ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಚುನಾವಣೆಗೂ ಮುನ್ನ ಚೆಕ್ ಮತ್ತು ಬೀಟ್ ಆಟ ಮುಂದುವರಿದಿದ್ದು, ಇದೀಗ ಮುಲಾಯಂ ಅವರ ಆಪ್ತ ಮತ್ತು ಫಿರೋಜಾಬಾದ್ನ ಸಿರ್ಸಗಂಜ್ ಕ್ಷೇತ್ರದ ಶಾಸಕ ಹರಿಯೋಮ್ ಯಾದವ್ ಕಮಲದ ತೆಕ್ಕೆಗೆ ಬಿದ್ದಿದ್ದಾರೆ. ಕಾಂಗ್ರೆಸ್ ಶಾಸಕ ನರೇಶ್ ಸೈನಿ ಮತ್ತು ಎಸ್ಪಿ ಮಾಜಿ ಶಾಸಕ ಧರಂಪಾಲ್ ಯಾದವ್ ಸಹ ಬಿಜೆಪಿಗೆ ಜೈ ಅಂದಿದ್ದಾರೆ.
ನಿನ್ನೆ ಬಿಜೆಪಿಯ ಪ್ರಮುಖ ನಾಯಕ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಜೊತೆ ನಾಲ್ವರು ಶಾಸಕರು ಬಿಜೆಪಿ ತೊರೆದಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಲೆಕ್ಕಾಚಾರ ಹಾಕುತ್ತಿರುವ ಬೆನ್ನಲ್ಲೆ ಈಗ 3 ಜನ ಪ್ರಭಲ ನಾಯಕರು ಬಿಜೆಪಿ ಸೇರ್ಪಡೆಯಾಗಿರುವುದು ಉತ್ತರ ಪ್ರದೇಶದಲ್ಲಿ ಪಕ್ಷದಿಂದ ಪಕ್ಷಕ್ಕೆ ಹಾರುವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಂತಾಗಿದೆ.
ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಆಘಾತ : ದೇಶವ್ಯಾಪಿ 7 ಮಂದಿ ಬಿಜೆಪಿ ಶಾಸಕರ ರಾಜೀನಾಮೆ!
ಎಸ್ಪಿಯಿಂದ ಅಮಾನತ್ತುಗೊಂಡಿದ್ದ ಹರಿಯೋಮ್ : ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಮುಲಾಯಂ ಸಿಂಗ್ ಯಾದವ್ ಅವರ ಆಪ್ತರಾಗಿದ್ದ ಹರಿಯೋಮ್ ಯಾದವ್ ಅವರು ಇಂದು ಬಿಜೆಪಿ ಸೇರಿದ್ದಾರೆ. ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಹರಿ ಓಂ ಯಾದವ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹರಿಯೋಮ್ ಯಾದವ್ ಅವರು ತೇಜ್ ಪ್ರತಾಪ್ ಯಾದವ್ ಅವರ ತಾಯಿಯ ಅಜ್ಜನ ಕಿರಿಯ ಸಹೋದರ, ಇದರಿಂದಾಗಿ ಅವರು ಮುಲಾಯಂ ಸಿಂಗ್ ಯಾದವ್ ಅವರಿಗೆ ಹತ್ತಿರವಾಗಿದ್ದರು.
ಎಸ್ಪಿಯಿಂದ ಹೊರಗುಳಿದ ನಂತರ ಹರಿಯೋಮ್ ಯಾದವ್, ಸಮಾಜವಾದಿ ಪಕ್ಷದಲ್ಲಿ ನನಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಬಿಜೆಪಿಯಲ್ಲಿ ನನಗೆ ಗೌರವ ಸಿಕ್ಕಿದ್ದರೆ ಇಲ್ಲಿಗೆ ಬಂದಿದ್ದೇನೆ. ಹರಿಓಂ ಯಾದವ್ ಅವರು ಸಿರ್ಸಗಂಜ್ನ ಸಮಾಜವಾದಿ ಪಕ್ಷದ ಶಾಸಕರಾಗಿದ್ದಾರೆ. ಇವರಲ್ಲದೆ, ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಬೆಹತ್ನ ಕಾಂಗ್ರೆಸ್ ಶಾಸಕ ನರೇಶ್ ಸೈನಿ ಮತ್ತು ಎಸ್ಪಿ ಮಾಜಿ ಶಾಸಕ ಧರಂಪಾಲ್ ಯಾದವ್ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ, ಯುಪಿ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಇಬ್ಬರೂ ಉಪಸ್ಥಿತರಿದ್ದರು.