ಬಜೆಟ್‌ ನಲ್ಲಿ ಏನು ಇಲ್ಲ! ಅಂಕಿ ಅಂಶಗಳನ್ನು ತಿರುಗು ಮುರುಗು ಮಾಡಿದ್ದಾರೆ!!?

ಯಡಿಯೂರಪ್ಪನವರ ಬಜೆಟ್‌ ಲೆಕ್ಕಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸ್ವ ಪಕ್ಷದ ನಾಯಕರು ಸೇರಿದಂತೆ ಅನೇಕರು ಅನೇಕರು ಈ ಬಾರಿಯ ಬಜೆಟ್‌ ನ್ನು ನಿರಾಶಾದಾಯಕ ಬಜೆಟ್‌ ಎಂದು ಹೇಳುತ್ತಿದ್ದಾರೆ.  ಬಜೆಟ್‌ ಬಗ್ಗೆ ಯಾರೆಲ್ಲ ಏನು ಹೇಳಿದ್ದಾರೆ? ಯಾವ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಲಾಗಿದೆ? ಯಡಿಯೂರಪ್ಪ ಲೆಕ್ಕಾಚಾರದಲ್ಲಿವ ಹುಸಿ ಭರವಸೆಗಳೆಷ್ಟು ?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 2021-2022ರ ಸಾಲಿನ ಬಹು ನಿರಿಕ್ಷಿತ ಬಜೆಟ್‌ ನ್ನು ಮಂಡಿಸಿದ್ದಾರೆ. ರಾಜ್ಯ ಬಜೆಟ್ ಒಟ್ಟು  ಗಾತ್ರ 2 ಲಕ್ಷದ 46 ಸಾವಿರದ 207 ಕೋಟಿ ರೂ.ಗಳು. ಆಗಿವೆ. ಬಜೆಟ್‌ ಕುರಿತಾಗಿ ಅನೇಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ :ರಾಜ್ಯ ಬಜೆಟ್‌ 2021: ಬಿಎಸ್‌ವೈ ಲೆಕ್ಕ ಏನು?

ಬಜೆಟ್‌ ಕುರಿತಾಗಿ ವಿಧಾನ ಪರಿಷತ್‌ ಸದಸ್ಯ ಎಚ್.‌ ವಿಶ್ವನಾಥ್‌ ಪ್ರತಿಕ್ರೀಯೆ ನೀಡಿದ್ದಾರೆ. ಈ ಬಜೆಟ್‌ನಲ್ಲಿ ಏನೂ ಇಲ್ಲ. ಕಳೆದ 10 ವರ್ಷಗಳ ಬಜೆಟ್ ನೋಡಿದ್ದೇನೆ. ಅದೇ ಅಂಕಿ ಅಂಶ ತಿರುಗು ಮುರುಗು ಮಾಡಿದ್ದಾರೆ. ಅದೇ ಯೋಜನೆ, ಅದೇ ಅನುದಾನ. ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೇ ಟೋಪಿ ಹಾಕಿದ್ದಾರೆ’ ಎಂದು ಬಿಜೆಪಿಯ ಎಚ್‌. ವಿಶ್ವನಾಥ್‌, ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘33 ಇಲಾಖೆಗಳಲ್ಲಿ ಹಣಕಾಸು, ಡಿ.ಪಿ.ಎ.ಆರ್‌, ಕಾನೂನು ಈ ಮೂರು ಅತಿ ಮುಖ್ಯವಾದುದು. ಆಡಳಿತಾತ್ಮಕ ವ್ಯವಸ್ಥೆ, ತೀರ್ಮಾನಗಳನ್ನು ತೆಗೆದುಕೊಳ್ಳುವ ಇಲಾಖೆಗಳು. ಹಣಕಾಸು, ಡಿ.ಪಿ.ಎ.ಆರ್‌  ಎರಡು ಮುಖ್ಯಮಂತ್ರಿ ಬಳಿ ಇದೆ’  1978ರಲ್ಲಿ ನಾನು ಸದನದೊಳಗೆ ಪ್ರವೇಶ ಮಾಡಿದೆ. ಆಗಿನಿಂದ ಬಜೆಟ್‌ ಗಮನಿಸಿದ್ದೇನೆ, ಬಜೆಟ್‌ಗೆ ಸಾಕಷ್ಟು ಮಹತ್ವವಿತ್ತು. ಬಜೆಟ್ ಮಂಡಿಸಿದ ಮೇಲೆ ಅದರ ಮೇಲೆ ವ್ಯಾಪಕ ಚರ್ಚೆ ನಡೆಯುತ್ತಿತ್ತು. ಹಿಂದಿನ ಬಜೆಟ್ ಗಾತ್ರ ಎಷ್ಟು, ಎಷ್ಟು ಖರ್ಚು ಆಗಿದೆ. ಇಲಾಖಾವಾರು ಚರ್ಚೆಯ ಬಳಿಕ ಸಂಬಂಧಪಟ್ಟ ಸಚಿವರು ಉತ್ತರ ಕೊಡುತ್ತಿದ್ದರು. ಆದರೆ ಈಗ ಏನಾಗಿದೆ’ ಎಂದು ಪ್ರಶ್ನಿಸಿದ್ದಾರೆ?

ಬಿಜೆಪಿ ಸಂಸದ ನಾರಾಯಣ ಸ್ವಾಮಿ ಬಜೆಟ್‌ ಕುರಿತು ಪ್ರತಿಕ್ರೀಯೆಯನ್ನು ನೀಡಿದ್ದಾರೆ.  ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ನಿಗಮಗಳಿಗೆ ಕಡಿಮೆ ಅನುದಾನವನ್ನು ಹಂಚಿಕೆ  ಮಾಡಲಾಗಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.  ‘ಮೇಲ್ವರ್ಗದ ನಿಗಮಗಳಿಗೆ ನೀಡಿದ ಅನುದಾನದ ಬಗ್ಗೆ ಆಕ್ಷೇಪವಿಲ್ಲ. ಆದರೆ, ತುಳಿತಕ್ಕೆ ಒಳಗಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚು ಆದ್ಯತೆ ಸಿಗಬೇಕು. ಇದರಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಹಾಗಾಗಿ ಬಜೆಟ್‌ಗೆ ಇದೊಂದು ಕಪ್ಪುಚುಕ್ಕೆಯಾಗಿ ಕಾಣಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ ʻʻಕೊರತೆ ಬಜೆಟ್‌ʼʼ : ಕಾಂಗ್ರೆಸ್‌ ಟೀಕೆ

ಕೃಷ್ಣ ಬೀ ಸ್ಕೀಂ ಹೋರಾಟ ಸಮಿತಿ ಅಧ್ಯಕ್ಷ  ಕೂಡ್ಲೇಪ್ಪ ಗುಡಿಮನಿ  ಪ್ರತಿಕ್ರೀಯೆ ನೀಡಿದ್ದು, ಕೃಷ್ಣಾ ಭೀ ಸ್ಕೀಂ ಯೋಜನೆಗೆ 5600 ಕೋಟಿ ಹಣ ಮೀಸಲಿಟ್ಟದ್ದು ಸ್ವಾಗತಾರ್ಹ, ಇದು ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು, ಆದರೆ ಇದು ಕಾರ್ಯರೂಪಕ್ಕೆ ಬರಬೇಕು ಎಂದು ಅವರು ಆಗ್ರಹಿಸಿದ್ದಾರೆ

ರಾಜ್ಯ ಬಿಜೆಪಿ ಸರಕಾರವು ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ, ಕೇವಲ ಶೆ 11 ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಕೊಡಲಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಬಜೆಟ್‌ ನಲ್ಲಿ 70 ಕೋಟಿ  ರೂ ಹಣವನ್ನು ಕಡಿತ ಮಾಡಲಾಗಿದೆ ಎಂದು ಎಸ್.ಎಫ್. ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಆರೋಪವನ್ನು ಮಾಡಿದ್ದಾರೆ.

ಇದನ್ನು ಓದಿ : ರಾಜ್ಯ ಬಜೆಟ್‌ನಲ್ಲಿ ಕೃಷಿ ವಲಯ

ಡಿವೈಎಫೈ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಬಜೆಟ್‌ ಕುರಿತಾಗಿ ಪ್ರತಿಕ್ರೀಯೆ ನೀಡಿದ್ದಾರೆ, ಈ ಬಜೆಟ್‌ ನಲ್ಲಿ ಸಕಾರಾತ್ಮಕ ಅಂಶಗಳಲಿಲ್ಲ. ಬಲಿಷ್ಠರನ್ನು ಓಲೈಸುವ ಬಜೆಟ್‌ ಇದಾಗಿದೆ ಎಂದು ಮುನೀರ್‌ ಆರೋಪ ಮಾಡಿದ್ದಾರೆ.

ರೈತ ನಾಯಕ ಪಿ.ಆರ್.‌ ಸೂರ್ಯನಾರಾಯಣ ಪ್ರತಿಕ್ರೀಯೆ ನೀಡಿದ್ದು, ಸಾಲ ಮಾಡಿ ಬಜೆಟ್‌ ಮಂಡಿಸಲಾಗಿದೆ. ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಪಿ.ಆರ್.‌ ಸೂರ್ಯನಾರಾಯಣ್‌ ಆರೋಪಿಸಿದ್ದಾರೆ.

ಒಟ್ಟಾರೆ ರಾಜ್ಯ ಬಜೆಟ್‌ ನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಗೆ ಹೆಚ್ಚಿನ ಆಧ್ಯತೆಯನ್ನು ನೀಡಬೇಕಾಗಿತ್ತು, ಆದರೆ ಸರಕಾರ ಈ ವಿಭಾಗಗಳಿಗೆ ಹೆಚ್ಚಿನ ಆಧ್ಯತೆ ನೀಡಿಲ್ಲ ಎಂಬುದು ಇವರೆಲ್ಲರ ಅಭಿಪ್ರಾಯದಿಂದ ಗೋತ್ತಾಗ್ತಾ ಇದೆ.  ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ,  ಹಿಂದುಳಿದವರು, ಮಹಿಳೆಯರಿಗೆ, ವಿಕಲಚೇತನರಿಗೆ ಹೆಚ್ಚಿನ ಆಧ್ಯತೆಯನ್ನು ನೀಡಿಲ್ಲ. ಜನತೆಯ ಮೇಲೆ ಹೊರೆ ಹೇರಿದ ಬಜೆಟ್ ಇದಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *