ರಣಜಿ ಟ್ರೋಫಿ: ನಾಕೌಟ್‌ ಪಂಧ್ಯಗಳಿಗೆ ಹೆಸರು ಪ್ರಕಟಿಸಿದ ಕರ್ನಾಟಕ ತಂಡ

  • ನಾಯಕನಾಗಿ ತಂಡವನ್ನು ಮುನ್ನಡೆಸಲಿರುವ ಮನೀಷ್‌ ಪಾಂಡೆ
  • ಟ್ರೋಪಿ ಗೆಲ್ಲುವ ನೆಚ್ಚಿನ ತಂಡದಲ್ಲಿ ಕರ್ನಾಟಕ ತಂಡವು ಒಂದು

ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಕ್ರಿಕೆಟ್ ಮೈದಾನದಲ್ಲಿ ಜೂನ್ 6 ರಿಂದ ಪ್ರಾರಂಭವಾಗುವ ರಣಜಿ ಟೂರ್ನಿಯು 2ನೇ ಹಂತಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ರಣಜಿ ಟೂರ್ನಿಯ 2 ನೇ ಹಂತದಲ್ಲಿ ಕರ್ನಾಟಕ ತಂಡವು ಕ್ವಾರ್ಟರ್​ ಫೈನಲ್​ನಲ್ಲಿ ಉತ್ತರ ಪ್ರದೇಶ ವಿರುದ್ದ ಆಡಲಿದ್ದು, ಈ ಬಾರಿಯೂ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಲಿದ್ದಾರೆ.

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ದದ ಟಿ20 ಸರಣಿಯಲ್ಲಿ ಕೆಎಲ್‌ ರಾಹುಲ್‌ ಮತ್ತು ಪ್ರಸಿದ್ದ್‌ ಕೃಷ್ಣ ಭಾಗವಹಿಸಲಿದ್ದು, ಹೀಗಾಗಿ ಇವರನ್ನು ಕೈ ಬಿಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ಹಾಗಾಗಿ  ತಂಡಕ್ಕೆ ವೇಗಿ ವಿ. ಕೌಶಿಕ್ ಕಂಬ್ಯಾಕ್ ಮಾಡಿದ್ದು, ಹೀಗಾಗಿ ಬೌಲಿಂಗ್ ವಿಭಾಗ ಮತ್ತಷ್ಟು ಬಲಗೊಂಡಿದೆ ಎನ್ನಬಹುದು. ಏಕೆಂದರೆ ತಂಡದಲ್ಲಿ ವೇಗಿಯಾಗಿ ವಿಜಯಕುಮಾರ್, ಸ್ಪಿನ್ನರ್​ಗಳಾಗಿ ಕೃಷ್ಣಪ್ಪ ಗೌತಮ್ , ಶ್ರೇಯಸ್ ಗೋಪಾಲ್ , ಜೆ ಸುಚಿತ್ ಮತ್ತು ಕೆಸಿ ಕಾರಿಯಪ್ಪ ಇದ್ದಾರೆ. ಹೀಗಾಗಿ ಕರ್ನಾಟಕ ತಂಡವು ಬಲಿಷ್ಠ ಬೌಲಿಂಗ್ ಲೈನಪ್​ನೊಂದಿಗೆ ಕಣಕ್ಕಿಳಿಯಲಿದೆ. ಹಾಗೆಯೇ ಬ್ಯಾಟಿಂಗ್​ನಲ್ಲಿ ಅನುಭವಿ ಮಯಾಂಕ್ ಅಗರ್ವಾಲ್, ನಾಯಕ ಮನೀಶ್ ಪಾಂಡೆ , ರವಿಕುಮಾರ್ ಸಮರ್ಥ್, ಕರುಣ್ ನಾಯರ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಅತ್ಯುತ್ತಮ ಆಟಗಾರರಿದ್ದಾರೆ. ಹೀಗಾಗಿ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಕರ್ನಾಟಕ ಕೂಡ ಒಂದು ಎಂದು ಹೇಳಬಹುದು.

ಈ ಬಾರಿಯ ರಣಜಿ ಟ್ರೋಪಿಯಲ್ಲಿ ಕರ್ನಾಟಕ ತಂಡದ ಆಟಗಾರ ಪಟ್ಟಿಯನ್ನ ನೋಡುವುದಾದರೆ

ಮನೀಶ್ ಪಾಂಡೆ (ನಾಯಕ), ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್,ಸಿದ್ಧಾರ್ಥ್ ಕೆವಿ, ನಿಶ್ಚಲ್ ಡಿ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಶರತ್ ಬಿಆರ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಶುಭಾಂಗ್ ಹೆಗ್ಡೆ , ಜಗದೀಶ್ ಸುಚಿತ್, ಕೆಸಿ ಕಾರ್ಯಪ್ಪ , ರೋನಿತ್ ಮೋರೆ, ಕೌಶಿಕ್ ವಿ, ವೈಶಾಕ್ ವಿಜಯಕುಮಾರ್, ವೆಂಕಟೇಶ್ ಎಂ, ವಿದ್ವತ್ ಕಾವೇರಪ್ಪ, ಕಿಶನ್ ಎಸ್ ಬೇಡರೆ. ಇಷ್ಟು ಆಟಗಾರರು ಈ ರಣಜಿ ಟ್ರೋಪಿಯಲ್ಲಿ ಭಾಗವಹಿಸಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *