ಎಸ್.ಎ ರಾಮದಾಸ್‌ಗೆ ಪರೋಕ್ಷವಾಗಿ ಆಹ್ವಾನ ನೀಡಿದ ಸಿದ್ದರಾಮಯ್ಯ

Please follow and like us:

ಮೈಸೂರು :  ಕೆ.ಆರ್ ಕ್ಷೇತ್ರದಿಂದ ಹಾಲಿ ಶಾಸಕ ಎಸ್.ಎ ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ : ಮೋದಿಯವರ ಪ್ರಾಮಾಣಿಕ ಉತ್ತರಕ್ಕಾಗಿ ನಾನೂ ಕಾಯುತ್ತಿದ್ದೇನೆ : ಸಿದ್ದರಾಮಯ್ಯ

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿಯಲ್ಲಿ ಹಿರಿಯ ನಾಯಕರನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಆ ಸಾಲಿನಲ್ಲಿ ಎಸ್. ಎ ರಾಮದಾಸ್ ಕೂಡ ಒಬ್ಬರು. ನಮ್ಮ ಪಕ್ಷ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇನೆ ಎಂದು ಪರೋಕ್ಷವಾಗಿ ರಾಮದಾಸ್ ಅವರನ್ನು ಆಹ್ವಾನಿಸಿ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದರು.
ವರುಣಾಗೆ ವಿ.ಸೋಮಣ್ಣ ಬರಲು ಸಂತೋಷ್ ಕಾರಣ. ವರುಣಾದಲ್ಲಿ ಸ್ಪರ್ಧಿಸಲು ವಿ.ಸೋಮಣ್ಣಗೆ ಇಷ್ಟವಿರಲಿಲ್ಲ. ಆದರೂ ಒತ್ತಡ ಹೇರಿ ಕಣಕ್ಕಿಳಿಸಿದ್ದಾರೆ. ರಾಜ್ಯ ಬಿಜೆಪಿ ಒಬ್ಬ ವ್ಯಕ್ತಿಯ ಕಪಿಮುಷ್ಟಿಯಲ್ಲಿದೆ. ಸೋಮಣ್ಣಗೂ ವರುಣಾ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Please follow and like us:
Donate Janashakthi Media

Leave a Reply

Your email address will not be published. Required fields are marked *