ಬೆಳಗಾವಿ: ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷ ಶಶಿಕಾಂತ್ ಪಾಟೀಲ್ ವಾಟ್ಸಾಪ್ ಗ್ರೂಪ್ಗೆ ಅಶ್ಲೀಲ ಫೋಟೋ ಹಾಕಿ ಪೇಚೆಗೆ ಸಿಲುಕಿದ್ದಾರೆ ಎನ್ನಲಾಗಿದೆ.
ಗೋವಾ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಶಶಿಕಾಂತ ಪಾಟೀಲ್, BJP KAR ದಕ್ಷಿಣ ಮಂಡಲ ಹೆಸರಿನ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿರುವ ಗ್ರೂಪ್ಗೆ ಮಧ್ಯರಾತ್ರಿ ತನ್ನದೆ ಅಶ್ಲೀಲ ಫೋಟೋ ಕಳುಹಿಸಿದ್ದಾರೆ ಎನ್ನಲಾಗಿದೆ.
ಅಶ್ಲೀಲ ಫೋಟೋ ನೋಡಿ ಮಹಿಳಾ ಕಾರ್ಯಕರ್ತೆಯರು ಗ್ರೂಪ್ನಿಂದ ಎಕ್ಸಿಟ್ ಆಗಿದ್ದಾರೆ. ಶಶಿಕಾಂತ ಪಾಟೀಲ್ ನಡೆಗೆ ಮಹಿಳಾ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರು, ಮಹಿಳಾ ನಾಯಕರು ಈ ಗ್ರುಪ್ನಲ್ಲಿದ್ದರು. ಬಳಿಕ ಗ್ರೂಪ್ ಅಡ್ಮಿನ್ ಎಲ್ಲರನ್ನೂ ಗ್ರೂಪ್ನಿಂದ ರಿಮೂವ್ ಮಾಡಿ ಗ್ರೂಪ್ ಡಿಲೀಟ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸದ್ಯ ವಾಟ್ಸಾಪ್ ಗ್ರೂಪ್ನ ಸ್ಕ್ರಿನ್ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎನ್ನಲಾಗಿದೆ. ಶಶಿಕಾಂತ್ ಪಾಟೀಲ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.