ಮಾಜಿ ಮುಖ್ಯಮಂತ್ರಿಯದ್ದು ಎನ್ನಲಾದ ವಿಡಿಯೊ ವೈರಲ್ : ‘ಅಲ್ಲಿರುವುದು ನಾನಲ್ಲ’ ಎಂದ ಮಾಜಿ ಸಿಎಂ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೊ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಶ್ಲೀಲ ವಿಡಿಯೊ ಈಗ ಸದ್ದು ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಸದಾನಂದಗೌಡರದ್ದು ಎನ್ನಲಾದ ಅಶ್ಲೀಲ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಫೆಸ್ಬುಕ್ ನಲ್ಲಿ ಬಹಳಷ್ಟು ಜನ ಸದಾನಂದಗೌಡರದ್ದು ಎನ್ನಲಾದ ಅಶ್ಲೀಲ ವಿಡಿಯೊ ಹಾಗೂ ಅದರ ಸ್ಕೀನ್ ಶಾಟ್ ಫೊಟೊ ಹಾಕಿ ಹಂಚುತ್ತಿದ್ದಾರೆ. ಬಿಜೆಪಿ ಹಾಗೂ ಸದಾನಂದ ಗೌಡರ ಸಂಸ್ಕೃತಿ ಕುರಿತು ಚರ್ಚೆ ಆರಂಭಿಸಿದ್ದಾರೆ. ಈ ಘಟನೆ ಬಿಜೆಪಿಗೆ ಮತ್ತೊಂದು ಸಂಕಟವನ್ನು ತಂದೊಡ್ಡಿದೆ.

ಧನ್ಯ ಮಹೇಶ್ ಬಾಬು ಎನ್ನುವವರು ಸದಾನಂದಗೌಡರದ್ದು ಎನ್ನಲಾದ ವಿಡಿಯೊ ಅಪ್ಲೋಡ್ ಮಾಡಿದ್ದು ” ಎಲ್ಲವೂ ಮೋದಿಜಿನೆ ಮಾಡಿದ್ರೆ ಕರ್ನಾಟಕದಿಂದ ಆಯ್ಕೆ ಆದದಕ್ಕೆ ನಾವು ಏನಾದ್ರು ದೆಹಲಿ ಮಟ್ಟದಲ್ಲಿ ಮಾಡ ಬೇಕಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.

ರಾಜು ಮೌರ್ಯ ದಾವಣಗೆರೆ ಎನ್ನುವವರು ” ಅಯ್ಯೊ… ಸದಾನಂದಗೌಡ ವಿಶ್ವಾಮಿತ್ರನೇ ಕಾಮಕ್ಕೆ ಬಲಿಯಾದ ಅಲ್ಲವೇ ? ಚಿಂತೆ ಬೇಡ ಸಮರ್ಥನೆಗೆ ಅಂತ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗಳು ರೆಡಿಯಾಗ್ತಾರೆ ಎಂದು ಫೆಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಹಾಗೂ ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ ಧನ್ಯ ಮಹೇಶ್ ಬಾಬು ರವರ ಪೋಸ್ಟ್ ಶೇರ್ ಮಾಡಿದ್ದು ನಾಲ್ಕು ಗಂಟೆಗಳ ನಂತರ ಅಳಿಸಿ ಹಾಕಿದ್ದಾರೆ.

ನಿತೀಶ್ ಬೆನಕಟ್ಟಿ, ಎಸ್. ಬಿ. ಆಕರ ಎನ್ನಿವವರೂ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದು ಇಡೀ ಸಾಮಾಜಿಕ ಜಾಲತಾಣದ ತುಂಬಾ ಸದಾನಂದ ಗೌಡರದ್ದು ಎನ್ನಲಾದ ವಿಡಿಯೊ ಸದ್ದು ಮಾಡುತ್ತಿದೆ.

ವಿಡಿಯೊ ದಲ್ಲಿರುವುದು ನಾನಲ್ಲ : ಈ ಘಟನೆ ಕುರಿತು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, “ನನ್ನ ಮಾರ್ಫ್ ಮಾಡಿದ (ನಕಲಿ) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವೀಡಿಯೊದಲ್ಲಿ ಇರುವುದು ನಾನಲ್ಲ, ನನ್ನ ವಿರೋಧಿಗಳು ನನ್ನ ನಿಷ್ಪಕ್ಷಪಾತ ವ್ಯಕ್ತಿತ್ವವನ್ನು ಹಾಳುಮಾಡಲು ಇದನ್ನು ನಿರ್ಮಿಸಿದ್ದಾರೆ ಎಂದು ತಿಳಿಸಲು ಇಚ್ಚಿಸುತ್ತೇನೆ ಎಂದು ಬರೆದು ಕೊಂಡಿದ್ದಾರೆ.

ನನ್ನ ರಾಜಕೀಯ ಜೀವನ ಹಾಗೂ ನನ್ನ ಏಳಿಗೆಯನ್ನು ಸಹಿಸದ ದುಷ್ಕರ್ಮಿಗಳು ನನ್ನ ತೇಜೋವಧೆ ಮಾಡಲು ಅಶ್ಲೀಲ ನಕಲಿ ವಿಡಿಯೋ ಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ನೋವು ತಂದಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ.

ಕೋರ್ಟ ಮೆಟ್ಟಿಲೇರಿದ್ದರು ಗೌಡರು : ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ನಿಂದ ತಮ್ಮ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದಾರೆ. ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೆಲ ಪತ್ರಿಕೆ, ಚಾನಲ್​​ಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆಯೂ ಇದೆ ಎಂದು ಕಾರಣ ನೀಡಿ  ಸಚಿವ ಡಿ.ವಿ.ಸದಾನಂದಗೌಡ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *