ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಸಲಹೆಗಾರ ಪಿಕೆ ಸಿನ್ಹಾ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜಿನಾಮೆ ನೀಡಿದ್ದಾರೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಸಲಹೆಗಾರ ಪಿಕೆ ಸಿನ್ಹಾ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಪಿಕೆ ಸಿನ್ಹಾ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ. ಸಿನ್ಹಾ ಅವರು ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಪ್ರಧಾನಿ ಕಚೇರಿಯಲ್ಲಿ ‘ಪ್ರಧಾನ ಸಲಹೆಗಾರ’ರ ಎಂಬ ಹೊಸ ಹುದ್ದೆಯನ್ನು ರಚಿಸಿ ಆ ಸ್ಥಾನಕ್ಕೆ ಪಿಕೆ ಸಿನ್ಹಾರನ್ನು ಆಯ್ಕೆ ಮಾಡಲಾಗಿತ್ತು.
1977 ರ ಬ್ಯಾಚ್ನ ಉತ್ತರ ಪ್ರದೇಶ ಕೇಡರ್ನ ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿ ಪ್ರದೀಪ್ ಕುಮಾರ್ ಸಿನ್ಹಾ. ಅವರು ಭಾರತದ 31 ನೇ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಇದಕ್ಕೂ ಮೊದಲು ಸಿನ್ಹಾ ಅವರು ಭಾರತದ ವಿದ್ಯುತ್ ಕಾರ್ಯದರ್ಶಿಯಾಗಿದ್ದರು. ಅಲ್ಲದೆ ಭಾರತದ ಶಿಪ್ಪಿಂಗ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
#PKSinha was appointed the Principal Advisor to the PM in September 2019. Prior to that he was briefly an officer on special duty (OSD).https://t.co/MmGv45gPRe
— The Quint (@TheQuint) March 16, 2021
ಆಗಸ್ಟ್ 30, 2019 ರಂದು ಸಿನ್ಹಾ ಅವರನ್ನು ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಲಾಯಿತು. 11 ಸೆಪ್ಟೆಂಬರ್ 2019 ರಂದು ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮುಖ್ಯ ಸಲಹೆಗಾರರಾಗಿ ನೇಮಕಗೊಂಡಿದ್ದರು.
ಪ್ರಧಾನಿ ಮೋದಿಯವರ ಕಚೇರಿಯ ಭಾಗವಾಗಿದ್ದ ಮತ್ತೊಬ್ಬ ಅಧಿಕಾರಿ ನೃಪೇಂದ್ರ ಮಿಶ್ರಾ ಅವರು ಪ್ರಧಾನ ಮಂತ್ರಿ ಕಚೇರಿಯಿಂದ ಹೊರಬಂದ ನಂತರ ಸಿನ್ಹಾ ಅವರನ್ನು ಪ್ರಧಾನ ಸಲಹೆಗಾರರಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇಬ್ಬರೂ ಕೂಡ ಪ್ರಧಾನ ಮಂತ್ರಿಯ ಅತ್ಯಂತ ವಿಶ್ವಾಸಾರ್ಹ ಅಧಿಕಾರಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ.
ರಾಜೀನಾಮೆಗೆ ನಿಜವಾದ ಕಾರಣ ತಿಳಿದುಬಂದಿಲ್ಲ, ಆದರೆ ಪಂಚರಾಜ್ಯ ಚುನಾವಣೆಯಲ್ಲಿ