ಬೆಂಗಳೂರು: ಪಿಯುಸಿಯಲ್ಲಿ ಕಡಿಮೆ ಮಾರ್ಕ್ ಬಂದಿದೆ ಅನ್ನೋ ಕಾರಣಕ್ಕೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ ಘಟನೆ ಜರುಗಿದೆ.
ಹೌದು ವಿಚಿತ್ರವೆನಿಸಿದರು ಇದು ಸತ್ಯ. ಈ ಕುರಿತಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾಗಿ ಶುಭ್ ಎಂಬುವರು ಟ್ವೀಟ್ ಮಾಡಿ ಮನೆ ಕೊಡಿಸುವ ಬ್ರೋಕರ್ನೊಂದಿಗೆ ನಡೆಸಿದ ವಾಟ್ಸಾಪ್ ಚಾಟ್ನ್ನು ಸ್ಕ್ರೀನ್ ಶಾಟ್ ತೆಗೆದು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
"Marks don't decide your future, but it definitely decides whether you get a flat in banglore or not" pic.twitter.com/L0a9Sjms6d
— Shubh (@kadaipaneeeer) April 27, 2023
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ) ಮನೆ ಬಾಡಿಗೆಗೆ ಸಿಗುವುದು ಬಹಳ ಕಷ್ಟಕರ ಸಂಗತಿ. ಬೇರೆ ಬೇರೆ ಊರುಗಳಿಂದ ಬಂದು ನಗರದಲ್ಲಿ ವಾಸಿಸಲು ಬಯಸುವ ಜನರಿಗೆ ಬಾಡಿಗೆ ಮನೆ ಸಿಗುವುದು ದುರ್ಲಭವಾಗಿದೆ. To-Let ಅಂತ ಬೋರ್ಡ್ ಕಂಡಮೇಲೆ ವಿಚಾರಿಸಲೆಂದು ಹೋದರೇ ಮನೆಯ ಮಾಲೀಕರು ಹಾಕುವ ಕಂಡಿಷನ್ಸ್ ಕೇಳಿದ್ರೆನೇ ಮೂರ್ಛೆ ಹೋಗುತ್ತದೆ. ಅದೇ ರೀತಿಯಾಗಿ ನಗರದಲ್ಲಿ ಓರ್ವ ಮನೆ ಮಾಲಿಕ, ಮನೆ ಬಾಡಿಗೆಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಶೇ90 ರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಹಾಕಿದ್ದಾರೆ.
ವಾಟ್ಸಪ್ ಚಾಟ್ನಲ್ಲಿ ಮನೆ ಕೊಡಿಸುವ ಬ್ರೋಕರ್ ಹೇಳಿದ್ದಾರೆ, “ಲಿಂಕ್ಡಿನ್ ಮತ್ತು ಟ್ವಿಟರ್ ಪ್ರೋಫೈಲ್ ಕಳಸಿ, ಜೊತೆಗೆ ನಿಮ್ಮ ಕಂಪನಿ ಜಾಯನಿಂಗ್ ಲೆಟರ್, ಅಂಕಪಟ್ಟಿ, ಮತ್ತು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ 150 ರಿಂದ 300 ಪದಗಳಲ್ಲಿ ನಿಮ್ಮ ಬಗ್ಗೆ ಬರೆದು ಪತ್ರವನ್ನು ಕಳುಹಿಸಿ” ಎಂದು ಮನೆ ಮಾಲಿಕರು ಕಂಡೀಷನ್ಸ್ ಹಾಕಿದ್ದಾರೆ ಎಂದು ಮನೆ ಪಡೆಯುವವರಿಗೆ ಬ್ರೋಕರ್ ಮೆಸೆಜ್ ಮಾಡಿದ್ದಾರೆ.
ನಂತರ ಮನೆ ಬಾಡಿಗೆ ಪಡೆಯುವವರು ಸರಿ ಎಂದು ಎಲ್ಲ ಡಾಕ್ಯುಮೆಂಟ್ಸ್ ಮತ್ತು ಪತ್ರವನ್ನು ಬ್ರೋಕರ್ಗೆ ಕಳಸಿದ್ದಾರೆ. ಆ ಕಡೆಯಿಂದ ಬ್ರೋಕರ್ನ ರಿಪ್ಲೈ ಬಂದಿದ್ದು, “ನೀವು ದ್ವಿತೀಯ ಪಿಯುಸಿಯಲ್ಲಿ ಶೇ75 ರಷ್ಟು ಮಾತ್ರ ಅಂಕ ಪಡೆದಿದ್ದೀರಿ, ನಾವು ಮನೆ ನೀಡಲು ಕನಿಷ್ಠ ಶೇ90 ರಷ್ಟು ಅಂಕ ಪಡೆಯಬೇಕು. ಹೀಗಾಗಿ ನಿಮಗೆ ಮನೆ ಬಾಡಿಗೆ ಕೊಡಲು ಆಗುವುದಿಲ್ಲ ಎಂದು ಮನೆ ಮಾಲಿಕ ರಿಜೆಕ್ಟ್ ಮಾಡಿದ್ದಾರೆ” ಎಂದು ಬ್ರೋಕರ್ ಹೇಳಿದ್ದಾರೆ. ಇದರಿಂದ ಆಶ್ಚರ್ಯಗೊಂಡ ಮನೆ ಬಾಡಿಗೆ ಪಡೆಯವ ವ್ಯಕ್ತಿ ಟೂ ಫನ್ನಿ ಎಂದು ಮರು ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯುವ ವೇಳೆ ಆಹಾರ ಪದ್ಧತಿ, ಜಾತಿ ವಿಚಾರ ತಿಳಿದು ಮನೆ ನಿರಾಕರಿಸಿದ ಘಟನೆಗಳು ನಡೆಯುತ್ತಿವೆ. ಈಗ ಆ ಸಾಲಿಗೆ ಅಂಕದ ಮಾನದಂಡವು ಸೇರಿಕೊಂಡಿದೆ. ಅಂಕ ಪಡೆದಿರುವ ವಿಚಾರದ ಮೂಲಕ ಇಲ್ಲಿ ಯಾವ ಜತಿಯವರು ಎಂದು ಸುಲಭವಾಗಿ ತಿಳಿಯುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಜಾತಿ ವ್ಯವಸ್ಥೆ, ಜಾಣ – ದಡ್ಡ ಎಂಬ ಶ್ರೇಣಿಕೃತ ವ್ಯವಸ್ಥೆ ಹೇಗೆದೆ ಎಂಬುದನ್ನು ಇಂತಹ ಘಟನೆಗಳು ತೋರಿಸುತ್ತಿವೆ.