ನವದೆಹಲಿ: ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023-24ನೇ ಸಾಲಿನ ಈ ಬಾರಿ ಕೆಲ ತೆರಿಗೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, ಇದರ ಪರಿಣಾಮ ಕೆಲವೊಂದಷ್ಟು ವಸ್ತುಗಳ ಬೆಲೆಯಲ್ಲಿಯೂ ಏರಿಳಿಕೆ ಆಗಿದೆ.
ಸಿಗರೇಟು ಮತ್ತು ಚಿನ್ನ ಸೇರಿದಂತೆ ಕೆಲವು ವಸ್ತುಗಳ ಬೆಲೆಗಳೂ ಏರಿವೆ. ಸಿಗರೇಟು ಬೆಲೆ ಶೇ. 16ರಷ್ಟು ಹೆಚ್ಚುವ ಸಾಧ್ಯತೆ ಇದೆ. ಗೋಲ್ಡ್ ಬಾರ್ ಗಳಿಂದ ಮಾಡಿದ ಆರ್ಟಿಕಲ್ಗಳ ಮೇಲಿನ ಬೇಸಿಕ್ ಕಸ್ಟಮ್ಸ್ ಡ್ಯೂಟಿಯನ್ನು ಹೆಚ್ಚಿಸಲಾಗಿದೆ.
ದುಬಾರಿಯಾಗಲಿರುವ ವಸ್ತುಗಳು:
ಸಿಗರೇಟು, ಚಿನ್ನ, ಬೆಳ್ಳಿ, ಆಮದಿತ ರಬ್ಬರ್, ಆಮದಿತ ಬೆಳ್ಳಿ ವಸ್ತು, ಎಲೆಕ್ಟ್ರಿಕ್ ಅಡುಗೆ ಚಿಮಣಿ, ವಜ್ರ, ಪ್ಲಾಟಿನಮ್, ವಿದೇಶಿ ವಾಹನಗಳು, ಬ್ರಾಂಡೆಡ್ ಬಟ್ಟೆ, ಎಕ್ಸ್ರೇ, ಮೊಬೈಲ್ ಉಪಕರಣಗಳು, ವೈದ್ಯಕೀಯ ಉತ್ಪನ್ನಗಳು.
ಅಗ್ಗವಾಗಲಿರುವ ವಸ್ತುಗಳು:
ಎಲೆಕ್ಟ್ರಿಕ್ ವಾಹನ, ಸೈಕಲ್, ಆಟಿಕೆ, ಆಟೋಮೊಬೈಲ್, ಟಿವಿಗಳು, ಎಲ್ಇಡಿ ಟಿವಿ, ಮೊಬೈಲ್ ಫೋನ್, ಕ್ಯಾಮೆರಾ ಲೆನ್ಸ್, ಜವಳಿ, ಇಂಗು, ಕೋಕೋಮ್, ಜೈವಿಕ ಅನಿಲ ಆಧಾರಿತ ಉತ್ಪನ್ನಗಳು. ಸೀಮೆಂಟ್, ಉಕ್ಕು ಪೂರೈಕೆ.