ಜನಮತ 2023 : ಈಶ್ವರಪ್ಪ ನಿವೃತ್ತಿ ಘೋಷಣೆ ಬೆನ್ನಲ್ಲೇ ಮೇಯರ್, ಉಪಮೇಯರ್ ಸೇರಿ 19 ಸದಸ್ಯರಿಂದ ರಾಜೀನಾಮೆ

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ದಿನಾಂಕವು ಘೋಷಣೆಯಾಗಿದ್ದು, ನೀತಿ ಸಂಹಿತೆಯು ಜಾರಿಯಾಗಿದ್ದು ಪಕ್ಷಾಂತರ ಪರ್ವವೂ ಅಷ್ಟೇ ಚುರುಕಿನಿಂದ ಆರಂಭಗೊಂಡಿದೆ. ಬಿಜೆಪಿ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಕೈ ತಪ್ಪಿದ ಟಿಕೆಟ್ ಆಕಾಂಕ್ಷಿಗಳು ಬಂಡಾಯ ಎದ್ದಿದ್ದಾರೆ. ಇದರ ನಡುವೆ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈಶ್ವರಪ್ಪ ಅವರು ಚುನಾವಣೆಯಿಂದ ಹಿಂದೆ ಸರಿದಿರುವುದಕ್ಕೆ ಕಾರ್ಯಕರ್ತರು, ಬೆಂಬಲಿಗರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಶಿವಮೊಗ್ಗ ಪಾಲಿಕೆ ಬಿಜೆಪಿ ಸದಸ್ಯರು ಪಕ್ಷದ ವಿವಿಧ ಜವಾಬ್ದಾರಿಗಳಿಗೆ ಸಾಮೂಹಿಕ‌ ರಾಜೀನಾಮೆ ಸಲ್ಲಿಸಿದ್ದಾರೆ. ಮೇಯರ್, ಉಪಮೇಯರ್ ಸೇರಿ 19 ಸದಸ್ಯರು ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಹಾಗೂ ಬೆಂಗಳೂರಿಗೆ ತೆರಳಿ ಯಡಿಯೂರಪ್ಪ ಭೇಟಿಯಾಗಲು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿನನಗೆ ಯಾವುದೇ ಒತ್ತಡವೂ ಇರಲಿಲ್ಲ, ಸ್ವ ಇಚ್ಛೆಯಿಂದಲೇ ನಿವೃತ್ತಿ : ಕೆ.ಎಸ್‌ ಈಶ್ವರಪ್ಪ

ಕೆಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ನೀಡಲಾಗುವುದಿಲ್ಲ ಎನ್ನುವ ಕಾರಣಕ್ಕೆ ಅವರಿಂದ ಬಲವಂತವಾಗಿ ರಾಜಕೀಯ ನಿವೃತ್ತಿ ಘೋ‍ಷಣೆ ಮಾಡಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕೆಲವರು ಟಿಕೆಟ್ ನೀಡದಿದ್ದರೆ ಮುಜಗರ ಆಗಬಹುದು ಎನ್ನುವ ಕಾರಣಕ್ಕೆ ಟಿಕೆಟ್ ಘೋಷಣೆಗೆ ಕೆಲವು ಗಂಟೆಗಳ ಮುಂಚೆ ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ಶಿವಮೊಗ್ಗ ಬಿಜೆಪಿ ಜಿಲ್ಲಾ ಕಚೇರಿ ಎದುರು ಕಾರ್ಯಕರ್ತರು ಮತ್ತು ಈಶ್ವರಪ್ಪ ಆಭಿಮಾನಿಗಳು ಧರಣಿ ನಡೆಸಿದ್ದಾರೆ. ಬಿಜೆಪಿ ಕಚೇರಿಯ ಮುಂಭಾಗದ ದೀನ ದಯಾಳ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈಶ್ವರಪ್ಪ ಪುತ್ರ ಕಾಂತೇಶ್​ಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಚುನಾವಣಾ ರಾಜಕಾರಣಕ್ಕೆ ಕೆ.ಎಸ್‌. ಈಶ್ವರಪ್ಪ ನಿವೃತ್ತಿ

K.S.ಈಶ್ವರಪ್ಪ ನಿವೃತ್ತಿ ಸ್ವಲ್ಪ ಆಘಾತಕಾರಿ ಮತ್ತು ಬೇಸರವಾಗಿದೆ ಎಂದು ಶಿವಮೊಗ್ಗದಲ್ಲಿ ಎಂಎಲ್​ಸಿ ಆಯನೂರು ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ವ್ಯಕ್ತಿಗತವಾಗಿ ದ್ವೇಷಿಗಳು ಕಡಿಮೆ. ಉತ್ತಮವಾಗಿ ಕೆಲಸ ಮಾಡ್ತಿದ್ದರೂ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಈಶ್ವರಪ್ಪ ನಾಲಗೆ, ಮನೆಯಲ್ಲಿರುವ ವೈರಿಯಿಂದಾಗಿ ಟಿಕೆಟ್ ಸಿಕ್ಕಿಲ್ಲ. ಪುತ್ರ ವ್ಯಾಮೋಹದಿಂದ ಹೊರ ಬಂದಿದ್ದರೆ ಸ್ಪರ್ಧಿಸಬಹುದಿತ್ತು. ತನ್ನದಲ್ಲದ ತಪ್ಪಿಗೆ ಈಶ್ವರಪ್ಪ ರಾಜಕೀಯದಿಂದ ನಿವೃತ್ತಿ ಆಗಿದ್ದಾರೆ. ಕೆ.ಎಸ್.ಈಶ್ವರಪ್ಪ ನಿವೃತ್ತಿಗೆ ಕಾರ್ಯಕರ್ತರು, ಪಕ್ಷ ಕಾರಣವಲ್ಲ. ಪುತ್ರನಿಂದಾಗಿ K.S.ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈಶ್ವರಪ್ಪ ಯಾವತ್ತೂ ನನ್ನ ಟಾರ್ಗೆಟ್ ಆಗಿರಲಿಲ್ಲ. ಈಶ್ವರಪ್ಪ ಬದಲು ನನಗೆ ಟಿಕೆಟ್​​​ ನೀಡಿ ಎಂದು ಕೇಳಿದ್ದೇನೆ ಅಷ್ಟೇ ಎಂದು ಶಿವಮೊಗ್ಗದಲ್ಲಿ ಎಂಎಲ್​ಸಿ ಆಯನೂರು ಮಂಜುನಾಥ್ ತಿಳಿಸಿದರು

Donate Janashakthi Media

Leave a Reply

Your email address will not be published. Required fields are marked *