ಬೆಂಗಳೂರು: ಮೇ.10ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಭರ್ಜರಿ ಸಿದ್ಥತೆಗಳನ್ನು ನಡೆಸುತ್ತಿದೆ. ಈ ನಡುವೆಯೇ ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ಎಲ್ಲಾ ಅರ್ಹ ಸಮುದಾಯಗಳಿಗೆ ಒಟ್ಟಾರೆ ಮೀಸಲಾತಿಯನ್ನು ಶೇ.75 ಹೆಚ್ಚಿಸುವುದಾಗಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಎಲ್ಲಾ ಅರ್ಹ ಸಮುದಾಯಗಳಿಗೇಕೆ ಮೀಸಲಾತಿಯನ್ನು ಶೇ.75ಕ್ಕೆ ಹೆಚ್ಚಿಸಬಾರದು? ಆರ್ಥಿಕವಾಗಿ ದುರ್ಬಲ ವರ್ಗಗಳು ಸೇರಿದಂತೆ ಎಲ್ಲಾ ವರ್ಗಗಳಿಗೆ ಮೀಸಲಾತಿ ಸಿಕ್ಕಿದೆ, ಸಾಮಾನ್ಯ ವರ್ಗಕ್ಕೇಕೆ ಹೆಚ್ಚಿನ ಮೀಸಲಾತಿ ಬೇಕು ಎಂದು ಪ್ರಶ್ನಿಸಿದ್ದಾರೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಎಂದರು.
ಜನರು ಸರ್ಕಾರವನ್ನು ಬದಲಾಯಿಸಲು ಬಯಸಿದ್ದಾರೆ :
ಪ್ರಸ್ತುತ ರಾಜ್ಯದ ಬೆಳವಣಿಗೆಗಳನ್ನು ನೋಡಿದರೆ, ಪರಿಸ್ಥಿತಿ ಕಾಂಗ್ರೆಸ್ ಪರವಾಗಿದೆ. ಏಕೆಂದರೆ ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಕಾರಣದಿಂದ ಬಿಜೆಪಿ ಸರ್ಕಾರದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಎದ್ದಿದೆ. ರೈತರು, ಮಹಿಳೆಯರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯದ ಜನತೆ ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತು ಹೋಗಿದ್ದಾರೆ. ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಜನರು ಸರ್ಕಾರವನ್ನು ಬದಲಾಯಿಸಲು ಬಯಸಿದ್ದಾರೆ. ನಾವು ಎಲ್ಲಿಯೇ ಹೋದರೂ ಜನರು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ.
ಕಾಂಗ್ರೆಸ್ ಹಲವಾರು ಯೋಜನೆಗಳನ್ನು ಘೋಷಿಸಿದೆ, ಆದರೆ, ಬಜೆಟ್ನ ಗಾತ್ರದ ದೃಷ್ಟಿಯಲ್ಲಿ ನೋಡುವುದಾದರೆ, ಅವುಗಳನ್ನು ಜಾರಿಗೆ ತರುವುದು ಅಸಾಧ್ಯ ಎಂದು ಬಿಜೆಪಿ ಹೇಳುತ್ತಿದೆ? ಅದಕ್ಕೆ ಬೇಕಾಗುವ ಬಜೆಟ್ ಅಂದಾಜಿನ ನಂತರವೇ ‘ಕಾಂಗ್ರೆಸ್ ಗ್ಯಾರಂಟಿ’ ಯೋಜನೆಯನ್ನು ಘೋಷಿಸಿದ್ದೇವೆ. ಅವರಿಗೆ ಸುಮಾರು 50,000 ಕೋಟಿ ರೂಪಾಯಿ ಬೇಕಾಗಬಹುದು, ಆದರೆ ಬಜೆಟ್ನ ಗಾತ್ರವು 3.10 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಈ ಗಾತ್ರ ರೂ. 3.30 ಲಕ್ಷ ಕೋಟಿಗೂ ಹೋಗಬಹುದು. ನಮ್ಮ ಪ್ರಣಾಳಿಕೆ ಘೋಷಣೆಗಳನ್ನು ಐದು ವರ್ಷದಲ್ಲಿ ಪೂರ್ಣಗೊಳಿಸುತ್ತೇವೆ ಎಂದರು.
ಇದನ್ನೂ ಓದಿ : ಅಂಬೇಡ್ಕರರ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಕುರಿ ಮೇಯಿಸುತ್ತಿದ್ದೆ : ಸಿದ್ದರಾಮಯ್ಯ
ನನ್ನ ವಿರುದ್ಧ ಅಭ್ಯರ್ಥಿ ಯಾರು ಎಂಬುದು ಇಲ್ಲಿ ಮುಖ್ಯವಲ್ಲ :
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಭರವಸೆಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದೇವೆ. ಅಸಲು ಮತ್ತು ಬಡ್ಡಿಯ ಮರುಪಾವತಿ 56,000 ಕೋಟಿ ರೂ ಆಗಿರುವಾಗ, ಈ ಯೋಜನೆಗಳಿಗೆ ನಾವು ರೂ 50,000 ಕೋಟಿ ನೀಡಲು ಸಾಧ್ಯವಿಲ್ಲವೇ? ವರುಣಾದಲ್ಲಿ ನಿಮ್ಮ ವಿರುದ್ಧ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು, ನಿಮ್ಮ ಗೆಲುವು ಕಷ್ಟವಾಗುತ್ತದೆ ಎಂದೆನಿಸುತ್ತದೆಯೇ? ಎಂಬ ಪ್ರಶ್ನೆಗೆ ಬಿಜೆಪಿಯನ್ನು ಎದುರಿಸಬೇಕು ಮತ್ತು ಬಿಜೆಪಿ ಮತ್ತು ಆರ್ಎಸ್ಎಸ್ ಸಿದ್ಧಾಂತಗಳ ವಿರುದ್ಧ ಹೋರಾಡಬೇಕಾಗಿರುವುದರಿಂದ ನನ್ನ ವಿರುದ್ಧ ಅಭ್ಯರ್ಥಿ ಯಾರು ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ ಎಂದರು.
ನನ್ನ ಪಕ್ಷದಲ್ಲಿ ನನಗೆ ಯಾವುದೇ ಶತ್ರುಗಳಿಲ್ಲ:
ವರುಣಾದಲ್ಲಿ 2008ರಲ್ಲಿ 28,000, 2013ರಲ್ಲಿ 31,000 ಮುನ್ನಡೆಯೊಂದಿಗೆ ಗೆಲುವು ಸಾಧಿಸಿದ್ದೆ. 2018ರಲ್ಲಿ ನನ್ನ ಮಗ 58,000 ಮತಗಳೊಂದಿಗೆ ಗೆಲವು ಸಾಧಿಸಿದ್ದ.ಈ ಬಾರಿಯೂ ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತೇನೆ. ನಿಮ್ಮನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದವಾಗಾದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ? ಎಂಬ ಪ್ರಶ್ನೆಗೆ
ವರುಣಾದಲ್ಲಿ ಜೆಡಿಎಸ್ ಮಾಜಿ ಶಾಸಕ ಭಾರತಿ ಶಂಕರ್ ಅವರನ್ನು ಕಣಕ್ಕಿಳಿಸುತ್ತಿರುವುದೇಕೆ? ಇದರ ಉದ್ದೇಶ ಪರಿಶಿಷ್ಟ ಜಾತಿ ಮತಗಳನ್ನು ವಿಭಜಿಸುವುದಾಗಿದೆ. .2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ವಿರುದ್ಧ ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆ ಅಭ್ಯರ್ಥಿ ಕೇವಲ 3 ಸಾವಿರ ಮತಗಳನ್ನು ಪಡೆದಿದ್ದರು . ಆದರೆ, ಬಿಜೆಪಿಯ ಸಂಪೂರ್ಣ ಮತಗಳು ಜೆಡಿಎಸ್ಗೆ ಸೇರಿದ್ದವು. ಇದನ್ನು ನೋಡಿದರೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಳಒಪ್ಪಂದವಾಗಿರುವುದು ಖಚಿತ. ನಿಮ್ಮ ಪಕ್ಷದೊಳಗೆ ನಿಮ್ಮ ವಿರುದ್ಧ ಶತ್ರುಗಳಿದ್ದಾರೆ ಎಂದು ನೀವು ಭಾವಿಸುವುದಿಲ್ಲವೇ? ನನ್ನ ಪಕ್ಷದಲ್ಲಿ ನನಗೆ ಯಾವುದೇ ಶತ್ರುಗಳಿಲ್ಲ.
ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದ್ದು, ಎಲ್ಲಾ ಸಮುದಾಯಗಳು ಮತಗಳು ಪಕ್ಷಕ್ಕೆ ಬಂದಿವೆ. ಎಲ್ಲಾ ಸಮುದಾಯಗಳನ್ನು ಗೌರವಿಸುವ ಏಕೈಕ ಪಕ್ಷ ನಮ್ಮದಾಗಿದೆ. ಖರ್ಗೆ ಅವರು ಸಿಎಂ ಆಕಾಂಕ್ಷಿಯಲ್ಲ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಶ್ರಮಿಸುತ್ತಿದ್ದೇವೆ ಮತ್ತು ಹೊಸದಾಗಿ ಆಯ್ಕೆಯಾದ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ. ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿದೆ ಎಂದರು.
ಕಾಂಗ್ರೆಸ್ 130ರಿಂದ 150 ಸ್ಥಾನದಲ್ಲಿ ಗೆಲ್ಲುತ್ತದೆ :
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 40 ಪರ್ಸೆಂಟ್ ಕಮಿಷನ್ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ? ಎಂಬ ಪ್ರಶ್ನೆಗೆ ನಾವು ವಿಶೇಷ ಆಯೋಗವನ್ನು ರಚಿಸುತ್ತೇವೆ ಮತ್ತು ಈ ಎಲ್ಲಾ ಆರೋಪಗಳ ತನಿಖೆ ನಡೆಸುವಂತೆ ಸೂಚನೆ ನೀಡಲಾಗುತ್ತದೆ. ಮೂರು ಪಕ್ಷಗಳ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ? ನನ್ನ ಪ್ರಕಾರ ಕಾಂಗ್ರೆಸ್ 130ರಿಂದ 150 ಸ್ಥಾನ, ಜೆಡಿಎಸ್ 20ರಿಂದ 25, ಬಿಜೆಪಿ 55ರಿಂದ 60 ಸ್ಥಾನ ಗೆಲ್ಲಬಹುದು ಎಂದರು.
‘ಆಪರೇಷನ್ ಕಮಲ’ ನಿಜವಾಗಿಯೂ ಕಾಳಜಿವಹಿಸಬೇಕಾದ ವಿಚಾರವೇ?
ನಾವು 115 ಅಥವಾ 120 ಸೀಟುಗಳನ್ನು ಪಡೆದರೆ, ಅವರು ಈ ಪ್ರಯತ್ನಗಳನ್ನು ಮಾಡುವ ಸಾಧ್ಯತೆಗಳಿವೆ. ಆದರೆ, ನಾವು ಕನಿಷ್ಠ 130 ಸೀಟುಗಳನ್ನು ಪಡೆಯುವುದರಿಂದ ಇಂತಹ ಪರಿಸ್ಥಿತಿ ಎದುರಾಗುವುದಿಲ್ಲ. ಈ ಆಪರೇಷನ್ ಕಮಲಕ್ಕೆ ನಾಂದಿ ಹಾಡಿದವರು ಯಡಿಯೂರಪ್ಪ. ಅದಕ್ಕೂ ಮೊದಲು ಕರ್ನಾಟಕದಲ್ಲಿ ಇಂತಹ ಪದ್ಧತಿ ಇರಲಿಲ್ಲ. ಅಧಿಕಾರ ಮತ್ತು ಹಣದ ಹೆಸರಿನಲ್ಲಿ ಅವರು ಪ್ರಯತ್ನಿಸಬಹುದು, ಆದರೆ. ಅವರು ಇಡೀ ಕಾಂಗ್ರೆಸ್ ಖರೀದಿ ಮಾಡಲು ಸಾಧ್ಯವಿಲ್ಲ ಎಂದರು.
ನಾವೂ ಕೂಡ ಒಳಮೀಸಲಾತಿ ನೀಡಲು ಬಯಸಿದ್ದೇವೆ. ಆದರೆ. ಭೋವಿ, ಕೊರ್ಚ ಮತ್ತಿತರ ಸಮುದಾಯಗಳು ಇದನ್ನು ವಿರೋಧಿಸಿವೆ. ಇದೂವರೆಗೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯ ಕಲಾಪದಲ್ಲಿ ಮಂಡಿಸಿಲ್ಲ. ವರದಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ನಾವು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ. ಬಿಜೆಪಿ ಸರಕಾರ ತರಾತುರಿಯಲ್ಲಿ ಈ ನಿರ್ಧಾರವನ್ನು ಕೈಗೊಂಡದೆ. ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸಿರುವುದರಿಂದ ಈಗ ಮೀಸಲಾತಿಯು ಶೇಕಡಾ 56 ರಷ್ಟಿದೆ. ಸದಾಶಿವ ವರದಿಯಲ್ಲಿ ಎಸ್ಸಿಗಳಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ಈಗ ಅದು ಶೇ 17ಕ್ಕೆ ಏರಿಕೆಯಾಗಿದೆ. ಎಸ್ಸಿ ಎಡಗೈಗೆ ಶೇ.6, ಎಸ್ಸಿ ಬಲಗೈಗೆ ಶೇ.5,5, ಸ್ಪೃಶ್ಯರಿಗೆ ಶೇ. 4.5 ಹಾಗೂ ಇತರರಿಗೆ ಶೇ. 1 ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿದೆ. ಆದರೆ. ಶೇ.17 ಹೆಚ್ಚಿಸಿದ ಮೀಸಲಾತಿ ಇನ್ನೂ ಮಾನ್ಯವಾಗಿಲ್ಲ. ಅಲ್ಲದೆ, ಮುಸ್ಲಿಮರಿಗೆ ನೀಡಿರುವ ಶೇ.4ರ ಮೀಸಲಾತಿಯನ್ನು ರದ್ದು ಪಡಿಸಿ, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿಸಲಾಗಿದೆ. ಇದು ಹೇಗೆ ಸಾಧ್ಯ? ಸಂವಿಧಾನದ ಕಲಂ 15 ಮತ್ತು 16 ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದು ಹೇಳುತ್ತದೆ ಎಂದರು.2024ರಲ್ಲಿ ಮೋದಿಯನ್ನು ಸೋಲಿಸಲು ಸಾಧ್ಯವೇ? ಯಾಕಿಲ್ಲ?
ಸಾಮಾನ್ಯ ಅಜೆಂಡಾ ಹೊಂದಿರುವ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿದರೆ ಬಿಜೆಪಿ ಮತ್ತು ಮೋದಿಯನ್ನು ಸೋಲಿಸಲು ಸಾಧ್ಯ. ಬಿಜೆಪಿ ಶೇ.60 ಅಥವಾ 70ರಷ್ಟು ಮತಗಳನ್ನು ಪಡೆದಿಲ್ಲ. ಅವರಿಗೂ ಶೇ.50ಕ್ಕಿಂತ ಕಡಿಮೆ ಮತಗಳಿವೆ.
ಚುನಾವಣೆ ಹತ್ತಿರ ಬರುತ್ತಿದ್ದು, ನಿಮ್ಮ ಆಹಾರಕ್ರಮ ಹೇಗಿರುತ್ತದೆ? ನಿಮ್ಮ ಬೆಳಗಿನ ಚಟುವಟಿಕೆಗಲು ಹೇಗಿರುತ್ತವೆ? ಮಾಂಸಾಹಾರ ಸೇವಿಸುವುದನ್ನು ಬಿಟ್ಟಿದ್ದೇನೆ. ಚುನಾವಣೆ ಮುಗಿಯುವವರೆಗೂ ಸಸ್ಯಾಹಾರ ಹಾಗೂ ಮೊಟ್ಟೆಯನ್ನೇ ಸೇವನೆ ಮಾಡುತ್ತೇನೆ.
ನಾನು ಹುಟ್ಟು ಮಾಂಸಾಹಾರಿಯಾದ ಕಾರಣ ಚುನಾವಣೆ ಪೂರ್ಣಗೊಂಡ ಬಳಿಕ ಮತ್ತೆ ಮಾಂಸಾಹಾರವನ್ನು ಸೇವನೆ ಪ್ರಾರಂಭಿಸುತ್ತೇನೆ. ನನ್ನ ಪ್ರಯಾಣದ ಸಮಯದಲ್ಲಿ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಕಾರಣದಿಂದ ಅದನ್ನೂ ನಿಲ್ಲಿಸಿದ್ದೇನೆ. ಬೆಳಗಿನ ವಾಕಿಂಗ್’ಗೆ ಸಮಯವಿಲ್ಲ ಎಂದು ಹೇಳಿದ್ದಾರೆ.