ಬಳ್ಳಾರಿ : ಕೋರೊನಾ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗಿದೆ ಎಂದು ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಗುರುವಾರ ಗ್ರಾಮ ಪಂಚಾಯತಿಯಿಂದ ಡಂಗುರ ಸಾರಿಸಿದೆ. ನಿಯಮ ಉಲ್ಲಂಘಿಸಿದವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುವುದು ಗ್ರಾಮ ಪಂಚಾಯಿತಿ ಸ್ವತಃ ನಿರ್ಧಾರ ಕೈಗೊಂಡಿದೆ.
ಈ ಗ್ರಾಮ ಬಳ್ಳಾರಿ ನಗರದಿಂದ 12 ಕಿ.ಮೀ ದೂರದಲ್ಲಿದೆ. ಗ್ರಾಮದ ಬಹುತೇಕ ಜನರು ಸಣ್ಣ ಪುಟ್ಟ ಕೆಲಸಗಳಿಗೆ ಅಷ್ಟೇ ಅಲ್ಲ, ಕಾಫಿ, ಚಹಾ ಕುಡಿಯಲು ಬಳ್ಳಾರಿ ನಗರಕ್ಕೆ ಆಗಮಿಸುವುದು ಹೆಚ್ಚು ಕಂಡುಬರುತಿದ್ದೂ, ಬಳ್ಳಾರಿ ನಗರದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದ ಹಿನ್ನಲೆ ಹಾಗೂ ಗ್ರಾಮದಲ್ಲಿ ಸುಮಾರು ಜನರಿಗೆ ಕೋರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದರ ಜೊತೆಗೆ ಬುಧವಾರ ಗ್ರಾಮದ ವ್ಯಕ್ತಿಯೋಬ್ಬರು ಈ ಸೋಂಕಿಗೆ ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಈ ನಿರ್ಧಾರ ಕೈಗೊಂಡಿದೆ.
ಗುರುವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗ್ರಾ.ಪಂ.ಅಧ್ಯಕ್ಷರು ಮತ್ತು ಕೆಲ ಸದಸ್ಯರು ಗ್ರಾಮದಲ್ಲಿ ಲಾಕ್ ಡೌನ್ ಮಾಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಗ್ರಾಮದಲ್ಲಿ ಡಂಗುರು ಸಾರಿಸಿ, ಇಂದಿನಿಂದ 15 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡಲಾಗಿದೆ. ಯಾರು ಮನೆಯಿಂದ ಹೊರ ಬರುವಂತಿಲ್ಲ. ಊರಿಂದ ಹೊರ ಹೋಗುವುದು, ಒಳ ಬರುವುದು, ಗುಂಪಾಗಿ ಸೇರುವಂತಿಲ್ಲ. ಅಂಗಡಿ, ಹೊಟೇಲ್ ತೆರೆಯುವಂತಿಲ್ಲ ಎಂದು ತಿಳಿಸಿದ್ದಾರೆ.ನಿಯಮ ಮೀರಿದ್ರೇ 5 ಸಾವಿರ ರೂ.ದಂಡ ವಿಧಿಸಲಾಗುವುದು ಎಂದು ಡಂಗುರ ಸಾರಿದೆ. ಇದಕ್ಕೆ ಜನರು ಸ್ಪಂಧಿಸಿ ಸ್ವಯಂ ಪ್ರೇರಿತವಾಗಿ ಗ್ರಾ.ಪಂ.ನಿರ್ಧಾರಕ್ಕೆ ಬೆಂಬಲಿಸಿದ್ದಾರೆ.
ವರದಿ.ಪಂಪನಗೌಡ.ಬಿ.