- ರಾಜ್ಯದಲ್ಲಿ ಕೊರೋನಾ ಆತಂಕದ ಮಧ್ಯೆ ಒಮಿಕ್ರಾನ್ ಭೀತಿ
- ಕರ್ನಾಟಕದಲ್ಲಿ ಏರಿಕೆ ಕಾಣುತ್ತಿರುವ ಒಮಿಕ್ರಾನ್ ಸಂಖ್ಯೆ
- ಮತ್ತೆ ಐವರಲ್ಲಿ ಒಮಿಕ್ರಾನ್ ಸೋಂಕು ಪತ್ತೆ
- ವೇಗ ಹೆಚ್ಚು, ತೀವ್ರತೆ ಕಡಿಮೆ: ಸಾವಿನ ಆತಂಕವೂ ಇದೆ
ಬೆಂಗಳೂರು: ದೇಶದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದ ರಾಜಧಾನಿ ಬೆಂಗಳೂರಲ್ಲಿ ಸಂಖ್ಯೆ ಹೆಚ್ಚಳವಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ನಿನ್ನೆ ರಾತ್ರಿ 5 ಹೊಸ ಕೇಸ್ಗಳು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಈ ಪೈಕಿ ನಾಲ್ಕು ಪ್ರಕರಣಗಳು ಹೈರಿಸ್ಕ್ ದೇಶದ ಸಂಪರ್ಕದಿಂದ ಬಂದಿವೆ. ಒಂದು ಪ್ರಕರಣದಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದೆ ಸೋಂಕು ದೃಢಪಟ್ಟಿದೆ. ವಿದೇಶಿಯರ ಸಂಪರ್ಕದಿಂದ ಸೋಂಕು ಬಂದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಹೈರಿಸ್ಕ್ ದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ.
Five more cases of #Omicron have been detected in Karnataka today:
🔹19 yr male returning from UK
🔹36 yr male returning from Delhi
🔹70 yr female returning from Delhi
🔹52 yr male returning from Nigeria
🔹33 yr male returning from South Africa @BSBommai #Omicronindia— Dr Sudhakar K (@mla_sudhakar) December 16, 2021
ಬೆಳಗಾವಿಯಲ್ಲಿಯೂ ವ್ಯಕ್ತಿಯೊಬ್ಬರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. 52 ವರ್ಷದ ಈ ವ್ಯಕ್ತಿಗೆ ನೈಜಿರಿಯಾದಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ಬೆಳಗಾವಿಗೆ ಪ್ರಯಾಣ ಮಾಡಿದ್ದರು. ಪ್ರಸ್ತುತ ಸೋಂಕಿತ ವ್ಯಕ್ತಿಯು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ.
ಇದನ್ನೂ ಓದಿ : ಓಮಿಕ್ರೋನ್ ಬಗ್ಗೆ ಈಗ ನಮಗೆಷ್ಟು ತಿಳಿದಿದೆ?
ಡೆಲ್ಟಾಗಿಂತ 70 ಪಟ್ಟು ವೇಗವಾಗಿ ಹರಡುತ್ತೆ ಒಮಿಕ್ರಾನ್! : ಒಮಿಕ್ರಾನ್ ತಳಿಯು ಒಬ್ಬರಿಂದ ಒಬ್ಬರಿಗೆ ಡೆಲ್ಟಾಗಿಂತ 70 ಪಟ್ಟು ಹೆಚ್ಚು ವೇಗದಲ್ಲಿ ಹರಡುತ್ತದೆ. ನಂತರ ಶ್ವಾಸನಾಳದಲ್ಲೂ ಬಹಳ ವೇಗವಾಗಿ ಸಂಚರಿಸುತ್ತದೆ. ಆದರೆ ಅದರಿಂದ ಕಂಡುಬರುವ ಕೊರೋನಾದ ಲಕ್ಷಣಗಳು ಬಹಳ ಸೌಮ್ಯವಾಗಿರುತ್ತವೆ. ಡೆಲ್ಟಾಗಿಂತ 10 ಪಟ್ಟು ತೀವ್ರತೆ ಕಡಿಮೆಯಿರಬಹುದು ಎಂದು ಹಾಂಗ್ಕಾಂಗ್ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
ಒಮಿಕ್ರಾನ್ ಬಹಳ ವೇಗದಲ್ಲಿ ಹರಡುವುದರಿಂದ ಇದರಿಂದ ಸೋಂಕಿತರಾಗುವವರ ಸಂಖ್ಯೆಯೂ ಬಹಳ ಹೆಚ್ಚಾಗಬಹುದು. ಸೋಂಕಿನ ಲಕ್ಷಣ ಸೌಮ್ಯವಾಗಿದ್ದರೂ ಸೋಂಕಿತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುವುದರಿಂದ ಸಾವಿನ ಸಂಖ್ಯೆಯೂ ಹೆಚ್ಚಬಹುದು. ಹೀಗಾಗಿ ಒಮಿಕ್ರೋನ್ ಬಗ್ಗೆ ಎಚ್ಚರ ವಹಿಸಲೇಬೇಕು ಎಂದೂ ಅಧ್ಯಯನ ನಡೆಸಿರುವ ಸಂಶೋಧಕರು ಹೇಳಿದ್ದಾರೆ.
ಹಾಂಗ್ಕಾಂಗ್ ವಿಶ್ವವಿದ್ಯಾಲಯದ ( University of Hong Kong) ಸಂಶೋಧಕರು ನಡೆಸಿರುವ ಒಮಿಕ್ರಾನ್ ಸೋಂಕಿತ ಶ್ವಾಸನಾಳಗಳ ಅಧ್ಯಯನ ಮತ್ತು ಈ ಹಿಂದಿನ ಕೋವಿಡ್ ರೂಪಾಂತರಿಗಳ ಜೊತೆ ಒಮಿಕ್ರೋನ್ನ ಹೋಲಿಕೆಯ ಅಧ್ಯಯನದಲ್ಲಿ ಈ ಸಂಗತಿಗಳು ವ್ಯಕ್ತವಾಗಿವೆ.