ಬಿಸಿ-ಆರ್ದ್ರ ವಾತಾವರಣದಲ್ಲಿ ಆಧಾರ್‌ನ ಬಯೋಮೆಟ್ರಿಕ್ ಸೇವೆಗಳು ವಿಶ್ವಾಸಾರ್ಹವಲ್ಲ: ಮೂಡಿಸ್‌ ವರದಿ

ನವದೆಹಲಿ: ಭಾರತದಂತಹ ‘ಬಿಸಿ, ಆರ್ದ್ರ’ ಇರುವ ವಾತಾರಣದಲ್ಲಿ ಆಧಾರ್‌ನ ಬಯೋಮೆಟ್ರಿಕ್‌ ತಂತ್ರಜ್ಞಾನದ ಬಳಕೆಯು ವಿಶ್ವಾಸಾರ್ಹವಲ್ಲ ಎಂದು ರೇಟಿಂಗ್ ಏಜೆನ್ಸ್ ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವಿಸ್‌ನ “ವಿಕೇಂದ್ರೀಕೃತ ಹಣಕಾಸು ಮತ್ತು ಡಿಜಿಟಲ್ ಆಸ್ತಿಗಳು” ಎಂಬ ಇತೀಚೆಗಿನ ವರದಿಯೊಂದು ಹೇಳಿದೆ.

“ಆಧಾರ್ ವ್ಯವಸ್ಥೆಯು ಗೌಪ್ಯತೆ ಮತ್ತು ಭದ್ರತೆಯ ಅಪಾಯವನ್ನುಂಟು ಮಾಡುತ್ತದೆ ಅಲ್ಲದೆ, ಅದರಿಂದಾಗಿ ಸೇವೆಯ ನಿರಾಕರಣೆ ಸಾಮಾನ್ಯವಾಗಿ ನಡೆಯುತ್ತದೆ. ಈ ವ್ಯವಸ್ಥೆಯಿಂದ ಡೇಟಾ ಸಂಗ್ರಹಣೆಯು ದುರ್ಬಲವಾಗಿದ್ದು, ಬಳಕೆದಾರರಿಗೆ ಕನಿಷ್ಠ ನಿಯಂತ್ರಣವನ್ನು ನೀಡುತ್ತದೆ” ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಬಿಜೆಪಿ ಜೊತೆಗೆ ಹೊಂದಾಣಿಕೆ ಇಲ್ಲ: ಜನರ ತೀರ್ಮಾನವೇ ನನ್ನ ತೀರ್ಮಾನ | ಶಾಸಕಿ ಕರೆಮ್ಮ ಜಿ.ನಾಯಕ್‌

“ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಅನ್ನು ನಿರ್ವಹಿಸುತ್ತದೆ. ತಳಮಟ್ಟದಲ್ಲಿರುವ ಗುಂಪುಗಳನ್ನು ಏಕೀಕರಿಸುವ ಮತ್ತು ಕಲ್ಯಾಣ ಪ್ರಯೋಜನಗಳನ್ನು ವಿಸ್ತರಿಸುವ ಗುರಿಯನ್ನು ಇದು ಹೊಂದಿದೆ… ಆದರೆ ಈ ವ್ಯವಸ್ಥೆಯು ಸಾಮಾನ್ಯವಾಗಿ ಸೇವಾ ನಿರಾಕರಣೆಗಳಿಗೆ ಕಾರಣವಾಗುತ್ತದೆ” ಎಂದು ಮೂಡೀಸ್ ತನ್ನ ವರದಿಯಲ್ಲಿ ಹೇಳಿದೆ ಎಂದು ದಿ ಹಿಂದೂ ಪತ್ರಿಕೆಯು ಸುದ್ದಿ ಮಾಡಿದೆ.

ಆಧಾರ್ ವಿಶ್ವದ ಅತಿದೊಡ್ಡ ಡಿಜಿಟಲ್ ಐಡಿ ಕಾರ್ಯಕ್ರಮವಾಗಿದೆ ಎಂದು ವರದಿ ಒಪ್ಪಿಕೊಂಡಿದ್ದು, “ಆದರೆ, ಬಯೋಮೆಟ್ರಿಕ್ ತಂತ್ರಜ್ಞಾನಗಳ ವಿಶ್ವಾಸಾರ್ಹತೆ, ವಿಶೇಷವಾಗಿ ಬಿಸಿ ಮತ್ತು ತೇವಾಂಶದ ವಾತಾವರಣದಲ್ಲಿ ಕೈಯಿಂದ ಕೆಲಸ ಮಾಡುವವರಿಗೆ ಇದು ಸಮಸ್ಯೆ ತರುತ್ತದೆ” ಎಂದು ವರದಿ ಹೇಳಿದೆ.

“ಆಧಾರ್‌ನಲ್ಲಿ ದೃಢೀಕರಿಸುವುದು ಕಷ್ಟಕರವಾಗಿದೆ, ಜೊತೆಗೆ ಬಯೋಮೆಟ್ರಿಕ್ ಬಗ್ಗೆ ವಿಶ್ವಾಸಾರ್ಹತೆಯ ಕಳವಳ ಸೇರಿದಂತೆ ಹಲವಾರು ಅಡೆತಡೆಗಳನ್ನು ಅದು ಎದುರಿಸುತ್ತಿದೆ. ಅಲ್ಲದೆ ಆಧಾರ್‌ ಗುಂಪುಗಾರಿಕೆ ಮತ್ತು ರಾಜಕೀಯ ವಿಭಜನೆಗಳನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನಕಾರಾತ್ಮಕ ಸಾಮಾಜಿಕ ಪರಿಣಾಮಗಳು ಉಂಟಾಗುತ್ತದೆ” ಎಂದು ವರದಿ ಉಲ್ಲೇಖಿಸಿದೆ.

ನೇರ ಲಾಭ ವರ್ಗಾವಣೆ (ಡಿಬಿಟಿ) ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಯೋಜನೆಗೆ ಕೇಂದ್ರವು ಆಧಾರ್ ಅನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಈ ಸಂಶೋಧನೆಗಳು ಮಹತ್ವದ್ದಾಗಿದೆ.

ವಿಡಿಯೊ ನೋಡಿ: ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್‌ಗೆ ಕೊಕ್ಕೆ! ಭುಗಿಲೆದ್ದ ಕಾರ್ಮಿಕರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *