ಏ. 10 ರಂದು ʼಸಾರ್ವತ್ರಿಕ ಚುನಾವಣೆ ಸಾರ್ವಜನಿಕರ ಹೊಣೆʼ ವಿಚಾರಗೋಷ್ಠಿ

ಬೆಂಗಳೂರು : ವಿಧಾನಸಭೆ ಚುನಾವಣೆಯು ಸಮೀಪಿಸುತ್ತಿದ್ದು ಮತದಾರರ ಜವಾಬ್ದಾರಿ ಹಾಗೂ ಅವರ ಹೊಣೆಗೆ ಸಂಬಂಧಿಸಿದಂತೆ ಸಾಕಷ್ಟು ಅರಿವು ಮೂಡಿಸುವುದು ಈ ಸಂದರ್ಭದಲ್ಲಿ ಅಗತ್ಯವಾಗಿದೆ, ಈ ನಿಟ್ಟಿನಲ್ಲಿ  ಸೌಹಾರ್ದ ಕರ್ನಾಟಕ ಹಾಗೂ ವಿವಿಧ ಪ್ರಗತಿಪರ ಸಂಟನೆಯ ಸಹಯೋಗದೊಂದಿಗೆ ಇದೇ ಸೋಮವಾರದಂದು (ಏಪ್ರಿಲ್‌ 10) ನಗರದ ಗಾಂಧಿ ಭವನದಲ್ಲಿರುವ ಬಾಪೂಜಿ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ  ʼಸಾರ್ವತ್ರಿಕ ಚುನಾವಣೆ ಸಾರ್ವಜನಿಕರ ಹೊಣೆʼ ಎಂಬ ವಿಚಾರವನ್ನಿಟ್ಟುಕೊಂಡು ರಾಜುಮಟ್ಟದ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯ ಸಾಹಿತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಮರುಳಸಿದ್ದಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಅಂದು ಬಹುಮುಖ್ಯವಾಗಿ 5 ವಿಚಾರಗಳ ಕುರಿತು ವಿಚಾರ ಗೋಷ್ಠಿ ನಡೆಯಲಿದ್ದು,

ಸಾಮಾಜಿಕ ನ್ಯಾಯದ ಆಶಯ – ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ್‌
ಮಹಿಳೆಯರ ಸಮಕಾಲೀನ ಸವಾಲುಗಳು – ಅ.ಭಾ.ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಡಾ.ಮೀನಾಕ್ಷಿ ಬಾಳಿ
ಶ್ರಮಿಕರ ಸಂಕಟಗಳು – ಸಿ ಐ ಟಿ ಯುನ  ಅ.ಭಾ ಕಾರ್ಯದರ್ಶಿ ಕೆ ಎನ್‌ ಉಮೇಶ್‌
ಒಕ್ಕೂಟ ವ್ಯವಸ್ಥ ಮತ್ತು ಆರ್ಥಿಕತೆ – ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಧ್ಯಾಪಕರು ಹಾಗೂ ಅಭಿವೃದ್ಧಿ ಚಿಂತಕರಾದ ಪ್ರೊ.ಟಿ ಆರ್‌. ಚಂದ್ರಶೇಖರ್‌
ಸೌಹಾರ್ದತೆಯ ಸಂರಕ್ಷಣೆ – ಹಿರಿಯ ಪತ್ರಕರ್ತರಾದ ಬಿ.ಎಂ ಹನೀಫ್‌ ರವರು ನಡೆಸಿಕೊಡಲಿದ್ದಾರೆ.

ಹಿರಿಯ ಕವಯತ್ರಿ ಕೆ.ಶರೀಫಾ ರವರು ಕಾರ್ಯಕ್ರಮದಲ್ಲಿರುವ ಜನತೆಗೆ ಮನವಿ ಮಂಡನೆ ನಡೆಸಿಕೊಡಲಿದ್ದು, ಯು. ಬಸವರಾಜು, ಮಾವಳ್ಳಿ ಶಂಕರ್‌, ಡಾ. ಆರ್‌. ಮೋಹನ್‌ ರಾಜ್‌, ಮೈತ್ರೇಯಿ ಕೃಷ್ಣನ್‌, ಡಾ. ಸಿದ್ದನಗೌಡ ಪಾಟೀಲ್‌ ಇವರುಗಳು ಕ್ರಿಯಾತ್ಮಕತೆಯ ಮಾತುಗಳನ್ನುಆಡಲಿದ್ದಾರೆ. ಡಾ. ಹೆಚ್‌.ಜಿ ಜಯಲಕ್ಷ್ಮಿ, ಕೆ.ಎಸ್‌ ಲಕ್ಷ್ಮಿ ಮತ್ತು ಸಂಗಾತಿಗಳು ಸೌಹಾರ್ದ ಗೀತೆ ಹಾಡಲಿದ್ದಾರೆ. ಬಿ.ರಾಜಶೇಖರ ಮೂರ್ತಿ ಕಾರ್ಯಕ್ರಮದ ನಿರ್ವಹಣೆ ನಡೆಸಲಿದ್ದು, ಪ್ರಸ್ತಾವನೆಯ ಜವಾಬ್ದಾರಿ ಡಾ.ಎಸ್‌.ವೈ ಗುರುಶಾಂತ್‌ರವರ ಹೆಗಲಿಗಿದೆ. ಗೋಪಾಲಕೃಷ್ಣ ಹರಳಹಳ್ಳಿ ವಂದನಾರ್ಪನೆ ನಡೆಸಿಕೊಡಲಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Donate Janashakthi Media

Leave a Reply

Your email address will not be published. Required fields are marked *