ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಂಕರಯ್ಯ ಅವರ 102ನೇ ಜನ್ಮದಿನದಂದು ಪ್ರಕಟಿಸಿದ್ದಾರೆ
ಚೆನ್ನೈ: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಕಮ್ಯುನಿಸ್ಟ್ ನಾಯಕ ಎನ್. ಸಂಕರಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತಮಿಳುನಾಡಿನ ಮಧುರೈ ಕಾಮರಾಜ್ ವಿಶ್ವವಿದ್ಯಾಲಯವು ಸಜ್ಜಾಗಿದೆ. ಮಧುರೈ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಂಕರಯ್ಯ ಅವರ 102ನೇ ಜನ್ಮದಿನವಾದ ಜುಲೈ 15ರ ಶನಿವಾರ ಸಂಜೆ ಈ ವಿಷಯವನ್ನು ಪ್ರಕಟಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಧುರೈನ ಅಮೇರಿಕನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಂಕರಯ್ಯಅವರು ಕಮ್ಯುನಿಸ್ಟ್ ಚಳುವಳಿಯಲ್ಲಿ ಸಕ್ರಿಯವಾಗಿದ್ದರು. ಈ ವೇಳೆ ಅವರು ಬ್ರಿಟಿಷ್ ಸರ್ಕಾರದಿಂದ ಬಂಧನಕ್ಕೂ ಒಳಗಾಗಿದ್ದರು, ಜೊತೆಗೆ ಕಾಲೇಜು ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ಒಂದು ಊರಿಗೆ ಒಂದು ಮೆಡಿಕಲ್ ಷಾಪ್, ಒಂದು ಕಮ್ಯುನಿಸ್ಟ್ ಪಕ್ಷ ಬೇಕೇ ಬೇಕು
ಈ ವಿಚಾರವನ್ನು ನೆನಪಿಸಿಕೊಂಡಿರುವ ಮುಖ್ಯಮಂತ್ರಿ ಸ್ಟಾಲಿನ್, “1941 ರಲ್ಲಿ ಅಮೆರಿಕನ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಕಮ್ಯುನಿಸ್ಟ್ ನಾಯಕ ಸಂಕರಯ್ಯ ಅವರನ್ನು ಬಂಧಿಸಲಾಯಿತು. ನಂತರ ಅವರನ್ನು 1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಬರುವ ಕೇವಲ 12 ಗಂಟೆಗಳ ಮೊದಲು ಬಿಡುಗಡೆ ಮಾಡಲಾಯಿತು” ಎಂದು ಹೇಳಿದ್ದಾರೆ.
ಸಂಕರಯ್ಯ ಅವರು ಬಡವರು- ದೀನದಲಿತರಿಗೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕೆಂದು ವಿವಿಧ ವಲಯಗಳಿಂದ ಮನವಿಗಳು ಬಂದಿವೆ. ಅದು ಈಗ ಈಡೇರುತ್ತಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್‌ವಾದಿ (ಸಿಪಿಐಎಂ) ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಸಂಕರಯ್ಯ ಅವರು ಪಕ್ಷದ ತಮಿಳುನಾಡು ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ 1996ರಿಂದ 2001ರ ವರೆಗೆ ಕಾರ್ಯನಿರ್ವಹಿಸಿದ್ದರು. 1967, 1977 ಮತ್ತು 1980 ರಲ್ಲಿ ರಾಜ್ಯ ವಿಧಾನಸಭೆಗೆ ಅವರು ಆಯ್ಕೆಯಾಗಿದ್ದರು.
ದೇಶದ ಹಿರಿಯ ಕಮ್ಯುನಿಸ್ಟ್ ನಾಯಕರಾದ ಅವರಿಗೆ 2021 ರಲ್ಲಿ ತಮಿಳುನಾಡಿನ ಅತ್ಯುನ್ನತ ಪ್ರಶಸ್ತಿಯಾದ ‘ತಗೈಸಲ್ ತಮಿಳ್’ ಪ್ರಶಸ್ತಿಯನ್ನು ಅವರು 100 ನೇ ವರ್ಷಕ್ಕೆ ಕಾಲಿಟ್ಟಾಗ ನೀಡಿ ಗೌರವಿಸಲಾಗಿತ್ತು. ಈ ಪ್ರಶಸ್ತಿಯು ಸ್ಮರಣಿಕೆ ಮತ್ತು 10 ಲಕ್ಷ ರೂ.ಗಳನ್ನು ಒಳಗೊಂಡಿತ್ತು. ಸಂಕರಯ್ಯ ಅವರು ಪ್ರಶಸ್ತಿಯಲ್ಲಿ ಸಿಕ್ಕ 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಬಾಲಕೃಷ್ಣನ್ ನೇತೃತ್ವದಲ್ಲಿ ಸಿಪಿಎಂನ ಹಿರಿಯ ಮುಖಂಡರು ಶಂಕರಯ್ಯ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಸರ್ಕಾರದ ಪರವಾಗಿ ಎಂಎಸ್‌ಎಂಇ ಸಚಿವ ಟಿ.ಎಂ.ಅನ್ಬರಸನ್ ಶಂಕರಯ್ಯ ಅವರನ್ನು ಅಭಿನಂದಿಸಿದರು. ದ.ಕ.ಅಧ್ಯಕ್ಷ ಕೆ.ವೀರಮಣಿ, ವಿ.ಸಿ.ಕೆ ಅಧ್ಯಕ್ಷ ತೊಳ್ ತಿರುಮಾವಳವನ್ ಕೂಡ ಹಿರಿಯ ನಾಯಕರನ್ನು ಅಭಿನಂದಿಸಿದರು.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ.ಬಾಲಕೃಷ್ಣನ್ ನೇತೃತ್ವದಲ್ಲಿ ಪಕ್ಷದ ಹಿರಿಯ ಮುಖಂಡರು ಸಂಕರಯ್ಯ ಅವರನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. ತಮಿಳುನಾಡು ಸರ್ಕಾರದ ಪರವಾಗಿ ಎಂಎಸ್‌ಎಂಇ ಸಚಿವ ಟಿ.ಎಂ.ಅನ್ಬರಸನ್ ಸಂಕರಯ್ಯ ಅವರನ್ನು ಅಭಿನಂದಿಸಿದ್ದಾರೆ. ದ್ರಾವಿಡರ್ ಕಳಗಂ ಅಧ್ಯಕ್ಷ ಕೆ.ವೀರಮಣಿ, ವಿ.ಸಿ.ಕೆ ಅಧ್ಯಕ್ಷ ತೊಳ್ ತಿರುಮಾವಳವನ್ ಕೂಡ ಸಂಕರಯ್ಯ ಅವರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಭಾರತದಕಮ್ಯುನಿಸ್ಟ್ ಚಳುವಳಿ @ 100– ವಿಶೇಷಾಂಕ
ಸಿಪಿಐಎಂ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಸಂಕರಯ್ಯ ಅವರು ಪಕ್ಷದ ಕೇಂದ್ರ ಸಮಿತಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ. ಅಷ್ಟೆ ಅಲ್ಲದೆ, ಅಖಿಲ ಭಾರತ ಕಿಸಾನ್ ಸಭಾದ ನಾಯಕತ್ವ ನೀಡಿದ್ದರು.