ಜೂನ್ 21, 2012 ರ `ಪೀಪಲ್ಸ್ ಡೆಮಾಕ್ರಸಿ’ ಸಂಪಾದಕೀಯದಿಂದ
ಸಂಪುಟ – 06, ಸಂಚಿಕೆ 27, ಜುಲೈ 01, 2012
ಭಾರತ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಕಾಣಿಕೆ ನೀಡಿದರೆ, ಯುರೋವಲಯದ ಪುನಶ್ಚೇತನ ಒಂದು ಹೊಸ ಹಣಕಾಸು ಗುಳ್ಳೆಯನ್ನು ಸೃಷ್ಟಿಸುತ್ತದೆ, ಅದರ ವಿಸ್ತರಣೆ ಭಾರತಕ್ಕೆ ಹೆಚ್ಚಿನ ಹಣಕಾಸನ್ನು ಲಭ್ಯಗೊಳಿಸಿ ಪ್ರಯೋಜನಕಾರಿಯಾಗಬಹುದು ಎಂಬುದು ಪ್ರಧಾನ ಮಂತ್ರಿಗಳ ನಿರೀಕ್ಷೆ ಎಂಬುದಂತೂ ಸ್ಪಷ್ಟ. ಪ್ರಸಕ್ತ ಬಿಕ್ಕಟ್ಟು ಮತ್ತು ಅಭಿವೃದ್ಧಿ ಹೊಂದಿದ ದೇಶಗಳನ್ನು ಆವರಿಸಿಕೊಂಡಿರುವ ಹಿಂಜರಿತದಿಂದ ಏನೇನೂ ಪಾಠ ಕಲಿತಿರುವಂತೆ ಕಾಣುತ್ತಿಲ್ಲ. ಗುಳ್ಳೆಗಳು ಕೊನೆಗೆ ಒಡೆಯಲೇ ಬೇಕು ತಾನೇ? ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಆದೇಶಗಳನ್ನು ಅನುಸರಿಸುವ ಇಂತಹ ನವ-ಉದಾರವಾದಿ ಮಾನಸಿಕತೆಯನ್ನು ಕೈಬಿಟ್ಟು ನಮ್ಮ ದೇಶೀ ಬೇಡಿಕೆಗಳನ್ನು ಬಲಪಡಿಸಬಹುದಾದ ಮತ್ತು ದೇಶೀ ಆಥರ್ಿಕವನ್ನು ವಿಸ್ತರಿಸಬಹುದಾದ ಧೋರಣೆಗಳನ್ನು ಅನುಸರಿಸಿದರೆ ಮಾತ್ರ ಭಾರತೀಯ ಆಥರ್ಿಕ ಉತ್ತಮಗೊಳ್ಳಲು ಸಾಧ್ಯ.
ಮೆಕ್ಸಿಕೋದ ಲೊಸ್ ಕಬೊಸ್ನಲ್ಲಿ ಜಿ-20 ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಜಾಗತಿಕ ದಾನಶೂರನಾಗಿ ಬಿಟ್ಟಿದ್ದಾರೆ. ಯುರೋವಲಯ ಪ್ರಸಕ್ತ ತೀವ್ರ ಆಥರ್ಿಕ ಬಿಕ್ಕಟ್ಟಿನಿಂದ ಹೊರಬರುವಲ್ಲಿ ನೆರವಾಗಲು ಅಂತರ್ರಾಷ್ಟ್ರೀಯ ಹಣಕಾಸು ನಿಧಿಗೆ 10 ಬಿಲಿಯ(ಒಂದು ಸಾವಿರ ಕೋಟಿ) ಡಾಲರುಗಳ ವಾಗ್ದಾನ ಮಾಡಿದ್ದಾರೆ. ಇದು ಒಂದು ಹೈದರಾಬಾದೀ ಗಾದೆಯನ್ನು ನೆನಪಿಸುತ್ತದೆ-ಬಾಹರ್ ಶೇರ್ವಾನಿ, ಅಂದರ್ ಪರೇಶಾನಿ(ಅಂದರೆ ಹೊರನೋಟಕ್ಕೆ ರಾಜಗಾಂಭೀರ್ಯ, ಒಳಗಿನ ಗಂಭೀರ ಸಮಸ್ಯೆಗಳನ್ನು ಮರೆಮಾಚಲಿಕ್ಕಾಗಿಯಷ್ಟೇ). ಈಗಿನ ವಿನಿಮಯ ದರದಲ್ಲಿ ಇದು 56,000 ಕೋಟಿ ರೂ. ಆಗುತ್ತದೆ.
ಈ ಮಹಾ ಔದಾರ್ಯ ಪ್ರಕಟವಾಗಿರುವುದು ಭಾರತೀಯ ಜನತೆ ಎಲ್ಲ ಆವಶ್ಯಕ ಸರಕುಗಳ ಬೆಲೆಗಳ ನಿರಂತರ ಬೆಲೆಯೇರಿಕೆಗಳಿಂದ ಹೆಚ್ಚೆಚ್ಚು ಹೊರೆಗಳನ್ನು ಹೊರಬೇಕಾಗಿ ಬರುತ್ತಿರುವ ಸಮಯದಲ್ಲಿ. ಇದೂ ಸಾಲದೆಂಬಂತೆ, ತೈಲ ಕಂಪನಿಗಳ ಕಡಿಮೆ ವಸೂಲಾತಿ ಏರುತ್ತಿದೆ ಎಂಬ ಹೆಸರಿನಲ್ಲಿ ಇತ್ತೀಚೆಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಿಸಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಿಸಲು ಈ ನೆವವೊಡ್ಡಿ ಜನಗಳಿಗೆ ಎಂತಹ ಬೃಹತ್ ಮೋಸ ಎಸಗಲಾಗುತ್ತಿದೆ ಎಂಬುದನ್ನು ಈ ಅಂಕಣದಲ್ಲಿ ಹಿಂದೆ ನೋಡಿದ್ದೇವೆ. ಆಥರ್ಿಕವಾಗಿ ಮುಂದುವರೆದಿರುವ ಯುರೋಪಿಯನ್ ಒಕ್ಕೂಟದ ನೆರವಿಗೆ ಮುಂದಾಗುವ ಬದಲು, ಭಾರತ ಈ ಹಣವನ್ನು ಈಗಾಗಲೇ ನರಳುತ್ತಿರುವ ಜನತೆಯ ಮೇಲೆ ಇನ್ನಷ್ಟು ಹೊರೆ ಹಾಕುವುದನ್ನು ತಪ್ಪಿಸಲು ಬಳಸಬಹುದಾಗಿತ್ತು.
ಪ್ರಬುದ್ಧ ನೆರವಿನ ಹಿಂದೆ
ಆದರೆ ಭಾರತ ವಾಗ್ದಾನ ಮಾಡಿರುವ ಈ 10 ಬಿಲಿಯ ಡಾಲರುಗಳು ಪ್ರಬುದ್ಧ ನೆರವು-ಸಂಕಟದಲ್ಲಿರುವ ಪ್ರಮುಖ ವ್ಯಾಪಾರೀ ಜೊತೆಗಾರನಿಗೆ ಮಾಡುವ ನೆರವು ಎಂದು ನಮಗೆ ತಿಳಿ ಹೇಳಲಾಗುತ್ತಿದೆ. ಜಗತ್ತಿನ ಜಿಡಿಪಿಯ 80 ಶೇಕಡಾವನ್ನು ಪ್ರತಿನಿಧಿಸುವ ಪ್ರಭುತ್ವಗಳ ಮುಖ್ಯಸ್ಥರ ಈ ಸಭೆಯಲ್ಲಿ ಪ್ರಧಾನ ಮಂತ್ರಿಗಳ ಭಾಷಣದಲ್ಲಿ ಭಾರತ ಒದಗಿಸುವ ಈ ನೆರವು ಯುರೋವಲಯದ ಪುನಶ್ಚೇತನಕ್ಕೆ ನೀಡುವ ಕಾಣಿಕೆ ಎಂಬ ತರ್ಕವಿತ್ತು. ಯುರೋವಲಯದಲ್ಲಿ ಆಥರ್ಿಕ ಬೆಳವಣಿಗೆ ಮತ್ತೆ ಶುರುವಾದರೆ, ಅದು ಒಂದು ಅಲೆಯಂತೆ ಭಾರತದ ಆಥರ್ಿಕದ ಹಡಗನ್ನೂ ಮೇಲಕ್ಕೆತ್ತಬಲ್ಲದು ಎಂಬ ಕಲ್ಪನೆ ಇದರ ಹಿಂದಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೂಲರಚನೆಯಲ್ಲಿ ಹೂಡಿಕೆಯ ವಿಸ್ತರಣೆ, ಅವರಿಗೆ ಈ ಹೂಡಿಕೆಗೆ ದೀರ್ಘಕಾಲದ ಬಂಡವಾಳಕ್ಕೆ ಅವಕಾಶ ಸಿಕ್ಕರೆ ಮಾತ್ರ ಸಾಧ್ಯ. ಬಂಡವಾಳದ ಹರಿವುಗಳಿಗೆ ಅಡೆ-ತಡೆ ಬಂದಿರುವ ಸಮಯದಲ್ಲಿ ಇದು ಕಷ್ಟಕರ ಎಂದು ಪ್ರಧಾನಮಂತ್ರಿಗಳು ಹೇಳಿದರು.
ಭಾರತ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಕಾಣಿಕೆ ನೀಡಿದರೆ, ಯುರೋವಲಯದ ಪುನಶ್ಚೇತನ ಒಂದು ಹೊಸ ಹಣಕಾಸು ಗುಳ್ಳೆಯನ್ನು ಸೃಷ್ಟಿಸುತ್ತದೆ, ಅದರ ವಿಸ್ತರಣೆ ಭಾರತಕ್ಕೆ ಹೆಚ್ಚಿನ ಹಣಕಾಸನ್ನು ಲಭ್ಯಗೊಳಿಸಿ ಪ್ರಯೋಜನಕಾರಿಯಾಗಬಹುದು ಎಂಬುದು ಪ್ರಧಾನ ಮಂತ್ರಿಗಳ ನಿರೀಕ್ಷೆ ಎಂಬುದಂತೂ ಸ್ಪಷ್ಟ. ಪ್ರಸಕ್ತ ಬಿಕ್ಕಟ್ಟು ಮತ್ತು ಅಭಿವೃದ್ಧಿ ಹೊಂದಿದ ದೇಶಗಳನ್ನು ಆವರಿಸಿಕೊಂಡಿರುವ ಹಿಂಜರಿತದಿಂದ ಏನೇನೂ ಪಾಟ ಕಲಿತಿರುವಂತೆ ಕಾಣುತ್ತಿಲ್ಲ. ಗುಳ್ಳೆಗಳು ಕೊನೆಗೆ ಒಡೆಯಲೇ ಬೇಕು, ಹಾಗಾದಾಗ ಬಿಕ್ಕಟ್ಟಿನ ಹೊಸದೊಂದು ಸುತ್ತು ಜಾಗತಿಕ ಆಥರ್ಿಕವನ್ನು ಆವರಿಸಿಕೊಳ್ಳುತ್ತದೆ, ಜಗತ್ತಿನ ಜನಸಂಖ್ಯೆಯ ವಿಶಾಲ ಜನಸಮೂಹಗಳ ಮೇಲೆ ಅಭೂತಪೂರ್ವ ಹೊರೆಗಳನ್ನು, ಸಂಕಟಗಳನ್ನು ಹೇರುತ್ತದೆ.
ಆದ್ದರಿಂದ, ಯುರೋಪಿನ ಒಂದು ಪುನಶ್ಚೇತನಕ್ಕೆ ಕಾಯುವ ಬದಲು, ಪ್ರಧಾನ ಮಂತ್ರಿಗಳು ತಾವು ವಾಗ್ದಾನ ಮಾಡಿದ ಅದೇ ಸಂಪನ್ಮೂಲಗಳನ್ನು ನಮ್ಮ ಬಹು ಆವಶ್ಯಕವಾಗಿರುವ ಮೂಲಸೌಕರ್ಯಗಳನ್ನು ಕಟ್ಟಲು ಸಾರ್ವಜನಿಕ ಹೂಡಿಕೆಗಳಲ್ಲಿ ಒಂದು ಬೃಹತ್ ವಿಸ್ತರಣೆಗೆ ಬಳಸಬಹುದಾಗಿತ್ತು. ಇದು ದೇಶದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ನಿಮರ್ಿಸುತ್ತಿತ್ತು, ಅದರ ಪರಿಣಾಮವಾಗಿ ನಮ್ಮ ದೇಶದ ಆಥರ್ಿಕದಲ್ಲಿ ಒಟ್ಟು ಆಂತರಿಕ ಬೇಡಿಕೆಯನ್ನು ವ್ಯಾಪಕವಾಗಿ ವಿಸ್ತರಿಸಬಹುದಾಗಿತ್ತು, ಅಮೂಲಕ ಒಂದು ಬಹುತಾಳಿಕೆಯ ಬೆಳವಣಿಗೆಯ ದಿಕ್ಪಥಕ್ಕೆ ಆಧಾರ ನಿಮರ್ಾಣವಾಗುತ್ತಿತ್ತು. ಬದಲಿಗೆ, ಅವರು ಯುರೋಪಿಯನ್ ಒಕ್ಕೂಟಕ್ಕೆ ನೆರವಿನ ವಾಗ್ದಾನವನ್ನು ಆರಿಸಿಕೊಂಡರು. ಇದು ಜನಗಳ ಮೇಲೆ ಇನ್ನಷ್ಟು ಹೊರೆಗಳನ್ನು ಹಾಕುವ ಮೂಲಕ ಮಾತ್ರ ಸಾಧ್ಯ. ಇದನ್ನು ಸರಕಾರ ಪರೋಕ್ಷ ತೆರಿಗೆಗಳನ್ನು ಹೆಚ್ಚಿಸಿ ಜನಗಳಿಂದ ಸಂಗ್ರಹಿಸಿದ ಹಣದಿಂದ ಮಾಡಬೇಕು, ಇಲ್ಲವೇ ಈಗಾಗಲೇ ಹೆಚ್ಚಿರುವ ಹಣಕಾಸು ಕೊರತೆಯನ್ನು ಇನ್ನಷ್ಟು ಹೆಚ್ಚಿಸಿ ಮಾಡಬೇಕು. ಒಂದು ವೇಳೆ ಹಣಕಾಸು ಕೊರತೆಯನ್ನು ಹೆಚ್ಚಿಸಿ ಮಾಡಿದರೆ, ಅದನ್ನೇ ಬೆದರುಗೊಂಬೆಯಾಗಿ ಮಾಡಿಕೊಂಡು ಈಗಾಗಲೇ ಅಲ್ಪಪ್ರಮಾಣಕ್ಕೆ ಇಳಿದಿರುವ ಸಬ್ಸಿಡಿಗಳನ್ನು ಸಂಪೂರ್ಣವಾಗಿ ತೆಗೆಯದಿದ್ದರೂ ಇನ್ನಷ್ಟು ಇಳಿಸಲು ಪ್ರಯತ್ನ ನಡೆಯುತ್ತದೆ. ಒಟ್ಟಿನಲ್ಲಿ ಈ ವಾಗ್ದಾನದ ಹೊರೆಗಳನ್ನು ಹೊರಬೇಕಾದವರು ಜನಸಾಮಾನ್ಯರೇ.
ಸ್ವಂತ ದೇಶಕ್ಕೆ ಅನ್ವಯಿಸದೇ?
ಆದರೆ, ಪ್ರಧಾನಮಂತ್ರಿಗಳು ಯುರೋಪಿಯನ್ ಒಕ್ಕೂಟಕ್ಕೆ ನೀಡಿರುವ ತರ್ಕವನ್ನು ನಮ್ಮದೇ ಸ್ವಂತ ಆಥರ್ಿಕಕ್ಕೆ ಬಳಸುವಂತೆ ಕಾಣುತ್ತಿಲ್ಲ. ಯುರೋವಲಯದ ಸಾಲಗ್ರಸ್ತ ಸದಸ್ಯ ದೇಶಗಳಲ್ಲಿ ಮಿತವ್ಯಯದ ಕ್ರಮಗಳು ಕೆಲಸ ಮಾಡಬೇಕಾದರೆ, ಹೆಚ್ಚುವರಿ ಇರುವ ಸದಸ್ಯ ದೇಶಗಳು ಯುರೋ ಕರೆನ್ಸಿ ಪ್ರದೇಶದಲ್ಲಿ ಇತರೆಡೆಗಳಲ್ಲಿ ಆಗಿರುವ ಕುಗ್ಗಿಕೆಯನ್ನು ಸರಿಹೊಂದಿಸುವ ವಿಸ್ತರಣೆ ಮಾಡಲು ಸಿದ್ಧವಿದ್ದರೆ ಮಾತ್ರ ಸಾಧ್ಯ ಎಂದು ಅವರು ಅಲ್ಲಿ ನೆರೆದಿದ್ದ ಜಿ-20 ಸಭಿಕರಿಗೆ ಹೇಳಿದರು. ಅವರು ಯುರೋವಲಯದ ಅತ್ಯಂತ ಬಲಿಷ್ಟ ಆಥರ್ಿಕವಾದ ಜರ್ಮನಿ ಆಂತರಿಕ ಹಣದುಬ್ಬರಕ್ಕೆ ಭಯಪಡದೆ ತನ್ನ ಆಥರ್ಿಕವನ್ನು ಸಡಿಲಗೊಳಿಸಬೇಕು ಎಂದು ಸೂಚಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಆದರೆ ಜರ್ಮನಿ ಇಂತಹ ಕೃತಜ್ಞಾಪೂರ್ವಕವಾದ ಸಲಹೆಗೆ ಕಿವಿಗೊಡುತ್ತದೆ ಎಂಬುದಂತೂ ದೂರದ ಮಾತು. ಇಲ್ಲಿ ನಮ್ಮಲ್ಲಿಯೇ ಬೃಹತ್ ಸಾರ್ವಜನಿಕ ಹೂಡಿಕೆಗಳ ಮೂಲಕ ಭಾರತೀಯ ಆಥರ್ಿಕವನ್ನು ವಿಸ್ತರಿಸುವ ಬದಲು, ನಮ್ಮ ಪ್ರಧಾನ ಮಂತ್ರಿಗಳು ಜಾಗತಿಕ ದಾನಶೂರರಾಗಿ ಬಿಟ್ಟಿದ್ದಾರೆ. ಆದರೆ ಭಾರತ ಇಂತಹ ಪಾತ್ರವನ್ನು ನಮ್ಮದೇ ಬಹುಪಾಲು ಜನಗಳನ್ನು ಹಸಿವು, ಸಂಕಟದಲ್ಲಿಟ್ಟು ಮಾಡಲು ಶಕ್ಯವೇ? ನಮ್ಮ ಸ್ವಂತ ಆಮ್ ಆದ್ಮಿಯ ಬದಲು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಸೇವೆಗೆ ನಿಲ್ಲುವುದೇ ಗುರಿಯಾದಾಗ ಆಗುವುದು ಇದೇ.
ಪ್ರಧಾನ ಮಂತ್ರಿಗಳು ಆಗಾಗ ಪ್ರಬುದ್ಧ ರಾಷ್ಟ್ರೀಯ ಹಿತಾಸಕ್ತಿ ಎಂಬ ಪದಗುಚ್ಛವನ್ನು ತಮ್ಮ ಸರಕಾರದ ಧೋರಣೆಗಳ ಮಾರ್ಗದರ್ಶಕ ನೀತಿಯೆಂಬಂತೆ ಬಳಸುತ್ತಾರೆ. ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಪ್ರಬುದ್ಧ ನೆರವು ನೀಡುವುದು ನಮ್ಮ ಪ್ರಬುದ್ಧ ರಾಷ್ಟ್ರೀಯ ಹಿತಾಸಕ್ತಿಯನ್ನು ಈಡೇರಿಸುತ್ತದೆಯೇ?
ಭಾರತೀಯ ಆಥರ್ಿಕ ಒಂದು ಜಾರುದಾರಿಯಲ್ಲಿ ಸಾಗಿದ್ದು, ಅಲ್ಲಿಂದ ಹಿಂದಿರುಗಲು ಸಾಧ್ಯವಿಲ್ಲವೇನೋ ಎಂಬಂತೆ ಕಾಣುತ್ತಿರುವಾಗ, ಈ ಜಾರುದಾರಿಯನ್ನು ತಪ್ಪಿಸಬೇಕಾದರೆ ಇರುವ ಏಕೈಕ ದಾರಿಯೆಂದರೆ ಆಂತರಿಕ ಬೇಡಿಕೆಯನ್ನು ವಿಸ್ತರಿಸುವುದರ ಮೇಲೆ ಗಮನ ಕೇಂದ್ರೀಕರಿಸುವುದು; ಅದು ಬೆಳವಣಿಗೆಗೆ ಅಗತ್ಯವಾದ ಉತ್ತೇಜನೆಯನ್ನು ನೀಡಬಲ್ಲದು. ಅಂತಿಮ ವಿಶ್ಲೇಷಣೆಯಲ್ಲಿ, ಭಾರತವನ್ನು ಜಾಗತಿಕ ವ್ಯವಸ್ಥೆಯಲ್ಲಿ ಲೆಕ್ಕಕ್ಕೆ ತಗೊಳ್ಳುವುದು ಅದರ ಆಂತರಿಕ ಆಥರ್ಿಕದ ಬಲದ ಮೇಲೆಯೇ ತಾನೇ? ಎಷ್ಟೇ ದಾನಶೂರತೆ ಮೆರೆದರೂ ಇದನ್ನು ಪೂರೈಸಲು ಸಾಧ್ಯವಿಲ್ಲ. ಬದಲಿಗೆ, ನಮ್ಮ ಸ್ವಂತ ಜನಗಳ ಮತ್ತು ದೇಶೀ ಆಥರ್ಿಕದ ಹಿತಗಳನ್ನು ಬಲಿಗೊಡುವ ದಾನಶೂರತೆ ಯಾವ ಕಾರಣಕ್ಕೂ ಒಪ್ಪತಕ್ಕಂತದಲ್ಲ.
ಸಲಹೆ ಕೇಳಲು ಬಂದವರಲ್ಲ
ಅಷ್ಟೇ ಅಲ್ಲ, ಇಂತಹ ಘನ ಕಾಣಿಕೆಗಳು ಯುರೋ ವಲಯಕ್ಕೆ ಪುನಶ್ಚೇತನದಲ್ಲಿ ನೆರವಾಗುತ್ತವೆ ಎಂಬ ನಿರೀಕ್ಷೆಗಳು ತರ್ಕಬದ್ಧವೆನಿಸುವುದಿಲ್ಲ. ಯುರೋಪಿಯನ್ ಒಕ್ಕೂಟದ ಸರಕಾರೀ ಮುಖ್ಯಸ್ಥರು ಮುಂದಿನ ವಾರ ಸಭೆ ಸೇರಲಿದ್ದಾರೆ, ಅಲ್ಲಿ ತಮ್ಮ ಸಮಸ್ಯೆಗಳ ಬೆಳೆಯುತ್ತಿರುವ ಪಟ್ಟಿಯನ್ನು ಎದುರಿಸುವುದು ಹೇಗೆ ಎಂದು ಚಚರ್ಿಸಲಿದ್ದಾರೆ. ಗ್ರೀಸಿನಲ್ಲಿ ಅದನ್ನು ಆಥರ್ಿಕವಾಗಿ ಪಾರು ಮಾಡಲು ಯುರೋಪು ರೂಪಿಸಿರುವ ಕಾರ್ಯವ್ಯೂಹ ವನ್ನು ಜಾರಿ ಮಾಡುವ ಪಣ ತೊಟ್ಟಿರುವ ಮಧ್ಯ-ಬಲಪಂಥೀಯ ನ್ಯೂ ಡೆಮಾಕ್ರಸಿ ಪಾಟರ್ಿ ವಿಜಯ ಗಳಿಸಿದ್ದರೂ, ಗ್ರೀಸಿನ ಆಥರ್ಿಕ ಕೃತಕ ಉಸಿರಾಟದಲ್ಲೇ ಮುಂದುವರೆಯಬೇಕಾಗುತ್ತದೆ. ಸ್ಪೇನ್, 100 ಬಿಲಿಯ ಯುರೋಗಳ ಪಾರುಯೋಜನೆಯ ನಂತರವೂ, ತನ್ನ ಸಾಲಪಾವತಿ ಶಕ್ತಿಯ ಎಲ್ಲೇ ಮೀರಿ ದಿವಾಳಿಯತ್ತ ಕಾಲಿಟ್ಟಿದೆ. ಮಾರುಕಟ್ಟೆಗಳು ಸ್ಪೇನಿನ ಬ್ಯಾಂಕ್ ಕೇಂದ್ರಿತ ಪಾರುಯೋಜನೆಯನ್ನು ಒಂದು ಬಸಿರಿನ ಸ್ಥಿತಿಯೆಂದು ಪರಿಗಣಿಸುತ್ತವೆ; ಭಾಗಶಃ ಬಸಿರು ಎಂಬುದಿಲ್ಲ ಎಂದು ಸಾರ್ವಭೌಮ ಸಾಲಭೀತಿಯನ್ನು ಅಂದಾಜು ಮಾಡುವ ಒಂದು ಲಂಡನ್ನಿನ ಸಂಸ್ಥೆ ಹೇಳಿದೆ. ಇಟೆಲಿ ಈ ದಾರಿಯನ್ನು ಅನುಸರಿಸುವ ಮುಂದಿನ ದೇಶವಾಗುವಂತೆ ಕಾಣುತ್ತಿದೆ.
ಈ ನಡುವೆ, ಗ್ರೀಸಿಗೆ ಹೊಸ ನೆರವೇನೂ ಸಾಧ್ಯವಿಲ್ಲ ಎಂದು ಜರ್ಮನಿ ಹೇಳಿದೆ. ಗ್ರೀಕ್ ಸರಕಾರ ವಚನಗಳನ್ನು ಪಾಲಿಸುತ್ತದೆ, ಪಾಲಿಸಲೇ ಬೇಕು. ನಮ್ಮ ಸುಧಾರಣಾ ಹೆಜ್ಜೆಗಳನ್ನು ಸಡಿಲಗೊಳಿಸಲಾಗದು ಎಂದು ಜರ್ಮನಿಯ ಚಾನ್ಸಲರ್, ಅಂಜೆಲಾ ಮೆಕರ್ೆಲ್ ಜಿ-20 ಶೃಂಗಸಭೆಗೆ ಹೇಳಿದ್ದಾರೆ. ಈ ಹೆಜ್ಜೆಗಳೆಂದರೆ, ಗ್ರೀಸ್ ತನ್ನ 2013-14ರ ಬಜೆಟ್ ಗುರಿಗಳನ್ನು ಈಡೇರಿಸಲು 14.7 ಬಿಲಯ ಡಾಲರುಗಳನ್ನು ಹೆಚ್ಚುವರಿ ಉಳಿತಾಯವಾಗಿ ಎತ್ತಬೇಕು. ಅಂದರೆ ಅದರ ಖಚರ್ುಗಳಲ್ಲಿ, ಸರಕಾರೀ ಸಂಬಳ ಪಾವತಿ ಮೊತ್ತಗಳಲ್ಲಿ ಗಮನಾರ್ಹ ಕಡಿತವಲ್ಲದೆ, ಮುಖ್ಯವಾಗಿ ಸಾಮಾಜಿಕ, ಆರೋಗ್ಯಪಾಲನೆ ಮತ್ತು ಮಿಲಿಟರಿ ಖಚರ್ುಗಳಲ್ಲಿ ಭಾರೀ ಕಡಿತ ತರಬೇಕಾಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಗ್ರೀಸಿನ ದುಡಿಯುವ ಜನಗಳಿಗೆ ಇನ್ನಷ್ಟು ಅಸಹನೀಯ, ಹೊರಲಾರದ ಹೊರೆಗಳು ಕಾದಿವೆ.
ಜಿ-20 ಶೃಂಗಸಭೆಯಲ್ಲಿ ಬಿಕ್ಕಟ್ಟನ್ನು ಎದುರಿಸುವ ಕಾರ್ಯವ್ಯೂಹದ ಬಗ್ಗೆ ಯಾವುದೇ ಏಕೀಕೃತ ತಿಳಿವಿಲ್ಲದೆ, ಸೆಳೆತಗಳು ಸ್ಫೋಟ ಗೊಂಡು ಬಹಿರಂಗಕ್ಕೆ ಬಂದವು. ಯುರೋಪಿಯನ್ ಕಮಿಶನ್ ಅಧ್ಯಕ್ಷ ಜೋಸ್ ಮೇನ್ವಲ್ ಬರ್ರೋಸೊ, ಈ ಹಣಕಾಸು ಬಿಕ್ಕಟ್ಟಿನ ಮೂಲಗಳು ಅಮೆರಿಕಾದಲ್ಲಿನ ಅಪಾತ್ರ ಸಾಲ(ಸಬ್-ಪ್ರೈಮ್) ಮಾರುಕಟ್ಟೆಯಲ್ಲಿದ್ದು, ಯುರೋಪಿಯನ್ ಬ್ಯಾಂಕುಗಳಿಗೆ ಅದರ ಸೋಂಕು ತಗುಲಿದೆ ಎಂಬುದನ್ನು ಅಲ್ಲಿ ನೆರೆದಿದ್ದವರಿಗೆ ನೆನಪಿಸಿದರು. ಯುರೋಪಿ ಯನ್ನರು ಅಲ್ಲಿಗೆ ಬಂದಿರುವುದು ಪ್ರಜಾಪ್ರಭುತ್ವದ ಮೇಲೆ ಅಥವ ಆಥರ್ಿಕವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಮೇಲೆ ಪಾಠಗಳನ್ನು ಕೇಳಲು ಅಲ್ಲ ಎಂದೂ ಅವರು ಹೇಳಿದರು. ಈ ಮಾತು ಭಾರತೀಯ ಪ್ರಧಾನ ಮಂತ್ರಿಗಳು ನೀಡಿದ ಸಲಹೆಯ ಬಗ್ಗೆ ಇರಬಹುದೇ ಎಂಬುದನ್ನು ಅವರೇ ಹೇಳಬೇಕು! ಏನೇ ಆಗಲಿ, ಭಾರತೀಯ ಆಥರ್ಿಕ ಉತ್ತಮಗೊಳ್ಳಬೇಕಾದರೆ, ಅದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಆದೇಶಗಳನ್ನು ಅನುಸರಿಸುವ ನವ-ಉದಾರವಾದಿ ಮಾನಸಿಕತೆಯನ್ನು ಕೈಬಿಟ್ಟು ನಮ್ಮ ದೇಶೀ ಬೇಡಿಕೆಗಳನ್ನು ಬಲಪಡಿಸಬಹುದಾದ ಮತ್ತು ದೇಶೀ ಆಥರ್ಿಕವನ್ನು ವಿಸ್ತರಿಸಬಹುದಾದ ಧೋರಣೆಗಳನ್ನು ಅನುಸರಿಸಿದರೆ ಮಾತ್ರ ಸಾಧ್ಯ.
0