ಅಶ್ಫಾಕ್ ಉಲ್ಲಾ ಖಾನ್’ನ 120ನೇ ಜನ್ಮದಿನ
ಎದೆಯಲೊಂದು ನೋವು ಹೊತ್ತು
ಬರಿಗೈಯಲ್ಲಿ ತೆರಳುತ್ತಿದ್ದೇನೆ ಸಾಥಿ,
ನನ್ನ ನೆಲವನ್ನು ಸ್ವತಂತ್ರ ಭಾರತವೆಂದು
ಕರೆಯಲಾಗದೆ ಹೋಗುತ್ತಿದ್ದೇನೆ.
ಗೆಳೆಯ ಹಿಂದೂ , ಬಿಸ್ಮಿಲ್ ಹೇಳ್ತಾನೆ,
“ಮತ್ತೆ ಬರುತ್ತೇನೆ, ಮರಳಿ ಬರುತ್ತೇನೆ…
ಬಂದು ಭಾರತ ಮಾತೆಯನ್ನು
ಸ್ವತಂತ್ರಗೊಳಿಸುತ್ತೇನೆ”….
ನಾನೇನು ಮಾಡಲಿ? ಮುಸಲ್ಮಾನ!
ಪುನರ್ಜನ್ಮದ ಮಾತಾಡಲಾಗದು ನಾನು….
ಸತ್ತಮೇಲೇನಾದರೂ ಭಗವಂತ ಸಿಕ್ಕರೆ
ಅವನೆದುರು ಕೈಯೊಡ್ಡಿ ಬೇಡಿಕೊಳ್ಳುವೆ,
“ಖುದಾ, ಸ್ವರ್ಗದ ಬದಲು
ನನಗೆ ಒಂದೇ ಒಂದು ಪುನರ್ಜನ್ಮ ಕೊಡು!”
~ ಅಶ್ಫಾಕ್ ಉಲ್ಲಾ ಖಾನ್ |