ಹಾಸನ : ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿರುವ ಅಮಾನವೀಯ ಕೃತ್ಯ ಹಾಸನ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅರಸೀಕೆರೆ ತಾಲೂಕಿನ ಅಣ್ಣೇನಹಳ್ಳಿ ಗ್ರಾಮದ ಮುನೇಶ್ ಎಂಬಾತ ಈ ಕೃತ್ಯ ಎಸೆಗಿದ್ದಾನೆ ಎನ್ನಲಾಗಿದೆ.
ಕೂಲಿ ಅರಸಿ ಹೊರ ಜಿಲ್ಲೆಗಳಿಂದ ಬಂದಿದ್ದ ಕಾರ್ಮಿಕರನ್ನು ಶುಂಠಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದ ಮುನೇಶ್ ಕೆಲಸ ಮುಗಿಯುತ್ತಿದ್ದಂತೆ ಕಾರ್ಮಿಕರನ್ನು ಶೆಡ್ನಲ್ಲಿ ಕೂಡಿ ಹಾಕುತ್ತಿದ್ದ ಎನ್ನಲಾಗಿದೆ.
ಈ 55 ಜನರ ಪೈಕಿ 50 ಪುರುಷರು ಹಾಗೂ 5 ಮಹಿಳೆಯರು ಆಗಿದ್ದರು. 55 ಕಾರ್ಮಿಕರನ್ನು ಮುನೇಶ್ ಎರಡು ಪ್ರತ್ಯೇಕ ಶೆಡ್ ಗಳಲ್ಲಿ ಬಂಧನದಲ್ಲಿ ಇರಿಸಿದ್ದರು ಎಂದು ತಿಳಿದು ಬಂದಿದೆ.
ಮೌನೇಶ್ ಅಮಾಯಕ ಕೂಲಿಕಾರರನ್ನು ತನ್ನ ಬಲೆಗೆ ಹಾಕಿಕೊಳ್ಳುತ್ತಿದ್ದ ಕಥೆಯೇ ಭಯವನ್ನು ಹುಟ್ಟಿಸುತ್ತೆ, ಅದೇನಪ್ಪಾ ಅಂದ್ರೆ, ಒಂದು ದಿನ ಕೆಲಸ ಇದೆ ಎಂದು ಹೇಳಿ ಕರೆತಂದು ಕೂಡಿ ಹಾಕ್ತಿದ್ದ. ಹೀಗೆ ಅರಸೀಕೆರೆ ಸುತ್ತಮುತ್ತ ಸಿಕ್ಕ 50 ಕ್ಕೂ ಹೆಚ್ಚು ನಿರ್ಗತಿಕರಿಗೆ ಅಕ್ರಮ ಬಂಧನ ಹಾಕಿ ಅವರಿಂದ ಕೆಲಸವನ್ನು ತೆಗೆದುಕೊಳ್ತಿದ್ದ,
ಅನ್ನ ಅಹಾರ ,ನೀರು,ಸ್ನಾನ ಇಲ್ಲದೆ ಕಾರ್ಮಿಕರು ನರಳಾಡುತ್ತಿದ್ದರು. ಊಟ, ನೀರು ಕೇಳಿದ್ರೆ, ಕೂಲಿ ಕೇಳಿದ್ರೂ ನೀಡದೆ ಹಲ್ಲೆ ಮಾಡ್ತಿದ್ದ. ಗೂಡಿನ ಗಾಡಿಯಲ್ಲಿ ಕೂಡಿಹಾಕಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ತಾ ಇದ್ರು ಈ ಕಿರಾತಕರು
ಶೌಚಕ್ಕೂ ಹೊರಗೆ ಬಿಡದೆ ಕೂಡಿ ಹಾಕಿ ಅಮಾನವೀಯವಾಗಿ ನಡೆದುಕೊಳ್ತಾ ಇದ್ರು, ಮೊಬೈಲ್ ಕಿತ್ತುಕೊಳ್ಳುತ್ತಿದ್ದ ದುರುಳರು, ಕುಟುಂಬ ದವರಿಗೆ ಫೋನ್ ಮಾಡ್ತೀನಿ ಅಂದ್ರು ಕೊಡದೆ ಕ್ರೌರ್ಯ ನಡೆಸ್ತಾ ಇದ್ರು. ಐದು ,ಆರು, ಎಂಟು ತಿಂಗಳಿಂದ ಕೂಡಿ ಹಾಕಿ ಕ್ರೌರ್ಯವನ್ನು ನಡೆಸಿದ್ದಾರೆ ಈ ಕಿರಾತಕರು.
ಖಚಿತ ಮಾಹಿತಿ ಮೇಲೆ ಅರಸೀಕೆರೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಮುನೇಶ್ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ. 55 ಜನ ಕಾರ್ಮಿಕರನ್ನು ರಕ್ಷಿಸಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಮುನೇಶ್ ನನ್ನು ಬಂಧಿಸಿಬೇಕು.ಆತನ ಜೊತೆ ಯಾರೆಲ್ಲ ಇದ್ದಾರೆ ಅವರ ಮೇಲೆ ಕ್ರಮ ಜರುಗಿಸಬೇಕು ಈ ಜಾಲವನ್ನು ಪತ್ತೆ ಹಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.