ಬೆಂಗಳೂರು : ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-2023ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ರಾಜ್ಯ ಬಜೆಟ್ ಗಾತ್ರ 2 ಲಕ್ಷದ 66 ಸಾವಿರ ಕೋಟಿ ರೂಪಾಯಿ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿದ್ದಾರೆ. ಯಾವ ಇಲಾಖೆಗೆ ಎಷ್ಟು ಹಣ ಮೀಸಲಿರಿಸಿದ್ದಾರೆ ಎಂಬ ಮಾಹಿತಿ ಈ ಕೆಳಗಿನಂತಿದೆ.
- ಆಹಾರ ಇಲಾಖೆ – 2,288 ಕೋಟಿ ರೂಪಾಯಿ ಅನುದಾನ
- ವಸತಿ ಇಲಾಖೆ – 3,594 ಕೋಟಿ ರೂಪಾಯಿ ಅನುದಾನ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 4,713 ಕೋಟಿ ಅನುದಾನ
- ಕೃಷಿ ಮತ್ತು ತೋಟಗಾರಿಕೆ ಇಲಾಖೆ – 8,457 ಕೋಟಿ ರೂ ಅನುದಾನ,
- ಸಮಾಜ ಕಲ್ಯಾಣ ಇಲಾಖೆ – 9,389 ಕೋಟಿ ರೂ ಅನುದಾನ
- ಲೋಕೋಪಯೋಗಿ ಇಲಾಖೆ – 10,447 ಕೋಟಿ ರೂ ಅನುದಾನ
- ಒಳಾಡಳಿತ ಮತ್ತು ಸಾರಿಗೆ ಇಲಾಖೆ – 11,222 ಕೋಟಿ ರೂ ಅನುದಾನ
- ಜಲ ಸಂಪನ್ಮೂಲ ಇಲಾಖೆ – 20,601 ಕೋಟಿ ರೂ ಅನುದಾನ
- ಶಿಕ್ಷಣ ಇಲಾಖೆ – 31,980 ಕೋಟಿ ರೂಪಾಯಿ ಅನುದಾನ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 17,325 ಕೋಟಿ ರೂಪಾಯಿ
- ನಗರಾಭಿವೃದ್ಧಿ ಇಲಾಖೆ – 16,076 ಕೋಟಿ ರೂಪಾಯಿ ಅನುದಾನ
- ಕಂದಾಯ ಇಲಾಖೆ – 16,388 ಕೋಟಿ ರೂಪಾಯಿ ಅನುದಾನ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 13,982 ಕೋಟಿ ರೂಪಾಯಿ ಅನುದಾನ
- ಇಂಧನ ಇಲಾಖೆ – 12,655 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ.