಿಕರಿಗೆ ನೀಡಿದ್ದಕ್ಕಿಂತ ಹೆಚ್ಚಿನ ಲಸಿಕೆ ಪ್ರಮಾಣವನ್ನು ವಿದೇಶಗಳಲ್ಲಿ ಹೆಚ್ಚಾಗಿ ರಫ್ತು ಮಾಡಿದೆ” ಎಂದು ಎಎಪಿ ಪಕ್ಷದ ಹಿರಿಯ ಮುಖಂಡ ರಾಘವ್ ಚಾಧಾ ಹೇಳಿದ್ದಾರೆ.
ʻʻಜಾಗತಿಕ ಮಟ್ಟದಲ್ಲಿ ತನ್ನ ಛಾಪು ಮೂಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಈ ನಿರ್ಧಾರಕ್ಕೆ ಬಂದಿದ್ದಾರೆ. 64.5 ಮಿಲಿಯನ್ ಲಸಿಕೆಗಳನ್ನು ಸುಮಾರು 84 ದೇಶಗಳಿಗೆ ರಫ್ತು ಮಾಡಿದ್ದಾರೆ. ಜನರ ಜೀವ ಉಳಿಸುವುದಕ್ಕಿಂತ ಸರ್ಕಾರದ ವತಿಯಿಂದ ಮುದ್ರಿತ ತಮ್ಮ ಚಿತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆʼʼ ಎಂದು ರಾಘವ್ ಚಾಧಾ ಹೇಳಿದರು.