ತಾವರಗೇರಾ: ಕಳಮಳ್ಳಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಸ್ಥಂಬದ ಮೇಲಿಂದ ಬಿದ್ದು ಮೂರನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಪ್ರಕಾಶ ತಂದೆ ಸೋಮನಾಥ ಚವ್ಹಾಣ್ (9) ಎಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಶಿಕ್ಷಕರು ಶಾಲೆಯ ಗೇಟ್ ಹಾಕಿ ತೆರಳಿದ್ದರು. ಬಳಿಕ ವಿದ್ಯಾರ್ಥಿಯು ಸ್ಥಳೀಯ ಬಾಲಕರೊಂದಿಗೆ ಕಾಂಪೌಂಡ್ ಹಾರಿ ಆಟವಾಡಲು ಶಾಲೆಯ ಮೈದಾನಕ್ಕೆ ತೆರಳಿದ್ದ ಎನ್ನಲಾಗಿದೆ. ಆವರಣ
ಧ್ವಜಸ್ಥಂಬವನ್ನು ಏರಿದ್ದ ಬಾಲಕ ಕಂಬದ ಮೇಲೆ ಇದ್ದ ಕಟ್ಟಿಗೆಯನ್ನು ಹಿಡಿದು ಕೊಂಡಿದ್ದ. ಕಟ್ಟಿಗೆ ಮುರಿದು ಕೆಳಗೆ ಬಿದ್ದ ಬಾಲಕನನ್ನು ಸ್ಥಳೀಯರು ತಾವರಗೇರಾ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದಾರೆ. ಅಲ್ಲಿ ವೈದರು ಇಲ್ಲವೆಂದು ಕುಷ್ಟಗಿ ಆಸ್ಪತ್ರೆಗೆ ತರಲಾಗಿತ್ತು. ಆದರೆ ಪರಿಶೀಲಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ಆಚರಣೆ ಹಿನ್ನಲೆ; ಗಗನಕ್ಕೇರಿದ ಹೂವು, ಹಣ್ಣು, ತರಕಾರಿ ದರ
ಈ ಕುರಿತು ಮಾಹಿತಿ ನೀಡಿದ ತಾವರಗೇರಾ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ನಾಗರಾಜ ಕೋಟಗಿ, ಘಟನೆ ಕುರಿತು ಕೆಲವರು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತಿದ್ದು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದರು. ತಂದೆ ತಾಯಿ ದುಡಿಯಲು ಗುಳೆ ಹೋಗಿದ್ದು ಬಾಲಕ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಎಂದು ತಿಳಿದಿದೆ. ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಕನ್ನಡ ಚಿತ್ರರಂಗದ ಸಂಕಷ್ಟವನ್ನು ಹೋಮ ಹವನ ನಿವಾರಿಸಬಹುದೆ? – ಬಿ.ಸುರೇಶ್ ಮಾತುಕತೆ Janashakthi Media