ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಕೇವಲ 12,768 ಮತಗಳಿಂದ, ಅಂದರೆ 0.03% ಅಂತರದಿಂದ ಅಧಿಕಾರವನ್ನು ಮತ್ತೆ ಪಡೆದಿರುವುದು ಎನ್.ಡಿ.ಎ. ಯ ಜನಕಲ್ಯಾಣ ಮತ್ತು ಅಭಿವೃದ್ಧಿ ಧೋರಣೆಗಳ ಬಗ್ಗೆ ಜನಗಳ ವಿಶ್ವಾಸವನ್ನು ಮತ್ತು ಕೊವಿಡ್ ಮಹಾಸೋಂಕನ್ನು ಎದುರಿಸಿದ ರೀತಿಯನ್ನು ಜನಗಳು ಅನುಮೋದಿಸಿದ್ದಾರೆ ಎಂಬುದನ್ನು ತೋರಿಸಿದೆ ಎಂದು ಪ್ರಧಾನ ಮಂತ್ರಿಗಳು, ಹೇಳಿದ್ದಾರೆ.
ಟ್ರೋಪಿಯನ್ನು ಮೀರಿಸಿದ ಫಲಕ!
(ಸತೀಶ ಆಚಾರ್ಯ, ನ್ಯೂಸ್ಸ್ಟಿಂಗ್)
ಪ್ರಧಾನ ಮಂತ್ರಿಗಳು ಚುನಾವಣಾ ಪ್ರಚಾರದ ವೇಳೆಯಲ್ಲಿ ಜೆಡಿ(ಯು)-ಬಿಜೆಪಿ ಸರಕಾರ ಡಬಲ್ ಎಂಜಿನ್ ಸರಕಾರ ಎಂದಿದ್ದರು. ಚುನಾವಣೆಗಳ ನಂತರ ಜೆಡಿ(ಯು) ಬಲ 71 ರಿಂದ 43ಕ್ಕೆ ಇಳಿದಿದೆ. ಅಂದರೆ “.
ಇನ್ನೊಂದು ಇಂಜಿನ್ ಕೇವಲ ಗೂಡ್ಸ್ ವ್ಯಾಗನ್ ಆಗಿಬಿಟ್ಟಿತೇ?
(ಆರ್. ಪ್ರಸಾದ್, ಇಕನಾಮಿಕ್ ಟೈಮ್ಸ್)
ಬಿಜೆಪಿಯ ಬಲ 53ರಿಂದ 74 ಕ್ಕೇರಿದೆ. ಬಿಜೆಪಿಯನ್ನು ಬಲಪಡಿಸುವುದೇ ತನ್ನ ಗುರಿಯಾಗಿತ್ತು, ಅದನ್ನು ಸಾಧಿಸಿದ್ದೇನೆ ಎಂದು ಎಲ್ಜೆಪಿ ಮುಖಂಡರು ಬೆನ್ನು ತಟ್ಟಿಕೊಂಡಿದ್ದಾರೆ. ಅಂದರೆ ಜೆಡಿ(ಯು)ವನ್ನು ಬಲಹೀನಗೊಳಿಸುವುದು? ಈ ಬಗ್ಗೆ ನಿತಿಶ್ ಕುಮಾರ್ ಅವರನ್ನು ಕೇಳಿದಾಗ ‘ಬಿಜೆಪಿ ಮಾತ್ರವೇ ಎಲ್ಜೆಪಿ ಪಾತ್ರದ ಬಗ್ಗೆ ನೋಡಲು ಸಾಧ್ಯ’ ಎಂದರಂತೆ.
ವೋಟ್ ಕಟ್ಟರ್ ಮತ್ತು ಸೀಟ್ ಕಟ್ಟರ್
(ಸುರೇದ್ರನ್, ದಿ ಹಿಂದು)
ಕೊವಿಡ್ ಮಹಾಸೋಂಕನ್ನು ಎದುರಿಸಿದ ರೀತಿಯನ್ನು ಜನಗಳು ಅನುಮೋದಿಸಿದ್ದಾರೆ ಎಂಬುದನ್ನು ತೋರಿಸಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದುದರ ಅರ್ಥ , ಕೊವಿಡ್ ಲಸಿಕೆ ಮುಫತ್ತಾಗಿ ಈ ಹಿಂದಿನ ಲಸಿಕೆಗಳಂತೆ ಇಡೀ ಬಾರತದ ಜನತೆಗೆ ಸಿಗುತ್ತದೋ ಇಲ್ಲವೋ, ಬಿಹಾರದ ಮತದಾರರಿಗಂತೂ ಸಿಗುತ್ತದೆ ಎಂದು ಮತದಾರರು ಭಾವಿಸಿದ್ದಾರೆ ಎಂದು ಅರ್ಥವಿರಬಹುದೇ?
ವಿ ಫಾರ್ ವ್ಯಾಕ್ಸಿನ್?
(ಪಿ.ಮಹಮ್ಮದ್, ವಾರ್ತಾಭಾರತಿ)
ಅಥವ ಮಹಾಗಟ್ಬಂಧನ್ 10ಲಕ್ಷ ಉದ್ಯೋಗಗಳನ್ನು ನಿರ್ಮಿಸಲಾಗುವುದು ಎಂದಾಗ ಅದಕ್ಕೆ ಹಣ ಎಲ್ಲಿಂದ ಬರುತ್ತದೆ, ಬರೀ ತಿಂಗಳ ಸಂಬಳಕ್ಕೆ ಹೆಚ್ಚುವರಿ 60ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಎನ್ಡಿಎ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೇಳಿದರೂ, ನಂತರ ಸ್ವತಃ ಎನ್.ಡಿ.ಎ. ಪೈಪೋಟಿಯಲ್ಲಿ 19ಲಕ್ಷ ಉದ್ಯೋಗ ನಿರ್ಮಿಸುವುದಾಗಿ ಹೇಳಿದ್ದರಿಂದ 12,768 ಬಹುಮತ ಸಿಗುವಂತಾಯಿತೇ? ಗೊತ್ತಿಲ್ಲ.
ಆದರೆ ಇದರಿಂದಾಗಿ ಜೆಡಿ(ಯು) ಸೀಟುಗಳು ಇಳಿದರೂ,ಮೈತ್ರಿಕೂಟದ ದೊಡ್ಡ ಪಕ್ಷ ಬಿಜೆಪಿಯಿಂದ ಮತ್ತೆ ಮುಖ್ಯಮಂತ್ರಿಯಾಗಲಿರುವ ಭರವಸೆ ಪಡೆದ ಹಿಂದಿನ ಮುಖ್ಯಮಂತ್ರಿಗಳು ಇನ್ನು ತಿಂಗಳ ಸಂಬಳಕ್ಕೆ 1.7ಲಕ್ಷ ಕೋಟಿ ರೂ. ಹೆಚ್ಚುವರಿ ಹಣ ಎಲ್ಲಿಂದ ಹೊಂದಿಸುವುದು ಎಂದು ತಲೆಬಿಸಿ ಮಾಡಿಕೊಳ್ಳುವಂತಾಗಿರಬೇಕು.
ಅಥವ ಮೈತ್ರಿಕೂಟದ ದೊಡ್ಡ ಪಕ್ಷದ ಭರವಸೆಯಿಂದ ಒಂದು ನಿರುದ್ಯೋಗವಂತೂ ಕಡಿಮೆಯಾಗಿದೆ ಎಂದು ತುಸು ಸಮಾಧಾನ ಪಟ್ಟುಕೊಳ್ಳುವಂತಾಗಿದೆಯೇ?
ಈಗ ಎಷ್ಟು ಉದ್ಯೋಗಗಳನ್ನು ಒದಗಿಸುವ ಬಗ್ಗೆ ತಲೆಬಿಸಿ?
1900000 ಅಥವ 1899999?
(ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯ)
ಅಥವ ಪ್ರಧಾನ ಮಂತ್ರಿಗಳ ಟ್ರೋಪಿಯ ಫಲಕ ನೋಡಿದ ಮೇಲೆ …………
….ಆದರೆ ನೀನು ಉದ್ಯೋಗ ಕೇಳಲು ಹೋಗಿದ್ದೆಯಲ್ಲಾ, ಮಗಾ?
( ಸತೀಶ ಆಚಾರ್ಯ/ ಫೇಸ್ಬುಕ್)