ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ-ಒಬ್ಬನ ಕೊಲೆ

ಜೈಪುರ: ರಾಜಸ್ಥಾನದ ಚಿತ್ತೋರ್‌ಘಡದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಒಬ್ಬ ಅಮಾಯಕನನ್ನು ಕೊಲೆ ಮಾಡಿರುವ ಇಂದು ಘಟನೆ ನಡೆದಿದೆ.

ಜೂನ್ 13 ಹಾಗೂ 14ರ ಮಧ್ಯರಾತ್ರಿ ದಾಳಿ ನಡೆಸಿದ್ದ ಗುಂಪೊಂದು ಒಬ್ಬನನ್ನು ಕೊಂದಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮಧ್ಯ ಪ್ರದೇಶಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ಗುಂಪೊಂದು ಭಿಲ್ಖಂಡ ಬಳಿ ಅವರನ್ನು ಹಿಡಿದು ಥಳಿಸಿದ್ದಾರೆ. ವಾಹನಕ್ಕೆ ಅಡ್ಡಗಟ್ಟಿದ ದುಷ್ಕರ್ಮಿಗಳು ಅವರನ್ನು ಹೊರಗೆಳೆದು ಥಳಿಸಿದ್ದಾರೆ.

ಕೊಲೆಗೀಡಾದ ವ್ಯಕ್ತಿಯನ್ನು ಬಾಬು ಭಿಲ್ (25 ವರ್ಷ)ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಇನ್ನೊಬ್ಬ ಹೆಸರು ಪಿಂಟು ಭಿಲ್ ಎಂದು ಗುರುತಿಸಲಾಗಿದೆ. ಭೀಕರ ದಾಳಿಯಿಂದ ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತನಾಗಿದ್ದಾರೆ. ಬಂಧಿತರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಅಪರಾಧ) ರವಿ ಪ್ರಕಾಶ್ ಮೆಹರ್ಡಾ ‌ ಅವರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7-8 ಜನರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರವೇ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *