ಬೆಂಗಳೂರು : ಚಾರಿತ್ರಿಕ ದೆಹಲಿ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಅನಿರ್ದಿಷ್ಟಾವಧಿ ಧರಣಿ ಒಂಬತ್ತನೇ ದಿನಕ್ಕೆ ಕಾಲಿಟ್ಟಿತು. ರಾಜ್ಯ ಕಬ್ಬು ಬೆಳೆಗಾರರ ಸಂಘ ಕರ್ನಾಟಕ ದ ಕಾರ್ಯಕರ್ತರು ಭಾಗವಹಿಸಿದ್ದ ಇಂದಿನ ಧರಣಿಯನ್ನು ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ರವರು ಉದ್ಘಾಟಿಸಿ ,ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಿವರವಾಗಿ ರೈತರ ಜೊತೆ ಚರ್ಚಿಸಿ ಜಾರಿಗೆ ತರಲಾಗಿದೆ ಎಂದು ಸುಳ್ಳು ಹೇಳುತ್ತಿದೆ.ಸ್ವತಃ ಆ ಪಕ್ಷದ ರೈತ ಸಂಘ ವೇ ವಿರೋಧಿಸುತ್ತಿರುವುದನ್ನು ಮರೆ ಮಾಚಿ ಕಾರ್ಪೊರೇಟ್ ಕಂಪನಿಗಳ ಪಕ್ಷಪಾತದ ಕಾನೂನನ್ನು ರೈತರ ಹೆಸರಿನಲ್ಲಿ ಜಾರಿಗೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ.ಇದೊಂದು ಸುಳ್ಳಿನ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಇಂದಿನ ಪ್ರತಿಭಟನಾ ಧರಣಿಗೆ ಆಗಮಿಸಿದ ಅಖಿಲ ಭಾರತ ವಕೀಲರ ಸಂಘ (ಎಐಎಲ್ ಯು) ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ವಕೀಲ ಹರೀಂದ್ರ ನೇತೃತ್ವದ ವಕೀಲರ ನಿಯೋಗ ಧರಣಿ ನಿರತರನ್ನು ಉದ್ದೇಶಿಸಿ ಮಾತಾನಾಡಿ ಕೃಷಿ ಕಾಯ್ದೆಗಳು ರೈತ ವಿರೋಧಿ ಮಾತ್ರವಲ್ಲ ಸಂವಿಧಾನ ವಿರೋಧಿಯೂ ಸಹ ಆಗಿದೆ ಎಂದು ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಇದೇ ವೇಳೆ ರೈತರ ಹೋರಾಟಕ್ಕೆ ಎಐಎಲ್ ಯು ರಾಜ್ಯ ಸಮಿತಿಯಿಂದ 17500 ರೂ ಹೋರಾಟದ ದೇಣಿಗೆ ನೀಡಿದರು.
ಇಂದಿನ ಪ್ರತಿಭಟನಾ ಧರಣಿ ನೇತೃತ್ವವನ್ನು ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಣ್ಣಗೌಡ,ರಾಜ್ಯ ಸಂಚಾಲಕ ದೇವ್ ಕುಮಾರ್, ಮುಖಂಡರಾದ ಅತ್ತಹಳ್ಳಿ ದೇವರಾಜ್ ,ಭಾಗ್ಯರಾಜ್ AILU ದಕ್ಷಿಣ ಭಾರತದ ಸಂಚಾಲಕರಾದ ಹೆಚ್.ವಿ.ರಾಮಚಂದ್ರಾರಡ್ಡಿ, AILU ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಟಿ.ಎನ್. ಶಿವಾರೆಡ್ಡಿ, ಖಜಾಂಚಿ ಕೆ.ವೆಂಕಟರಮಣ (ಬಾಬು), ಶಿವಶಂಕರಪ್ಪ, ಶರಣಬಸವ ಮರದ, ರವಿ,ರಮೇಶ್, AILU ಹೊಸಕೋಟೆ ಮುಖಂಡರಾದ ನಾಗರಾಜ, ರವಿಕುಮಾರ, ಸಿಐಟಿಯು ರಾಜ್ಯ ಸಮಿತಿ ಸದಸ್ಯೆ ಸಿ ಕುಮಾರಿ ,ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಸ್ ಸುಧೀರ್ ಕುಮಾರ್ ಕರ್ನಾಟಕ ಜನ ಶಕ್ತಿ ಸಂಘಟನೆಯ ಸಿರಿಮನೆ ನಾಗರಾಜ್ ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ.ಭಟ್ ಆರ್ ಕೆ ಎಸ್ ನ ದಿವಾಕರ್ ಎಐಸಿಸಿಟಿಯು ನ ಮಣಿ ಕರ್ನಾಟಕ ಪ್ರಾಂತ ರೈತ ಸಂಘ ದ ಟಿ ಯಶವಂತ ಮುಂತಾದವರು ವಹಿಸಿದ್ದರು.