ಕಳೆದ ಏಳು ದಶಕಗಳಲ್ಲಿ ಕೇರಳದಲ್ಲಿ ಆಗಿರುವ ಅಭಿವೃದ್ಧಿ ಮತ್ತು ಸಾಧನೆಗಳ ಗಮನಾರ್ಹ ಪ್ರಯಾಣವನ್ನು ಕಣ್ಮುಂದೆ ತರುವ ಕೇರಳೀಯಂ ಜಾತ್ರೆ ಶುರುವಾಗಿದ್ದು, ತಿರುವನಂತಪುರಂ ಜಿಲ್ಲೆಯ ಕೌಡಿಯಾರ್ನಿಂದ ಪೂರ್ವ ಕೋಟೆಯವರೆಗೆ ನವೆಂಬರ್ 1 ರಿಂದ 7 ರವರೆಗೆ ಕಾರ್ಯಕ್ರಮಗಳು ನಡೆಯುತ್ತಿವೆ.
ಕೇರಳೀಯಂ ಜಾತ್ರೆ ಆಚರಿಸುವ ಮೂಲ ಉದ್ದೇಶ ಉತ್ಕೃಷ್ಟತೆಯಿಂದ ಭಿನ್ನವಾಗಿರುವ ಹೊಸ ಕೇರಳವನ್ನು ರೂಪಿಸುವುದು, ರಾಜ್ಯದಾದ್ಯಂತ ಸಾಮಾಜಿಕ-ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವುದು, ಎಲ್ಲಾ ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಪ್ರಗತಿಪರ ಅಭಿವೃದ್ಧಿ ನೀತಿಗಳನ್ನು ರೂಪಿಸುವುದು ಆಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೇರಳೀಯಂ ಎಂಬುದು ಕೇರಳದ ವೈಶಿಷ್ಟ್ಯತೆಯನ್ನು ಜಾಕತಿಕ ಮಟ್ಟದಲ್ಲಿ ಸದ್ದು ಮಾಡಲು ರೂಪಿಸಿರುವ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ಕೇರಳೀಯಂ ಅನ್ನು ಆಯಾ ವರ್ಷದ ಸ್ಮರಣಾರ್ಥವಾಗಿ ಆಯೋಜಿಸಲಾಗುತ್ತದೆ. ಕೇರಳದ ಸಾಧನೆಗಳು, ವಿವಿಧ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ನಿರೀಕ್ಷೆಗಳ ಕುರಿತು ಚರ್ಚೆಗಳನ್ನು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ರಾಜ್ಯದ ವಿಶಿಷ್ಟ ಸಂಪನ್ಮೂಲಗಳು, ಸಾಂಸ್ಕೃತಿಕ ಪರಂಪರೆ, ಕೃಷಿ-ಕೈಗಾರಿಕಾ ಪ್ರಗತಿ ಮತ್ತು ತಾಂತ್ರಿಕ ಸಾಧನೆಗಳನ್ನು ಎತ್ತಿ ತೋರಿಸುವ ಪ್ರದರ್ಶನಗಳು ಸಹ ಕಂಡುಬರುತ್ತವೆ. ಈ ಕಾರ್ಯಕ್ರಮವು ಕೇರಳದ ಅಭಿವೃದ್ಧಿ ಮಾದರಿಗಳನ್ನು ಜಗತ್ತಿಗೆ ಪರಿಚಯಿಸಲು ಮತ್ತು ಜಾಗತಿಕ ಶೈಕ್ಷಣಿಕ ಕ್ಷೇತ್ರದಿಂದ ಹೊಸ ಆಲೋಚನೆಗಳನ್ನು ರೂಪಿಸಿರುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.
ನವೆಂಬರ್ 2 ರಿಂದ ನವೆಂಬರ್ 6, 2023 ರವರೆಗೆ ಹಲವು ಬಗೆಯ ಸೆಮಿನರ್ಗಳು ನಡೆಯಲಿದ್ದು, ಒಟ್ಟು 25 ಸೆಮಿನರ್ಗಳನ್ನು 5 ದಿನಗಳಲ್ಲಿ ಆಯೋಜಿಸಲಾಗಿದೆ. ಜೊತೆಗೆ 22 ವಿಭಿನ್ನ ಕ್ಯುರೇಟೆಡ್ ಪ್ರದರ್ಶನಗಳು, ಸಾಂಸ್ಕೃತಿಕ ಉತ್ಸವದ ಅಂಗವಾಗಿ 400 ಕ್ಕೂ ಹೆಚ್ಚು ಕಲಾ ಕಾರ್ಯಕ್ರಮಗಳು, 330 ಸ್ಟಾಲ್ಗಳ ಬೃಹತ್ ಮಾರ್ಕಕೆಟಿಂಗ್ ಮೇಳ, ಆಹಾರ ಉತ್ಸವದ ಭಾಗವಾಗಿ 11 ರೀತಿಯ ವಿಭಿನ್ನ ಆಹಾರ ಮೇಳಗಳು, ಪುಷ್ಪ ಪ್ರದರ್ಶನ, ಚಲನಚಿತ್ರೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ.
ಕೇರಳೀಯಂ ಕಾರ್ಯಕ್ರಮವನ್ನು ಸಮರ್ಥವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಸಮಗ್ರ ಸಮಿತಿಗಳನ್ನು ಸಹ ಸ್ಥಾಪಿಸಲಾಗಿದೆ. ಒಟ್ಟಾರೆಯಾಗಿ ಕಾರ್ಯಕ್ರಮ ಬಾರೀ ವಿಜ್ರುಂಭಣೆಯಿಂದ ನಡೆಯಲಿದ್ದು ಮನಮೋಹಕವಾಗಿ ಮೂಡಿಬರುವ ನಿರೀಕ್ಷೆಯಿದೆ. ಸಿನಿಮಾ ನಟ ನಟಿಯರು, ಹಲವಾರು ಗಣ್ಯವಕ್ತಿಗಳು ಸಹ ಸಮಾರಂಭದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕೇರಳ ಸರ್ಕಾರ ತಿಳಿಸಿದೆ.