ರಸ್ತೆ ಬಿಟ್ಟು ಕೆಳಗೆ ನುಗ್ಗಿದ ಶಾಲಾ ಬಸ್

ವರದಿ : ನಾಗೇಶ್ ತಳವಾರ

ಸಿಂದಗಿ: ಪಟ್ಟಣದಲ್ಲಿರುವ ಬಸ್ ಡಿಪೋ ಹತ್ತಿರದ ಹುಡುಕೋ ಕಾಲನಿಯ ಹತ್ತಿರ ಶಾಲಾ ಬಸ್ ವೊಂದು ರಸ್ತೆ ಬಿಟ್ಟು ಕೆಳಗೆ ನುಗ್ಗಿದ ಘಟನೆ ಸೆಪ್ಟೆಂಬರ್ 17 ರಂದು ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾತಾ ಲಕ್ಷ್ಮಿ ಪಬ್ಲಿಕ್ ಶಾಲೆಯ ವಾಹನ ಹಾಗೂ ಹಿರಾಮಾತಾ ಶಾಲಾ ವಾಹನ ನಡುವೆ ಸೈಡ್ ಕೊಡಲು ಹೋದ ಸಂದರ್ಭದಲ್ಲಿ ಶಾಲಾ ಬಸ್ ರಸ್ತೆಯಿಂದ ಪಕ್ಕಕ್ಕೆ ಇಳಿದಿದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಅನಾಹುತ ನಡೆಯುತ್ತಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಡೆದ ಬಳಿಕ ಸ್ಥಳೀಯರು ಬಸ್ ಚಾಲಕರನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪುರಸಭೆಯವರು ಬಂದು ಇಲ್ಲಿನ ಸಮಸ್ಯೆ ನೋಡಿಕೊಂಡು ಹೋಗಲಿ, ಇಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕುರಿತು ಹೇಳಿ ಬಸ್ ತೆಗೆಯಲಿ ಎಂದು ವಾಗ್ವಾದ ನಡೆದಿದೆ.

ಇದನ್ನೂ ಓದಿ: ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಸಂಘಟಿತರಾಗಬೇಕು – ನಾರಾಯಣ ಕಾಳೆ

ಈ ವಿಚಾರದ ಬಗ್ಗೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಮುಖ್ಯಾಧಿಕಾರಿ ಸುರೇಶ ನಾಯಕ ಅವರೊಂದಿಗೆ ಸ್ಥಳೀಯರು ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಶಾಂತವೀರ ಬಿರಾದಾರ ಅವರಿಗೆ, ಈ ರೀತಿಯ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಒತ್ತಾಯಿಸಿದರು. ಇದಕ್ಕೆ ಅವರು ಸ್ಪಂದಿಸಿ ಕೂಡಲೇ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.

ಇತ್ತೀಚೆಗೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದ ಭೀಕರ ಶಾಲಾ ಬಸ್ ಅಪಘಾತದಿಂದ ಬಹುದೊಡ್ಡ ಅನಾಹುತವೇ ನಡೆದಿದೆ. ಹೀಗಾಗಿ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ಸಂಬಂಧಪಟ್ಟ ಇಲಾಖೆಯವರು ಸಭೆ ನಡೆಸಿ ಎಚ್ಚರಿಕೆ ನೀಡಬೇಕು.

ಈ ವೇಳೆ ಬಸವರಾಜ ಬೋರಗಿ, ಶ್ರೀಶೈಲ ಯಳಮೇಲಿ, ಇಬ್ರಾಹಿಂ ಆಳಂದ, ಶಾಂತು ರಾಣಾಗೋಳ, ಅವಧೂತ ಜೋಶಿ ಸೇರಿದಂತೆ ಅನೇಕರು ಇದ್ದರು.

ಇದನ್ನೂ ನೋಡಿ: ಸಿಜೆಐ ಮನೆಯ ಪೂಜೆಗೆ ಪ್ರಧಾನಿ ಮೋದಿ ಭಾಗವಹಿಸಿದ್ದು ಸರಿಯೇ? | ಚಂದ್ರಪ್ರಭ ಕಠಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *