ಎಸ್ಎಫ್ಐ
ಹಾವೇರಿ: ಕಾನೂನು ಮತ್ತು ಪದವಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಕಾಲಾವಧಿಯ ವಿಸ್ತರಣೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕೆಎಸ್ಆರ್ಟಿಸಿ ವ್ಯವಸ್ಥಾಪಕರ ಮೂಲಕ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, ಕೋವಿಡ್ ನಂತರದಲ್ಲಿ ಪ್ರಾಥಮಿಕ ಶಾಲೆ ಯಿಂದ ಪದವಿ ವರೆಗೂ ಶೈಕ್ಷಣಿಕ ವರ್ಷ ಏರುಪೇರು ಆಗಿದ್ದು. ಅನೇಕ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ರಿಯಾಯಿತಿ ದರದಲ್ಲಿ ನೀಡುತ್ತಿರುವ ಬಸ್ ಪಾಸ್ ಅವಧಿ ಮುಗಿದು ಏರುಪೇರು ಕಂಡಿದೆ. ಕಾನೂನು ಮಹಾವಿದ್ಯಾಲಯ ವಿದ್ಯಾರ್ಥಿಗಳು ಬಸ್ ಪಾಸ್ ಕೇಳಲು ಹೋದಾಗ ಸರಿಯಾಗಿ ಮಾಹಿತಿ ನೀಡದೆ ಸತಾಯಿಸುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಪರೀಕ್ಷೆ ಮುಗಿಯುವವರೆಗೂ ಪದವಿ, ಕಾನೂನು ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ :ರಾಜ್ಯ ಶಿಕ್ಷಣ ನೀತಿ ಬಂದ ತಕ್ಷಣ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ನಿಲ್ಲುವುದಿಲ್ಲ: ಬಿ. ಶ್ರೀಪಾದ ಭಟ್
ಮನವಿ ಪತ್ರ ಸ್ವಿಕರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ.ವಿ. ಎಮ್ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಪ್ರತಿ ಹೊರಡಿಸಲು ಹಾಗೂ ಪತ್ರಿಕಾ ಪ್ರಕಟಣೆ ನೀಡಿ, ಆಯ ಕಾಲೇಜಿನ ಪ್ರಚಾರ್ಯರಿಗೆ ಸಂದೇಶ ಕಳಿಸಿ, ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಪಾಸ್ ವಿತರಣೆ ಮಾಡಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಂಘಟಿಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ರಮೇಶ್.ಎಫ್.ಕೆ, ನಿಂಗರಾಜ ಭಂಡಾರಿ, ಬಸವರಾಜ ಕೆ, ನಾಗೇಶ್ ಎಲ್ , ಪ್ರಮೋದ್ ಆರ್ ಎಲ್, ಶಿವಕುಮಾರ್ ಎಸ್ ಆರ್, ಬಿ. ಆರ್. ಲಮಾಣಿ ಉಪಸ್ಥಿತರಿದ್ದರು. ಎಸ್ಎಫ್ಐ