ಸಂಸತ್ತಿನ ಭದ್ರತಾ ಲೋಪ ವರದಿ ವೇಳೆ ಲೈವ್‌ನಲ್ಲೆ ಕಿತ್ತಾಡಿದ ಟಿವಿ ವರದಿಗಾರರು!

ನವದೆಹಲಿ: ಬುಧವಾರ ಸಂಸತ್ತಿನಲ್ಲಿ ಸಂಭವಿಸಿದ ಭದ್ರತಾ ಉಲ್ಲಂಘನೆ ನಡುವೆ, ಘಟನೆಯನ್ನು ವರದಿ ಮಾಡುವ ವೇಳೆ ಟಿವಿ ವರದಿಗಾರರು ಪರಸ್ಪರ ಹೊಡೆದಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಸದನದಲ್ಲಿ ಸ್ಪೋಟಿಸಿದ ಹಳದಿ ಬಣ್ಣದ ಹೊಗೆ ಸೂಸುವ ವಸ್ತುವನ್ನು ಕೈಯ್ಯಲ್ಲಿ ಹಿಡಿದು ಪತ್ರಕರ್ತರೊಬ್ಬರು ವರದಿ ಮಾಡುತ್ತಿರುವಾಗ ಅದನ್ನು ಸೆಳೆಯಲು ಬೇರೆ ಟಿವಿಯ ಪತ್ರಕರ್ತರು ಪ್ರಯತ್ನಿಸಿದ್ದು ಲೈವ್ ಪ್ರಸಾರದ ವೇಳೆ ದಾಖಲಾಗಿದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವ್ಯಂಗ್ಯಕ್ಕೀಡಾಗಿದೆ. ಭದ್ರತಾ ಲೋಪ

ಈ ದೃಶ್ಯಗಳು ಟಿವಿ9 ಅಲ್ಲಿ ಲೈವ್ ಪ್ರಸಾರಗೊಂಡಿದೆ. ಟಿವಿ9 ವರದಿಗಾರ ಕೈಯಲ್ಲಿ ಹೊಗೆ ಸೂಸುವ ವಸ್ತುವನ್ನು ಹಿಡಿದು ವರದಿ ಮಾಡುತ್ತಿರುವಾಗ ಕನಿಷ್ಠ ನಾಲ್ವರು ಇತರ ಮಾಧ್ಯಮದವರು ಅವರೊಂದಿಗೆ ಜಗಳವಾಡುತ್ತಾ ಅದನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ದಾಖಲಾಗಿದೆ. ಲೋಕಸಭೆಯ ಶೂನ್ಯ ವೇಳೆಯಲ್ಲಿ ಇಬ್ಬರು ಅನಧಿಕೃತ ವ್ಯಕ್ತಿಗಳು ಸದನಕ್ಕೆ ಅತಿಕ್ರಮ ಪ್ರವೇಶ ಮಾಡಿ ಬಣ್ಣದ ಹೊಗೆಸೂಸುವ ಬಾಂಬ್ ಸಿಡಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಮಾಧ್ಯಮಗಳ ಈ ಗಲಾಟೆ ನಡೆದಿದೆ. ಭದ್ರತಾ ಲೋಪ

ಇದನ್ನೂ ಓದಿ: ಲೋಕಸಭೆಗೆ ಪ್ರವೇಶಿಸಿ ಅಶ್ರುವಾಯು ಎಸೆದ ಅಪರಿಚಿತರು; ಮೈಸೂರು ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ಪಾಸ್ ಪಡೆದಿದ್ದ ಆರೋಪಿಗಳು

ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಟಿವಿ9 ವರದಿಗಾರ ವರದಿ ಮಾಡುತ್ತಿರುವಾಗಲೆ ಅದನ್ನುಬೇರೆ ಮಾಧ್ಯಮದ ವ್ಯಕ್ತಿಯೊಬ್ಬರು ಕಿತ್ತುಕೊಂಡು ಹೋಗುವುದು ದಾಖಲಾಗಿದೆ. ಈ ವೇಳೆ ಅವರು, ಇಷ್ಟು ದೊಡ್ಡ ವಸ್ತುವನ್ನು ಶೂ ಒಳಗೆ ಬಚ್ಚಿಟ್ಟುಕೊಂಡು ಸದನದ ಒಳಗೆ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಅವರು ಭದ್ರತಾ ಲೋಪವನ್ನು ಪ್ರಶ್ನಿಸುತ್ತಿದ್ದರೂ ಸಹ, ಇತರ ಚಾನೆಲ್‌ಗಳ ಸಹೋದ್ಯೋಗಿಗಳು ಅವರ ಕೈಯಿಂದ ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ.

 

ಟಿವಿ9 ಪತ್ರಕರ್ತನಿಂದ ಅದನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಒಬ್ಬ ವರದಿಗಾರ, “ನೀವು ತುಂಬಾ ಹೊತ್ತು ತೋರಿಸಿದ್ದೀರಿ, ಈಗ ನಮಗೆ ಅದನ್ನು ಕೊಡಿ” ಎಂದು ಎಂದು ಹೇಳುವುದು ಕೇಳುತ್ತದೆ.

ಇದನ್ನೂ ಓದಿ: ಅಮಿತ್ ಶಾಗೆ ಇತಿಹಾಸ ತಿರುಚಿಯೆಷ್ಟೆ ಅಭ್ಯಾಸ: ರಾಹುಲ್ ಗಾಂಧಿ ವಾಗ್ದಾಳಿ

ಬೇರೆ ವರದಿಗಾರರು TV9 ಪತ್ರಕರ್ತನ ಕೈಯಿಂದ ಕಿತ್ತುಕೊಳ್ಳುವಾಗ ಅದನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವ ಅವರು, ತನ್ನ ವರದಿಯನ್ನು ಮುಂದುವರೆಸುತ್ತಾ ತನ್ನನ್ನು ಬೆನ್ನಟ್ಟುವ ಇತರ ವರದಿಗಾರರಿಂದ ತಪ್ಪಿಸಿಕೊಳ್ಳಲು ನೋಡುತ್ತಾರೆ. ನೋಡ ನೋಡುತ್ತಿದ್ದಂತೆ ಮತ್ತಷ್ಟು ವರದಿಗಾರರು ಅವರ ಸುತ್ತ ನಿಂತು ಅದನ್ನು ಕಿತ್ತುಕೊಳ್ಳು ನೋಡುತ್ತಾರೆ. ಈ ವೇಳೆ ಅವರು, “ಕೇವಲ ಮೂವತ್ತು ಸೆಕೆಂಡ್ ನೀಡಿ, ಪ್ರಾಮಿಸ್ ಆಮೇಲೆ ನಿಮಗೆ ನೀಡುತ್ತೇನೆ” ಎಂದು ಅವರು ಇತರ ಪತ್ರಕರ್ತರೊಂದಿಗೆ ಮನವಿ ಕೂಡಾ ಮಾಡುತ್ತಾರೆ. ಅಷ್ಟಾಗಿಯೂ ಅವರ ಬೆನ್ನು ಬಿಡದ ಇತರ ಪತ್ರಕರ್ತರು, ಅವರಿಂದ ಅದನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.

ವೀಡಿಯೊ ಕ್ಲಿಪ್‌ನ ಕೊನೆಯಲ್ಲಿ, ಬೇರೊಬ್ಬ ವರದಿಗಾರ ಅಂತಿಮವಾಗಿ ಹೊಗೆ ಸೂಸುವ ಆ ವಸ್ತುವನ್ನು ಕಸಿದುಕೊಂಡು ಹೋಗುವುದು ಕೂಡಾ ದಾಖಲಾಗಿದೆ. ಈ ಘಟನೆಯನ್ನು ಟಿವಿ9 ಲೈವ್ ಪ್ರಸಾರ ಮಾಡಿದೆ. ಇದೇ ವೇಳೆ, “ಹೊಗೆ ಸೂಸುವ ಬಾಂಬ್ ಅನ್ನು ಮೊದಲು ತೋರಿಸಿದ್ದು ಟಿವಿ9” ಎಂದು ಆಂಕರ್ ಘೋಷಿಸುತ್ತಾರೆ.

ವಿಡಿಯೊ ನೋಡಿ: ಲೋಕಸಭೆಗೆ ನುಗ್ಗಿದ ಇಬ್ಬರು ಅಪರಿಚಿತರು! ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದ ಆರೋಪ #ParliamentAttack

Donate Janashakthi Media

Leave a Reply

Your email address will not be published. Required fields are marked *