ರೈತರ ಬೃಹತ್ ಸಂಸದ್ ಚಲೋ ಕೊಟ್ಟ ಅನುಭವವೂ……..
ಹೊಸ ಸಂಸದ್ ಭವನದ ಶಂಕುಸ್ಥಾಪನೆಯ ತರಾತುರಿಯೂ
“ನಾವು ಒಬ್ಬ ವಿವೇಕಯುತ ಕಕ್ಷಿದಾರರೊಂದಿಗೆ ವ್ಯವಹರಿಸುತ್ತಿದ್ದೇವೆ ಮತ್ತು ಮನ್ನಣೆ ತೋರಿಸಲಾಗುವುದು ಎಂದುಕೊಂಡಿದ್ದೆವು. ನೀವು ಇಷ್ಟು ಆಕ್ರಾಮಕವಾಗಿ ನಿರ್ಮಾಣಕ್ಕೆ ಇಳಿಯಬಹುದು ಎಂದು ನಾವೆಂದೂ ಯೋಚಿಸಿರಲಿಲ್ಲ”-ಇದು ಡಿಸೆಂಬರ್ 7 ರಂದು ಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಒಂದು ಪೀಠದ ಉದ್ಗಾರ.
ಇಲ್ಲಿ ಕಕ್ಷಿದಾರ ಕೇಂದ್ರ ಸರಕಾರ.
ಕೇಸು: ಅದರ ‘ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್’( ಕೇಂದ್ರೀಯ ಪರಿದೃಶ್ಯ ಯೋಜನೆ) ವಿರುದ್ಧ ಹಾಕಿದ್ದ ಅರ್ಜಿಗಳು
ನವದೆಹಲಿಯಲ್ಲಿ ಕೇಂದ್ರ ಪರಿದೃಶ್ಯದ ಭಾಗಗಳಾದ ರಾಷ್ಟ್ರಪತಿ ಭವನ, ಇಂಡಿಯ ಗೇಟ್, ಸಂಸದ್ ಭವನ ಮತ್ತು ಕೇಂದ್ರ ಸಚಿವಾಲಯಗಳು ಇರುವ ಪ್ರದೇಶದ ‘ಪುನರಾಭಿವೃದ್ಧಿ’ಗೆ ಎಂದು 20,000 ಕೋಟಿ ರೂ.ಗಳ ಮೊತ್ತದ ಯೋಜನೆಯಿದು. ಈ ಯೋಜನೆಯ ಕ್ರಮಬದ್ಧತೆ ಮತ್ತು ಇಷ್ಟೊಂದು ಭಾರೀ ಮೊತ್ತದ ಯೋಜನೆಯ ಅಗತ್ಯತೆಯ ಬಗ್ಗೆ ಬಹಳಷ್ಟು ಆಕ್ಷೇಪಗಳಿದ್ದು ಇವುಗಳ ವಿಚಾರಣೆ ನಡೆಸಿದ್ದ ಪೀಠ ನವಂಬರ್ 5ರಂದು ಈ ಕುರಿತ ತೀರ್ಪನ್ನು ಕಾದಿರಿಸಿರುವುದಾಗಿ ಹೇಳಿತ್ತು.
ಆದರೆ ಅದರ ನಡುವೆಯೇ ಯೋಜನೆಯ ಭಾಗವಾದ 971 ಕೋಟಿ ರೂ. ವೆಚ್ಚದ ಹೊಸ ಸಂಸದ್ ಭವನದ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಗಳು ಡಿಸೆಂಬರ್ 10ರಂದು ನೆರವೇರಿಸುತ್ತಾರೆ ಎಂದು ಲೋಕಸಭಾಧ್ಯಕ್ಷರು ಡಿಸೆಂಬರ್ 5ರಂದು ಪ್ರಕಟಿಸಿದರು.
ಸುಪ್ರಿಂ ಕೋರ್ಟಿನ ಪೀಠದ, ಮೇಲೆ ಹೇಳಿದ ಅಸಂತೋಷದ ಟಿಪ್ಪಣಿಗೆ ಕಾರಣ ಇದಿಷ್ಟು.
ನಮ್ಮಬಳಿ ಹಣವೇ ಇಲ್ಲ….ಆದರೆ …….?
“971 ಕೋಟಿ ರೂ. ಬೇಕು…” “ ……ಹಣ ಇಲ್ಲ” “….ಮತ್ತು 20,000 ಕೋಟಿ …” “……ಇಲ್ಲಪ್ಪಾ ,ಹಣ ಇಲ್ಲ”
“ಇದು ಹೊಸ ಸಂಸದ್ ಭವನ ಮತ್ತು ಸೆಂಟ್ರಲ್ ವಿಸ್ತಾ ಪ್ರಾಜೆಕ್ಟಿಗಾಗಿ ಸಾರ್!”
“ಓ, ಅದಾ? ಅದಕ್ಕಾದರೆ ಖಂಡಿತಾ ಇದೆ!”
ವ್ಯಂಗ್ಯಚಿತ್ರ: ಅಲೋಕ್ ನಿರಂತರ್/ಫೇಸ್‍ಬುಕ್
***
ನ್ಯಾಯಾಲಯದ ತೀರ್ಪು ಬರುವ ವರೆಗೆ ಯಾವ ನಿರ್ಮಾಣ ಕೆಲಸವನ್ನೂ ಮಾಡುವುದಿಲ್ಲ, ಯಾವ ಕಟ್ಟಡವನ್ನೂ ಕೆಡಹುವುದಿಲ್ಲ, ಯಾವ ಮರವನ್ನೂ ಕದಡಿಸುದಿಲ್ಲ ಎಂದು ಕೇಂದ್ರ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ಆಶ್ವಾಸನೆ ನೀಡಿದ ಮೇಲೆ ಡಿಸೆಂಬರ್ 10ರ ಶಂಕುಸ್ಥಾಪನೆ ನಡೆಸಬಹುದು ಎಂದು ನ್ಯಾಯಪೀಠವೇನೋ ಹೇಳಿತು.
ಆದರೆ ಕೊರೊನ ಪಿಡುಗು ಮತ್ತು ಅದರ ಪರಿಣಾಮವಾದ ಕಠಿಣ ಲಾಕ್ ಡೌನ್ ಗಳಿಂದ ದೇಶದ ಅರ್ಥವ್ಯವಸ್ಥೆ ಡೋಲಾಯಮಾನವಾಗಿರುವಾಗ ಇಂತಹ ಪರಿಯೋಜನೆಗೆ ನ್ಯಾಯಾಲಯದಿಂದಲೂ ‘ವಿವೇಕ’ದ ಟಿಪ್ಪಣಿ ಪಡೆಯುವಂತಹ ತರಾತುರಿಯಾದರೂ ಏಕೆ….?
ಸಂಸತ್ತಿನ ಈಗಿರುವ ಭವನದಲ್ಲಿ ವಿಧಿ-ನಿಯಮಗಳನ್ನೆಲ್ಲ ಉಲ್ಲಂಘಿಸಿ ಪಾಸು ಮಾಡಿಸಿಕೊಂಡ ಮೂರು ಕೃಷಿ ಮಸೂದೆಗಳಿಂದಾಗಿ ಎದುರಿಸಬೇಕಾಗಿ ಬಂದಿರುವ ರೈತರ ಅಭೂತಪೂರ್ವ ಆಕ್ರೋಶವೇ..?
***
“ವಾವ್! ಈ ಹೊಸ ಸುಂದರ ಭವನದಲ್ಲಿ ವಿಧೇಯಕಗಳನ್ನು
ಹೇಗಾದರೂ ಹಳಿಹತ್ತಿಸುವುದೆಂದರೆ ಮಜವೋ ಮಜಾ!!”
ಕೃಪೆ: ಮಂಜುಲ್, ಫಸ್ಟ್ ಪೋಸ್ಟ್
ಆದರೆ ಇದಕ್ಕೆ 2022 ರ ವರೆಗೆ ಕಾಯಬೇಕು, ಏಕೆಂದರೆ, ಆ ವೇಳೆಗೆ ಇದು ಪೂರ್ಣಗೊಳ್ಳುವುದು, ಹೀಗೆಂದು ಲೋಕಸಭಾದ್ಯಕ್ಷರೇ ಹೇಳಿದ್ದಾರೆ, ಸುಪ್ರಿಂ ಕೋರ್ಟ್ ಅನುಮತಿ ಸಿಕ್ಕೇ ಸಿಗುತ್ತದೆ ಎಂಬ ಖಾತ್ರಿಯಿಂದ..?
***
ಹೊಸ ಸಂಸದ್ ಭವನ ಹೇಗಿರಬೇಕು?
ಎಂದು ಯೋಜಿಸುವಲ್ಲಿ ರೈತರ ಸಂಸದ್ ಚಲೋ ಆಳುವವರಿಗೆ ಬಹಳಷ್ಟು ಮಾಹಿತಿಗಳನ್ನು ಒದಗಿಸಿದಂತಿದೆ!
ಬಂಕರುಗಳೋ ……..
“ಈ ರೈತರಂತಹ ಜನಗಳಿಂದ ರಕ್ಷಿಸಿಕೊಳ್ಳಲು ಖಂಡಿತವಾಗಿಯೂ ನಮಗೆ ಬಂಕರುಗಳು ಬೇಕು!”
ಕೃಪೆ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್
***
ಅಲ್ಲ… ಕಂದಕಗಳೇ ಬೇಕೋ?
“ಇದೀಗ ಸುರಕ್ಷಿತ, ಸಾರ್!”
ಕೃಪೆ: ಸತೀಶ ಆಚಾರ್ಯ/ ಫೇಸ್‍ಬುಕ್
***
ಗಾಂಧೀಜಿಯ ಸಮಸ್ಯೆ
ಹಳೆಯ ಸಂಸದ್ ಭವನದ ಎದುರು ತಲೆ ತಗ್ಗಿಸಿ ಕೂತಿರುವ ಮಹಾತ್ಮ ಗಾಂಧಿಯವರ ಪಾಡೇನು?
ಅಲ್ಲಿಂದ ಸದ್ಯಕ್ಕಾದರೂ ಎತ್ತಂಗಡಿ ಮಾಡುವುದು ಖಂಡಿತ. ಗಾಂಧೀಜಿಗೆ ಏನನಿಸುತ್ತಿರಬಹುದು?
“ಮತ್ತೆ ಇಡುವಾಗ ಸಂಸತ್ತಿನ ಎದುರು ಮುಖಮಾಡದಂತೆ ನೋಡಿಕೊಳ್ಳಿ, ಪ್ಲೀಸ್!”
ಕೃಪೆ: ಸುರೇಂದ್ರನ್, ದಿ ಹಿಂದು
***
ಇನ್ನು…ಇಂಡಿಯಾ ಗೇಟ್?
“ಹೊಸ ಸೆಂಟ್ರಲ್ ವಿಸ್ತಾದ ಭಾಗವಾಗಿ ಅದರಲ್ಲಿ ‘ಸೆಕ್ಷನ್144 ದಂಡ ಸಂಹಿತೆ’ ಕೆತ್ತಿಸಿದರೆ ಹೇಗೆ?”
ಕೃಪೆ: ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್
***
“ಭವ್ಯ ಕಿರೀಟ!”
“ಉಲ್ಲಾಸ ತಂದುಕೊಳ್ಲೋ, ವಿಕಾಸಪ್ಪಾ!
ನಿನಗಾಗಿ ಹೊಸ ಪರಿದೃಶ್ಯಗಳು ತೆರೆದುಕೊಳ್ಳುತ್ತಿವೆ ನೋಡೋ!”
ಕೃಪೆ: ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯ
***