ಯುಸಿಸಿ, ಭಾರತ-ಇಂಡಿಯ, ಜಿ-20ರ ನಂತರ……33%

ವೇದರಾಜ್‌ ಎನ್‌.ಕೆ
ಕರ್ನಾಟಕದ ವಿಧಾನ ಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲಿ ಸಮರೂಪ ನಾಗರಿಕ ಸಂಹಿತೆ, ಭಾರತ- ಇಂಡಿಯ ವಿವಾದ, ಮತ್ತು ಜಿ-20ರ ನಂತರ, ನಮ್ಮ ವ್ಯಂಗ್ಯಚಿತ್ರಕಾರರನ್ನು ಬಹುವಾಗಿ ಉತ್ತೇಜಿಸಿರುವ ಅಥವ ಬಾಧಿಸಿರುವ ವಿಷಯವೆಂದರೆ 33% ಮಹಿಳಾ ಮೀಸಲಾತಿ ಕೊನೆಗೂ ಕಾಯ್ದೆಯಾದದ್ದು. ಸುಮಾರಾಗಿ ಎಲ್ಲ ವ್ಯಂಗ್ಯಚಿತ್ರಕಾರರು ಒಂದಕ್ಕಿಂತ ಹೆಚ್ಚು ಬಾರಿ ಇದಕ್ಕೆ, ಮುಖ್ಯವಾಗಿ ಇದನ್ನು ತಂದಿರುವ ಪರಿಯ ಬಗ್ಗೆ, ಪ್ರತಿಕ್ರಿಯಿಸಿದ್ದಾರೆ. ಅವುಗಳ
ಒಂದು ಸ್ಯಾಂಪಲ್‍ ಇಲ್ಲಿದೆ. ಇಂಡಿಯ

“ತರಕಾರಿಗಳು, ಅಗತ್ಯ ವಸ್ತುಗಳು, ಅಡುಗೆ ಅನಿಲ, ಅಡುಗೆ ಎಣ್ಣೆ, ಹಣ್ಣುಗಳ ಬೆಲೆಗಳು!!!”

 

“ಚುನಾಯಿತರಾಗಬೇಕೆ?” ( ಅಲೋಕ್‍ ನಿರಂತರ್, ಫೇಸ್‍ ಬುಕ್)

ಎಲ್ಲವುಗಳ ಬೆಲೆಗಳಲ್ಲಿ ವಿಪರೀತ ಏರಿಕೆಗಳನ್ನು ಪ್ರಶ್ನಿಸುತ್ತಿರುವ ಮಹಿಳೆಯರ ಪ್ರಶ್ನೆಗಳನ್ನು ಉತ್ತರಿಸುವ ಗೋಜಿಗೇ ಹೋಗದ ಪ್ರಧಾನಿಗಳಿಗೆ ಈಗ ಕೇಳಬೇಕೆನಿಸಿದ ಪ್ರಶ್ನೆ ಇದು!

***

1996ರಲ್ಲಿ ಮಂಡಿಸಲ್ಪಟ್ಟು 2010 ಮಾರ್ಚ್‍ ನಲ್ಲಿ ರಾಜ್ಯಸಭೆ ಅಂಗೀಕರಿಸಿದರೂ, ಆ ನಂತರವೂ ಪ್ರತಿ ಸಂಸತ್‍ ಅಧಿವೇಶನದ ‘ಬಾಕಿ ಉಳಿದಿರುವ ಮಸೂದೆಗಳು’ ಎಂಬ ಪಟ್ಟಿಯಲ್ಲಿ ಎದ್ದು ಕಾಣಿಸುತ್ತಿದ್ದ ಮಹಿಳಾ ಮೀಸಲಾತಿ ಮಸೂದೆ ಕೊನೆಗೂ ಆ ಪಟ್ಟಿಯಿಂದ ಹೊರಬಂದಿದೆ. ಪ್ರಜಾಪ್ರಭುತ್ವದ ಬುನಾದಿಯನ್ನು ಗಟ್ಟಗೊಳಿಸುವ ಇಂತಹ ಮಹತ್ವದ ಮಸೂದೆಯೊಂದು ಬದುಕಿನ ಗಹನವಾದ ಪ್ರಶ್ನೆಗಳಿಂದ ಜನರ ಗಮನವನ್ನು ಬೇರೆಡೆಗೆ
ತಿರುಗಿಸುವುದಕ್ಕಾಗಿ ಬಳಕೆಯಾಗಿರುವುದು ಬೇಸರ ಉಂಟು ಮಾಡಿರುವ ಸಂಗತಿ ಎಂದು ಇದಕ್ಕಾಗಿ ಮೂರು ದಶಕಗಳ ಕಾಲ ಸತತ ವಾಗಿ ಶ್ರಮಿಸಿದ ಮಹಿಳಾ ಹೋರಾಠಗಾರರು ಇದನ್ನು ಸ್ವಾಗತಿಸುತ್ತಲೇ ಹೇಳುತ್ತಿದ್ದಾರೆ

***

ಅಂತೂ, ಕೊನೆಗೂ ಇದು “ನಾರೀ ಶಕ್ತಿ ವಂದನಾ ಅಧಿನಿಯಮ್” ಎಂಬ ಹೆಸರಿನಲ್ಲಿ ಇದೀಗ ಕಾಯ್ದೆಯಾಗಿದೆ.

ಕೇವಲ ಹೆಸರು ಬದಲಾಯಿಸುವುದಕ್ಕೆಒಂಭತ್ತು ವರ್ಷಗಳು ಬೇಕಾಯಿತೇ?!

( ಮಂಜುಲ್, ಮಿಡ್‍-ಡೇ)

ಹೆಸರು ಬದಲಾಯಿಸಿದ್ದಷ್ಟೇ ಈ ಹೊಸ ಕಾಯ್ದೆಯ, ವಿಶೇಷತೆಯಲ್ಲ (ಅದೀಗ ‘ಯುಗಧರ್ಮ’ ಅಥವಾ ಕಾಲ ಗುಣ ತಾನೇ!)

ಹೊಸ ಸಂಸತ್‍ ಭವನದಲ್ಲಿ ಮಂಡಿಸಿದ ಮತ್ತು ಅಂಗೀಕರಿಸಿದ ಮೊದಲ ಕಾಯ್ದೆ ಎಂಬುದಷ್ಟೇ ಕೂಡ ವೈಶಿಷ್ಟ್ಯವಲ್ಲ:

( ಇದೇ ಕಟ್ಟಡದ ಉದ್ಘಾಟನೆಯ ದಿನವೇ ದೇಶಕ್ಕೆ ಪದಕಗಳನ್ನು ತಂದ ಮಹಿಳಾ ಕುಸ್ತಿಪಟ್ಟುಗಳನ್ನು ಸ್ವಲ್ಪವೇ ದೂರದಲ್ಲಿ ಬೀದಿಯಲ್ಲಿ ಪೋಲೀಸರು ಥಳಿಸಿದಕ್ಕೆ
ಪರಿಹಾರವಾಗಿ ಈ ಹೊಸ ಹೆಸರಿರಬಹುದೇ ಎಂದು ಇನ್ನು ಕೆಲವರು ಟಿಪ್ಪಣಿ ಮಾಡಿದ್ದಾರೆ)

ನಾರೀ ಶಕ್ತಿ* ಶರತ್ತುಗಳು ಅನ್ವಯಿಸುತ್ತವೆ
( ಸತೀಶ ಆಚಾರ್ಯ, ಫೇಸ್‍ ಬುಕ್)

***

ವಿಶೇಷತೆಯೆಂದರೆ, ಇದು ಸದ್ಯಕ್ಕೆ ಜಾರಿಗೆ ಬರುವುದಿಲ್ಲ. 2024ರ ಲೋಕಸಭಾ ಚುನಾವಣೆಗಳಿಗಂತೂ ಅನ್ವಯವಾಗವುದೇ ಇಲ್ಲ!

(ಪಿ.ಮಹಮ್ಮದ್, ವಾರ್ತಾಭಾರತಿ)
***

ಬಹುಶ: ಹೊಸ ಸಂಸದ್‍ ಭವನ ಕಟ್ಟುವಾಗ ಈ ಯೋಚನೆ ಇರಲಿಲ್ಲವೇನೋ- ಈಗ ಆತುರಾತುರವಾಗಿ ಚೌಕಟ್ಟು ತಯಾರಿಸಿರಬೇಕು.

( ಶೀರ್ಷಿಕೆಯ ಚಿತ್ರ ನೋಡಿ- ಇದೂ ಪಿ.ಮಹಮ್ಮದ್‍ ರವರ ವ್ಯಂಗ್ಯ)

ಮೂರು ದಶಕಗಳ ಹೋರಾಟದ ನಂತರ ಇದನ್ನು ಇನ್ನೂ ಮೂರು ಹೆಜ್ಜೆಗಳಲ್ಲಿ ನೀವೇ ಮಾಡಬೇಕಾಗಿದೆ ಎನ್ನುತ್ತಾರೆ ಮಹಿಳೆಯರಿಗೆ ಈ ವ್ಯಂಗ್ಯಚಿತ್ರಕಾರರು

“ನೀವೇ ಮಾಡಿ ನೋಡಿ”

1. ಬೀಜ ಬಿತ್ತಬೇಕು 2. ಅದು ಮರವಾಗುವ ವರೆಗೆ ಕಾಯಬೇಕು
3. ಕಟ್ಟಿಗೆಯನ್ನು ಸೀಟು ಮಾಡಲು ಬಳಸಬೇಕು.
ಇದಕ್ಕೆ ನಿಮಗೆ ಸಾಕಷ್ಟು ಸಮಯ ಬೇಕು
( ಶೊರಿತ್, ಡೌನ್‍ ಟು ಅರ್ಥ್)
***

ಆದರೂ, ಈ ಕಾಯ್ದೆ ಮಾಡುವ ಸೌಭಾಗ್ಯ ತನಗೆ ಸಿಕ್ಕಿರುವುದಾಗಿ ಪ್ರಧಾನಿಗಳು ಹೇಳಿದ್ದಾರಂತೆ.

“ನಾನು ಮಾಡಿದ್ದು”

(ಸತೀಶ ಆಚಾರ್ಯ, ಮೊಲಿಟಿಕ್ಸ್, ಇನ್)

ಅಂದರೆ, 1/3 ಸೀಟುಗಳ ಗುರಿಯನ್ನು ತಲುಪುವ ಮೊದಲು ‘ಜನಗಣತಿ’ ಮತ್ತು ‘ಕ್ಷೇತ್ರ ಮರುವಿಂಗಡಣೆ’ ಎಂಬ ತಡೆಗಳನ್ನು ಹಾಕಿದ್ದೂ ಅವರೇ ಎಂದರ್ಥವೇ?

***

ಇದನ್ನೂ ಓದಿ:ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆಯವರಿಗೆ ಬಹಿರಂಗ ಪತ್ರ

ಕೊನೆಗೂ ಕಾಯ್ದೆಯಾಗಿಯೇ ಬಿಟ್ಟಿತು ಎಂದು ಹರ್ಷೋಲ್ಲಾಸ ಪಡುವಾಗಲೇ ಗುರಿ ತಲುಪಲು ನೀವಿನ್ನೂ ಬೆಟ್ಟದ ಹಾದಿಯಲ್ಲಿ ಏರಿ ಸಾಗಬೇಕಾಗಿದೆ ಎಂದು ಅದೇ ಕಾಯ್ದೆಯೇ ಹೇಳುತ್ತಿದೆ.

“ಸಬಲೀಕರಣಕ್ಕೆ ಹಾದಿ”

(ಮುಂದಿನ ನಿಲ್ದಾಣಗಳು)
ಉಪ ಕೋಟಾ- 2024-ಜನಗಣತಿ-ಕ್ಷೇತ್ರ ಮರುವಿಂಗಡಣೆ
(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ಜನಗಣತಿ ನಡೆದು ಕ್ಷೇತ್ರಗಳ ಮರುವಿಂಗಡಣೆಯ ನಂತರವೇ ಈ ಕಾಯ್ದೆ ಜಾರಿಯಾಗುತ್ತದಂತೆ. ಜನಗಣತಿ ನಡೆಯುವುದೇ 2024ರ ಚುನಾವಣೆಗಳ ನಂತರವಷ್ಟೇ ಎಂದೂ ಹೇಳಲಾಗಿದೆ(ಇದು 2021ರಲ್ಲಿ ನಡೆಯಬೇಕಾಗಿತ್ತು; ಆಗ ಕೊವಿಡ್‍ ವಿಪತ್ತು ಇನ್ನೂ ಇತ್ತು ಎಂದರೂ ಈ ವೇಳೆಗಾದರೂ ನಡೆಯಬೇಕಿತ್ತು).

***

ಇದರಲ್ಲಿ ಹೊಸದೇನಿದೆ ಎನ್ನುತ್ತಿದ್ದಾರೆಯೇ ಈ ಮಹಿಳೆ?

“ ನಾನು ಸಾಮಾನ್ಯವಾಗಿ ಸಬಲೀಕರಣಗೊಂಡಿದ್ದೇನೆ ಎಂದು ಭಾವಿಸುವಾಗಲೇ
…. ಸೋಶಿಯಲ್ ಮೀಡಿಯಾದಲ್ಲಿ ಏನೋ ಪೋಸ್ಟ್ ಎದುರಾಗುತ್ತದೆ ಮತ್ತು
ಪ್ರಧಾನಿಗಳನ್ನು ಫಾಲೋ ಮಾಡುವವರ ಬೈಗುಳ ಇರುತ್ತದೆ”

(ಮಂಜುಲ್‍, ಫೇಸ್‍ಬುಕ್)

***

ಈ ‘ಶರತ್ತು’ಗಳ ಬಗ್ಗೆ ಇನ್ನು ಕೆಲವು ವ್ಯಂಗ್ಯಗಳನ್ನು ನೋಡಿ:

ಮಹಿಳಾ ಬಿಲ್- 33% ಡೌನ್ ಲೋಡ್ ಆಗ್ತಾಇದೆ.
ಮುಗಿಯಲು ಬೇಕಾದ ಸಮಯ-ಅಂದಾಜು 6 ವರ್ಷ…
(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

***

“ವಂದನಾ” ರೈಲೇನೋ ಸಂಸತ್ತಿನಲ್ಲಿ ಸಿದ್ಧವಾಗಿ ನಿಂತಿದೆ. ಆದರೆ ಮುಂದೆ ಸಾಗಲು ಹಳಿಗಳನ್ನು ಇನ್ನು ಜೋಡಿಸಬೇಕಾಗಿದೆ!

“ಸ್ವಲ್ಪ ಕಾಯಿರಿ! ಹಳಿಗಳು ಸಾಧ್ಯವಾದಷ್ಟು ಬೇಗನೇ ಸಿದ್ಧವಾಗುತ್ತವೆ”

(ಮಿಕಾ ಅಝೀಝ್, ದಿ ಪ್ರಿಂಟ್)

***

ಈ ವ್ಯಂಗ್ಯ ಚಿತ್ರಕಾರರಂತೂ ರೈಲೇ ಸಿದ್ಧವಾಗಿಲ್ಲವಲ್ಲಾ ಎನ್ನುತ್ತಾರೆ…

“…ರಿಸರ್ವೇಷನ್ ಇರುವ ರೈಲಿನ ಇಂಜಿನ್ ಮತ್ತು ಕೋಚ್‍ಗಳನ್ನು ತಯಾರಿಸಲು
ಕಾರ್ಖಾನೆಗೆ ಆರ್ಡರ್‍ ಬೇಗನೇ ಮಂಜೂರಾಗಲಿದೆಯಂತೆ.”
( ರಾಜೇಂದ್ರ ಧೋಡಪ್‍ಕರ್, ಫೇಸ್‍ ಬುಕ್)

***

ಅಡುಗೆ ಆರಂಭವಾಗಿದೆಯಷ್ಟೇ…… ಅದುವರೆಗೆ ಕಾಯಲೇಬೇಕು…..

( ಅಲೋಕ್ ನಿರಂತರ್, ಫೇಸ್‍ಬುಕ್)

***

ಆದರೆ ಮೀಸಲಾತಿ ಜಾರಿಗೆ ಜನಗಣತಿಯ, ನಂತರ ಕ್ಷೇತ್ರ ಮರುವಿಂಗಡಣೆಯ ಅಗತ್ಯವಾದರೂ ಇದೆಯೇ?

ಹೀಗೆ ಕಾಯುವ ಆವಶ್ಯಕತೆ ಇದೆಯೇ? ಅದಕ್ಕೆ ಮಹಿಳೆಯರು ಬೆಲೆ ತೆರಬೇಕಾಗಿದೆಯೇ?

“ಹೌದು ಮತ್ತೆ, ಮತಗಟ್ಟೆಯಲ್ಲಿ ಅದನ್ನು ಪಾವತಿ ಮಾಡಿ!”
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

ಅಂದರೆ ‘ವಿಶೇಷ ಅಧಿವೇಶನ’ದ ತರಾತುರಿ…..? ಕಾರಣ ಬೇರೆಯೇ ಇರಬಹುದೇ?

ಈ ಹಿರಿಯ ವ್ಯಂಗ್ಯಚಿತ್ರಕಾರರ ಚಿತ್ರವನ್ನು ನೋಡಿದ ಮೇಲೆ ಇರಬಹುದು ಎನಿಸುತ್ತದೆ.

”ಇದನ್ನು ಜಿ-20ಕ್ಕಿಂತ ತುಸು ಹೆಚ್ಚು ಉದಾರವಾಗಿಯೇ ಬಿಂಬಿಸಬೇಕು”
(ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ ಪ್ರೆಸ್)

***

ಆದ್ದರಿಂದಲೇ ಈ ಮಸೂದೆ ಮಂಡನೆ ಮತ್ತು ಅಂಗೀಕಾರದ ಸಂದರ್ಭದಲ್ಲಿ ಇದಕ್ಕಾಗಿ ಮೂರು ದಶಕಗಳಿಂದ ಶ್ರಮಪಡುತ್ತಿರುವ ಹೋರಾಟಗಾರ್ತಿಯರನ್ನು
ಆಹ್ವಾನಿಸದಿದ್ದರೂ ಪ್ರಖ್ಯಾತ ಸಿನೆಮಾ ತಾರೆಯರನ್ನು ಆಹ್ವಾನಿಸಲು ಮರೆತಿರಲಿಲ್ಲವಂತೆ .

“33% ಮಹಿಳಾ ಮೀಸಲಾತಿ 2029ರ ಮೊದಲು ಜಾರಿಯಾಗುವವುದರ ಬಗ್ಗೆ ಪ್ರಶ್ನೆಚಿಹ್ನೆ” ಇದ್ದರೂ ಅದರ ಕೀರ್ತಿಯನ್ನು 100% ಗಿಟ್ಟಿಸುವ ಗುರಿ ಇದ್ದಿರಬೇಕು ಎಂದು ಸೂಚಿಸುತ್ತಾರೆ ಈ ವ್ಯಂಗ್ಯಚಿತ್ರಕಾರರು.

“ಇಷ್ಟೊಂದು ಸಿನೆಮಾನಟಿಯರನ್ನು ಒಟ್ಟಿಗೇ ಆಹ್ವಾನಿಸುವುದರ ಹಿಂದೆ ,
ಈ ವಿಧೇಯಕದಲ್ಲಿ ಏನಿದೆ ಎಂದು ತಿಳಿಯದೆಯೇ ಸಂತೋಷ ಪ್ರದರ್ಶಿಸುವ
ನಟನೆಯಿಂದ ಕೀರ್ತಿ ಗಿಟ್ಟಿಸುವ ಗುರಿಯನ್ನು 100% ಸಾಧಿಸುವ ಪ್ಲಾನ್‍ ಇದ್ದಿರಬೇಕು”

( ಶೇಖರ್‍ ಗುರೇರ, ಎಕ್ಸ್)

***

ಅಂದರೆ , ಇದು 2024 ರ ತಯಾರಿಯತ್ತ ಇನ್ನೊಂದು ‘ಜುಮ್ಲ’?

ದೇಶದ ಅರ್ಥವ್ಯವಸ್ಥೆಯ ಗಾತ್ರ ‘ಐದು ಟ್ರಿಲಿಯನ್’, ರೈತರ ‘ಆದಾಯ ಡಬ್ಬಲ್’‘ಅಮೃತ ಕಾಲ’, ಮತ್ತೀಗ 33% ‘ಕೋಟಾ’…

( ಸಂದೀಪ ಅಧ್ವರ್ಯು, ಫೇಸ್‍ ಬುಕ್)

***

ಆದರೆ ಈಗ ಇದು ಕೆಲಸ ಮಾಡುತ್ತದೆಯೇ?

“ನಿಮ್ಮ ಸಹನೆಗಾಗಿ ಧನ್ಯವಾದಗಳು, ಮತ್ತೆ ಮತನೀಡಿ”
ಎಂಬ ಚುನಾವಣಾ ತಂತ್ರ ಕೆಲಸ ಮಾಡಬಲ್ಲುದೇ?
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

ಮಾಡಲಿಕ್ಕಿಲ್ಲವೇನೋ ಎಂಬ ಸಂದೇಹ ಈ ವ್ಯಂಗ್ಯಚಿತ್ರಕಾರರಿಗೂ ಇದ್ದಂತಿದೆ…

ಅದೂ ದೇಶದ ಪ್ರಥಮ ಆದಿವಾಸಿ ಮಹಿಳಾ ರಾಷ್ಟ್ರಾಧ್ಯಕ್ಷರನ್ನು ಹೊಸ ಸಂಸತ್ತಿಗೆ ಆಹ್ವಾನಿಸಲಿಲ್ಲ ಎಂಬ ಸುದ್ದಿಯ ಹಿನ್ನೆಲೆಯಲ್ಲಿ..

ಹೊಸ ಸಂಸತ್ತಿನ ಉದ್ಘಾಟನಾ ಸಂದರ್ಭದಲ್ಲಿಯೂ ಅವರು ಕಾಣಿಸಿಕೊಂಡಿರಲಿಲ್ಲ ಏಕೆ ಎಂಬ ಪ್ರಶ್ನೆ ಈ ಮೊದಲೇ ಎದ್ದಿತ್ತು..

ತಾಯಿ: ಸಂಸತ್ತಿನಲ್ಲಿ ಮೀಸಲಾತಿ ನಮ್ಮನ್ನು ಸಬಲೀಕರಣದ ಹಾದಿಯಲ್ಲಿ ಒಯ್ಯುತ್ತದೆ

ಮಗಳು: ಹುಸಿ ಹೂದೋಟದತ್ತ ಒಯ್ಯಲಿಕ್ಕಿಲ್ಲ ಎಂದು ಆಶಿಸೋಣ

(ಸಂದೀಪ ಅಧ್ವರ್ಯು, ಫೇಸ್‍ಬುಕ್)

***

ಈ ಹೊಸ ತಲೆಮಾರಿನ ಯುವತಿ ಇನ್ನೂ ಜಾಣೆಯಾಗಿರುವಂತೆ ಕಾಣುತ್ತದೆ…

ಪ್ರಧಾನಿ: ನನ್ನ ಬಳಿ ನಿನಗೊಂದು ಉಡುಗೊರೆ ಇದೆ!
ಯುವತಿ: ನನ್ನ ಬಳಿ ನಿಮಗೊಂದು ಪ್ರತಿ-ಉಡುಗೊರೆ ಇದೆ!
(ಸತೀಶ ಆಚಾರ್ಯ, ಮೊಲಿಟಿಕ್ಸ್ .ಇನ್)

2026ರ ನಂತರ ಈಡೇರುವ ಉಡುಗೊರೆಗೆ 2029ರ ನಂತರವೇ ಈಡೇರಬಹುದಾದ ಪ್ರತಿ-ಉಡುಗೊರೆ!

***

(ಪೊನ್ನಪ್ಪ, ಟ್ವಿಟರ್)

ಪ್ರಧಾನಿಗಳ ಪ್ರಕಾರ 33% ಕ್ಕೇ 2027ರ ವರೆಗೆ ಕಾಯಬೇಕಾದರೆ, 50% ಆಗುವುದು ಯಾವಾಗ?
ಅಂದರೆ ಸಮಾನ ಹಕ್ಕಿಗೆ ಎಂದಿನ ವರೆಗೆ ಕಾಯಬೇಕಾದೀತು ಈಕೆ?

*******

ವಿಡಿಯೋ ನೋಡಿ:ಸತ್ತವರಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಮುನ್ನ ಡಿಸ್ಚಾರ್ಜ್ ಇದು ಆಯುಷ್ಮಾನ್ ಭಾರತ್ ಕಥೆ ವ್ಯಥೆ

Donate Janashakthi Media

Leave a Reply

Your email address will not be published. Required fields are marked *