ಬಸ್​​ಗಳಲ್ಲಿ ನೂಕುನುಗ್ಗಲಿನಿಂದ ಅನಾಹುತ ಸಂಭವಿಸಿದರೆ ಆರ್​.ಅಶೋಕ್ ಹೊಣೆ: ಕಾಂಗ್ರೆಸ್

ಬೆಂಗಳೂರು: ಬಸ್​​ಗಳಲ್ಲಿ ನೂಕುನುಗ್ಗಲಿನಿಂದ ಅನಾಹುತ ಸಂಭವಿಸಿದರೆ ಆರ್​.ಅಶೋಕ್ ಹೊಣೆ ಎಂದು  ರಾಜ್ಯ ಕಾಂಗ್ರೆಸ್ ಎಚ್ಚರಿಸಿದೆ.

‘ಶಕ್ತಿ ಯೋಜನೆ, ಹೆಚ್ಚು ದಿನ ಇರುವುದಿಲ್ಲ, ಈಗಲೇ ಎಲ್ಲಾ ಕಡೆಯೂ ತಿರುಗಾಡಿ’ ಎಂದು ಕರೆ ಕೊಟ್ಟಿರುವ ಆರ್.ಅಶೋಕ್ ಸಮಾಜಘಾತುಕ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ‘ಬಸ್ಗಳಲ್ಲಿ ನೂಕುನುಗ್ಗಲಾಗಿ ಅನಾಹುತ ಸಂಭವಿಸಿದರೆ ಅಶೋಕ್ ಅವರೇ ಹೊಣೆಯಾಗುತ್ತಾರೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ತಿಳಿಸಿದೆ.

ಉಚಿತ ಪ್ರಯಾಣ ಅವಕಾಶ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಟೂರ್ ಹೋಗಬೇಕೋ ಬೇಗ ಹೋಗಿ ಬನ್ನಿ’ ಎಂದು ಬಿಜೆಪಿ ಮಾಜಿ ಸಚಿವ ಆರ್.ಅಶೋಕ್ ಅವರು ಹೇಳಿಕೆ ನೀಡುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಮುಂದಾಗಿದ್ದರು.

 

‘ಶಕ್ತಿ ಯೋಜನೆ ಹೆಚ್ಚು ದಿನ ಇರುವುದಿಲ್ಲ, ಈಗಲೇ ಎಲ್ಲಾ ಕಡೆಯೂ ತಿರುಗಾಡಿ’ ಎಂಬಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಜನತೆ ಗಂಭೀರವಾಗಿ ಪರಿಗಣಿಸಬಾರದು. ನೂಕುನುಗ್ಗಲಾಗದಂತೆ ಜಾಗರೂಕತೆ ವಹಿಸುತ್ತಾ ಯೋಜನೆಯ ಲಾಭ ಪಡೆಯಬೇಕು ಎಂದು ಕಾಂಗ್ರೆಸ್ ಟ್ವೀಟ್‌ ಮಾಡುವ ಮೂಲಕ  ಕರೆಕೊಟ್ಟಿದೆ.

ಇದನ್ನೂ ಓದಿ:ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದು: ರಾಜ್ಯದಲ್ಲಿ ಇನ್ಮುಂದೆ ಮಹಿಳೆಯರಿಗೆ ಬಸ್​ ಪ್ರಯಾಣ ಉಚಿತ

ಆರ್.ಅಶೋಕ್ ಹೇಳಿದ್ದೇನು?

‘ಬಸ್ನಲ್ಲಿ ಉಚಿತ ಪ್ರಯಾಣ ಅವಕಾಶ ಹೆಚ್ಚು ದಿನ ಇರುವುದಿಲ್ಲ. ಎಲ್ಲೆಲ್ಲಿಗೆ ಟೂರ್ ಹೋಗಬೇಕೋ ಬೇಗ ಹೋಗಿ ಬನ್ನಿ. ಈ ಯೋಜನೆಯನ್ನು ಬೇಗ ಬಳಸಿಕೊಳ್ಳಿ. ಆಮೇಲೆ ನಿಮಗೆ ಅವಕಾಶ ಸಿಗುವುದಿಲ್ಲ. ಖಜಾನೆ ಖಾಲಿಯಾಗುತ್ತಿದ್ದು, ಇನ್ನೊಂದು ವರ್ಷದಲ್ಲಿ ರಾಜ್ಯ ದಿವಾಳಿಯಾಗುತ್ತದೆ. ಆಗ ಎಲ್ಲ ಯೋಜನೆಗಳನ್ನು ಹಿಂದಕ್ಕೆ ಪಡೆಯುತ್ತಾರೆ. ಬೇಗ ನಿಮ್ಮ ಎಲ್ಲ ಹರಕೆಗಳನ್ನು ತೀರಿಸಿಕೊಳ್ಳಿ’ ಎಂದು ಆರ್.ಅಶೋಕ್ ಹೇಳಿದ್ದರು.

Donate Janashakthi Media

Leave a Reply

Your email address will not be published. Required fields are marked *