ಕ್ರಿಕೆಟ್ ಇತಿಹಾಸ ದಾಖಲೆ ಸೃಷ್ಟಿಸಿದ ಕನ್ನಡಿಗ

ಕೇವಲ 129 ಎಸೆತಗಳಲ್ಲಿ ತ್ರಿಶತಕ ಬಾರಿಸಿದ ಕನ್ನಡಿಗ, ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ಸೃಷ್ಟಿ….!

ಕ್ರಿಕೆಟ್ ಎಂದರೆ ಹಾಗೆಯೇ. ಅಲ್ಲಿ ನಿರಂತರವಾಗಿ ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಒಂದರ ಹಿಂದೊಂದರಂತೆ ದಾಖಲೆಗಳು ಪುಡಿಯಾಗಿ, ಹೊಸ ದಾಖಲೆಗಳನ್ನು ಆಟಗಾರರು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಅಂತಹದ್ದೇ ಒಂದು ಐತಿಹಾಸಿಕ ದಾಖಲೆ ನಮ್ಮ ಕನ್ನಡಿಗ ಕ್ರಿಕೆಟಿಗನ ಹೆಸರಿನಲ್ಲಿ ದಾಖಲಾಗಿದೆ.

ಆಸ್ಟ್ರೇಲಿಯಾ ಟೆಸ್ಟ್ ಸರಣಿ : ತಿರುವುಗಳಿಗೆ ಅರ್ಥ ತುಂಬಿದ ಆಟಗಾರರ ರೋಚಕ ಕಥೆ

ಅದೂ ಅಂತಿಂತದ್ದಲ್ಲ, ಏಕದಿನ ಕ್ರಿಕೆಟ್ ನಲ್ಲಿ ಈವರೆಗೆ ಯಾರೊಬ್ಬರಿಗೂ  ತ್ರಿಶತಕ ಬಾರಿಸಲು ಸಾಧ್ಯವಾಗಿಲ್ಲ. ಈಗ ಕನ್ನಡಿಗನೋರ್ವ ಈಗ ಇಂಥ ಸಾಧನೆ ಮಾಡಿ ತೋರಿಸಿದ್ದಾರೆ.  ಲವನೀತ್ ಸಿಸೋಡಿಯಾ ಎನ್ನುವ ಕ್ರಿಕೆಟಿಗ ಹೀಗೊಂದು ದಾಖಲೆ ಬರೆದಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಕಾರ್ಪೊರೇಟ್ ಏಕದಿನದಲ್ಲಿ ತ್ರಿಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದಾರೆ.  ಕೇವಲ 21 ವರ್ಷದ ಕರ್ನಾಟಕದ ಬ್ಯಾಟ್ಸ್‌ಮನ್ ಲವನೀತ್ ಸಿಸೋಡಿಯಾ ಕೇವಲ 129 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದಾರೆ. ಸದ್ಯ ಈ ಕಾರ್ಪೋರೇಟ್ ಕ್ರಿಕೆಟಿಗ ಜಾಗತಿಕ ಕ್ರೀಡಾಲೋಕದಲ್ಲಿ ಸುದ್ದಿಯಾಗಿದ್ದಾರೆ. ಲವನೀತ್​ ಸಿಸೋಡಿಯಾ 129 ಬಾಲ್​ಗಳಲ್ಲಿ 312 ರನ್​ ಬಾರಿಸಿದ್ದಾರೆ. ಸ್ಟ್ರೈಕ್​ ರೇಟ್​ ಬರೋಬ್ಬರಿ 200 ಕ್ಕೂ ಅಧಿಕ. ಇವರು ಆ ಪಂದ್ಯದಲ್ಲಿ ಬರೋಬ್ಬರಿ 26 ಸಿಕ್ಸ್ ಹಾಗೂ 26 ಬೌಂಡರಿ ಬಾರಿಸಿದ್ದರು.

ರೈತರ ಹೋರಾಟಕ್ಕೆ ವಿದೇಶಿ ಆಟಗಾರರ ಬೆಂಬಲ

ಲವನೀತ್ 2019 ಮತ್ತು 2020 ರಲ್ಲಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಆದರೆ, ಅಲ್ಲಿ ಅವರು ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಆದರೆ ಸದ್ಯ ಯುವ ಆಟಗಾರ ಕಾರ್ಪೋರೆಟ್ ಕ್ರಿಕೆಟ್ ನಲ್ಲಿ ಹೊಸ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

 – ವಾಸುದೇವರೆಡ್ಡಿ. ಕೆ.

Donate Janashakthi Media

Leave a Reply

Your email address will not be published. Required fields are marked *