ಅಕ್ಷರ ದಾಸೋಹ ಯೋಜನೆ : ಆಹಾರ ಧಾನ್ಯ ಮನೆಯ ಬಾಗಿಲಿಗೆ ತಲುಪಿಸಿ

ರಾಣೇಬೆನ್ನೂರ : ಅಕ್ಷರ ದಾಸೋಹ ಯೋಜನೆಯ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ತಲುಪಿಸಲು ಆಗ್ರಹಿಸಿ ರಾಣೇಬೆನ್ನೂರ ತಾಲ್ಲೂಕಿನ ಎಸ್ಎಫ್ಐ ಮೇಡ್ಲೇರಿ ಗ್ರಾಮ ಘಟಕ ವತಿಯಿಂದ ಉಪತಹಸೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯದಲ್ಲಿ ಕರೋನ್ ಎಂಬ ಮಹಾಮಾರಿ ಹೆಮ್ಮಾರಿಯ ರೋಗದಿಂದಾಗಿ ಶಾಲೆಗಳ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗಿದೆ ಇರುವುದರಿಂದ ಮಕ್ಕಳಿಗೆ ಶಾಲೆಗಳು ಪ್ರಾರಂಭ ಸಂದರ್ಭದಲ್ಲಿ ಕೊಡುತ್ತಿದ್ದ ಬಿಸಿ ಊಟ ಯೋಜನೆ ಅಕ್ಕಿ-ಬೇಳೆ-ತರಕಾರಿ ವಸ್ತುಗಳನ್ನು ರಾಜ್ಯ ಸರ್ಕಾರವು ಬೇಸಿಗೆ ಸಂದರ್ಭದಲ್ಲಿ ಎರಡು ಮಾತ್ರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ವಿತರಣೆ ಮಾಡಿತ್ತು. ಆದರೆ ಕಳೆದ ಮೇ ತಿಂಗಳಿನಿಂದ ಇಲ್ಲಿವರೆಗೂ ಕೂಡ ಶಾಲೆಗಳು ಪ್ರಾರಂಭವಾಗದ ಕಾರಣ ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಊಟ ನೀಡಲು ಬಂದಿರುವ ದಾಸ್ತಾನಿನ  ದವಸಧಾನ್ಯಗಳು ಜಿಲ್ಲಾ ಕೇಂದ್ರಗಳಲ್ಲಿ ಆಹಾರದ ಉಗ್ರಣ ನಿಗಮದಲ್ಲಿ ಕೊಳೆಯುತ್ತಾ ಬಿದ್ದಿವೆ.

ಕೆಲವು ಕಡೆ ಇಲಿ-ಹೆಗ್ಗಣಗಳ ಕಾಟ ಹೆಚ್ಚಳವಾಗಿದೆ ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿಹೆಚ್ಚಿನ ಮಳೆಯಿಂದಾಗಿ ನೆರೆಹಾವಳಿ ಬಂದಿದ್ದು ಆಹಾರ ಗೋದಾಮಿನಲ್ಲಿರುವ ದವಸ ಧಾನ್ಯಗಳು ನೀರು ಮತ್ತು ಇಲಿ, ಹೆಗ್ಗಣಗಳ ಪಾಲಾಗುತ್ತಿವೆ. ಈ ಕೊರೋನಾ ಸಂಕಷ್ಟದ ದಿನಗಳನ್ನು ಬಡ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗದಿದ್ದರೆ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಾಜ್ಯದಲ್ಲಿರುವ ಎಲ್ಲ ಸರಕಾರಿ ಶಾಲೆಗಳ ಮಕ್ಕಳಿಗೆ ಮೇ ತಿಂಗಳಿನಿಂದ ನವಂಬರ್ ತಿಂಗಳವರೆಗೂ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡಬೇಕಾದ ದವಸಧಾನ್ಯಗಳನ್ನು ಕೇರಳ ರಾಜ್ಯದ ಮಾದರಿಯಲ್ಲಿ ಶಾಲೆಯ ಶಿಕ್ಷಕರ ಮೂಲಕ ವಿದ್ಯಾರ್ಥಿಗಳ ಮನೆಗೆ ತಲುಪಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಪ್ರತಿಭಟನೆ ಮೂಲಕ ಒತ್ತಾಯ ಮಾಡಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳಿಂದ ಇಂದು ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿ ಹಾಗೂ ಯುವ ಸಮುದಾಯ ಶಿಕ್ಷಣ, ಉದ್ಯೋಗ ವಂಚಿತರಾಗಿ ನಿರುದ್ಯೋಗಿಗಳಾಗಿ ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ದೇಶದಾದ್ಯಂತ ಶಿಕ್ಷಣವನ್ನು ಖಾಸಗೀಕರಣ, ವ್ಯಾಪಾರಿಕರಣ ಮಾಡುವುದರ ಮೂಲಕ ರಾಜ್ಯದಲ್ಲಿ, ದೇಶದಲ್ಲಿ ಮಧ್ಯಮವರ್ಗಕ್ಕೆ, ಬಡವ, ದಲಿತ, ಅಲ್ಪಸಂಖ್ಯಾತರಿಗೆ ಶಿಕ್ಷಣವನ್ನು ಸರಕಾರವೇ ಮೊಟಕುಗೊಳಿಸುವಂತಹ ಕೆಲಸಕ್ಕೆ ಕೈ ಹಾಕಲು ಹೊರಟಿದೆ. ಹಣವುಳ್ಳವರಿಗೆ ಮಾತ್ರ ಉತ್ತಮ ಗುಣಮಟ್ಟದ ಶಿಕ್ಷಣ, ಹಣ ಇಲ್ಲದವರಿಗೆ ಇಲ್ಲ ಎನ್ನುವ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾಲನೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

R.T.E ಕಾಯ್ದೆಯನ್ನು ವಿಸ್ತರಣೆ ಮಾಡಿ ಕೇಂದ್ರ ಮತ್ತು ರಾಜ್ಯ  ಸರ್ಕಾರಗಳು ಸೇರಿ ಜಾರಿ ಮಾಡಿರುವ ಶಿಕ್ಷಣ ಹಕ್ಕು ಕಾಯ್ದೆ 2009ರ ಕಾಯ್ದೆ ಪ್ರಕಾರ ರಾಜ್ಯದಲ್ಲಿರುವ ಖಾಸಗಿ ಶಾಲೆಗಳಲ್ಲಿ ಬಡ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಅನುಕೂಲವಾಗುತ್ತದೆ ಎಂಬ ದೃಷ್ಟಿಕೋನದಿಂದ ಜಾರಿ ಮಾಡಿರೋದು ಸರಿಯಷ್ಟೆ. ಆದರೆ 1 ನೇ ತರಗತಿಯಿಂದ 8ನೇ ತರಗತಿವರೆಗೆ ಮಾತ್ರ ಈ ಕಾಯ್ದೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡುವುದರಿಂದ 8ನೇ ತರಗತಿವರೆಗೆ R.T.E, ಯೋಜನೆಯಡಿಯಲ್ಲಿ ಖಾಸಗಿ ಶಾಲೆಯಲ್ಲಿ ಕಲಿತಿರುವ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮುಂದೆ ಅದೇ ಶಾಲೆಯಲ್ಲಿ 9ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಹಣವನ್ನು ಕಟ್ಟಬೇಕಾಗಿರುವುದರಿಂದ ಹೆಚ್ಚುವರಿ ಶುಲ್ಕ ಕಟ್ಟಲಾಗದೆ ಬಹುತೇಕ ಮಕ್ಕಳು ಪಾಲಕರು ಶಾಲೆಯಿಂದ ಮಕ್ಕಳನ್ನು ಬಿಡಿಸಿ ಬೇರೆ ಸರ್ಕಾರಿ ಶಾಲೆಗೆ 9ನೇ ತರಗತಿ ದಾಖಲಾತಿ ಮಾಡುತ್ತಿದ್ದಾರೆ.

ಇದರಿಂದಾಗಿ 8ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ 9ಮತ್ತು 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ R.T.E ಕಾಯ್ದೆಯನ್ನು 9 ಮತ್ತು 10ನೇ ತರಗತಿವರೆಗೂ ವಿಸ್ತರಣೆ ಮಾಡಬೇಕು ಹಾಗೂ ಈ ಕಾಯ್ದೆ ಜಾರಿಗೆ ಬಂದ ಮೊದಲು ವರ್ಷದಲ್ಲಿ ರಾಜ್ಯದಲ್ಲಿ ಸುಮಾರು  5,40169 ವಿದ್ಯಾರ್ಥಿಗಳು ದಾಖಲಾಗಿದ್ದರು ಆದರೆ ಈಗ ಅವರ ಸಂಖ್ಯೆ ಕಡಿಮೆಯಾಗಿದೆ ರಾಜ್ಯದಲ್ಲಿ ಸುಮಾರು 1,2000. ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದಾರೆ, ಡ್ರಾಪ್ ಔಟ್ ಆಗಲು ಕಾರಣವೇನು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಕಿರುಕುಳವೇ? ಇಲ್ಲವೇ ಪಾಲಕರಿಂದ ಹೆಚ್ಚುವರಿ ಹಣ ಕೇಳಿದರು ಎನ್ನುವ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ? ಈ ಡ್ರಾಪ್ ಔಟಾದ ಮಕ್ಕಳು ಎಲ್ಲಿ ಹೋದರು? ಮಕ್ಕಳ ಶಿಕ್ಷಣ ಪರಿಸ್ಥಿತಿ ಈಗ ಹೇಗಿದೆ ಎನ್ನುವ ಅಂಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಹಿರಂಗ ಪಡಿಸಬೇಕಾಗಿದೆ. ಏಕೆಂದರೆ ಸರಕಾರ ಪ್ರತಿವರ್ಷ ಈ R.T.E ಅಡಿಯಲ್ಲಿ ಆಯ್ದೆಯಾದ ಒಂದು ಮಗುವಿಗೆ 5600 ದಿಂದ 11,500 ರೂಪಾಯಿವರಿಗೆ ಸರಕಾರ ಖಾಸಗಿ ಶಾಲೆಗಳಿಗೆ ಕೊಡುತ್ತದೆ. ಹೀಗಿದ್ದರೂ ದೊಡ್ಡ ಪ್ರಮಾಣದ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಆದ್ದರಿಂದ ಡ್ರಾಪ್ ಔಟ್ ಆಗಲು ಕಾರಣ ಏನೆಂಬುದನ್ನು ತಿಳಿಸಲು ಸರ್ಕಾರ ಶೀಘ್ರದಲ್ಲೇ ತನಿಖೆ ಮಾಡಿಸಬೇಕು ನಂತರ ತಪ್ಪಿತಸ್ಥ ಅಧಿಕಾರಿಗಳು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಈ R.T.E, ಕಾಯ್ದೆಯನ್ನು 9 ಮತ್ತು 10ನೇ ತರಗತಿಗೆ ವಿಸ್ತರಣೆ ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ತಾಲ್ಲೂಕು ಸಮಿತಿ ಸಹಕಾರ್ಯದರ್ಶಿ ಶ್ರೀಕಾಂತ್ ಭಾರ್ಕಿ ಒತ್ತಾಯಿಸಿದ್ದಾರೆ.

ಪಿಯುಸಿ ಉಪನ್ಯಾಸಕರಿಗೆ ನೇಮಕಾತಿ ಆದೇಶ ಪತ್ರ ಕೊಡಿ

2015ರಲ್ಲಿ ಪರೀಕ್ಷೆ ಬರೆದು ನೇಮಕಾತಿ ಆಗಿ, ಈಗಾಗಲೇ ಸ್ಥಳ ನಿಗಿದೆ ಮಾಡಿ ಎಲ್ಲಾ ಅರ್ಹತೆ ಇದ್ದರೂ ಕೂಡ ಸುಮಾರು 1203 ಪಿಯುಸಿ ಉಪನ್ಯಾಸಕರಿಗೆ ನೇಮಕಾತಿ ಆದೇಶ ಪತ್ರ ಕೊಡಲಾರದೆ ಸತಾಯಿಸುವುದು ರಾಜ್ಯಸರ್ಕಾರಕ್ಕೆ ಶೋಭೆ ತರುವ ವಿಷಯವಲ್ಲ, ರಾಜ್ಯದಲ್ಲಿ ಕರೋನ ಎಂಬ ನೆಪವೊಡ್ಡಿ ಉಪನ್ಯಾಸಕ ನೇಮಕಾತಿ ಆದೇಶ ಪತ್ರವನ್ನು ಕೊಡಲು ವಿಳಂಬ ಮಾಡುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರಕ್ಕೆ ನಿರುದ್ಯೋಗಿಗಳ ಪರಿಸ್ಥಿತಿಯ ಗಂಭೀರತೆ ಅರ್ಥವಾಗುವುದಿಲ್ಲವೇ? ಅಲ್ಲದೇ ನೇಮಕಾತಿಗೆ ಮಾತ್ರ ಹಣಕಾಸಿನ ಸಮಸ್ಯೆ ಇದೆಯೇ? ರಾಜ್ಯ ಸರ್ಕಾರ ಮಠ ಮಾನ್ಯಗಳು, ತಿರುಪತಿಯಲ್ಲಿ ಭವನ ನಿರ್ಮಾಣಕ್ಕೆ ನೂರಾರು ಕೋಟಿ ನೀಡಿದೆ. ರಾಜ್ಯದಲ್ಲಿರುವ ಸಚಿವರು, ಶಾಸಕರ, ಸಂಸದರ ವಿವಿಧ ಭತ್ಯಗಳಿಗೆ ಮತ್ತು ಅವರ ವೇತನ, ಕ್ಷೇತ್ರದಲ್ಲಿ ಸುತ್ತಾಡುವ ಇತರ ಖರ್ಚು ವೆಚ್ಚಗಳಿಗೆ, ವಿಮಾನು, ಕಾರುಗಳಿಗೆ ಪೆಟ್ರೋಲ್, ಡೀಸೆಲ್ ಇವುಗಳಿಗೆ ಇರಲಾರದ ಹಣಕಾಸಿನ ಸಮಸ್ಯೆ ಪಿಯುಸಿ ಉಪನ್ಯಾಸಕರಿಗೆ ನೇಮಕಾತಿ ಆದೇಶ ಪತ್ರ ಕೊಟ್ಟರೇ ತಕ್ಷಣ ಬರುತ್ತಿದೆಯೇ? ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸುಮಾರು ಒಂದು ವಾರದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದೆ ನೇಮಕಾತಿ ಆದೇಶ ಪ್ರತಿಗಾಗಿ ಜಾತಕಪಕ್ಷಿಯಂತೆ ಕುಳಿತಿದ್ದಾರೆ.

ಅಲ್ಲದೆ ಮಳೆ, ಚಳಿ ಎನ್ನದೇ ಒಂದು ವಾರದಿಂದ ತಮ್ಮ ಹೆಂಡತಿ-ಮಕ್ಕಳನ್ನು ಹಾಗೂ ವಯಸ್ಸಾದ ತಂದೆ-ತಾಯಿಗಳನ್ನು ತಮ್ಮ ತಮ್ಮ ಊರುಗಳಲ್ಲಿ ಬಿಟ್ಟು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವಂತಹ ಅರೆ ನಿರುದ್ಯೋಗಿಗಳಿಗೆ ಆದೇಶ ಪತ್ರ ಕೊಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯದಂತ ಹೋರಾಟದ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತದೆ ಅಲ್ಲದೆ ಧರಣಿ ನಿರತ ಉಪನ್ಯಾಸಕರಿಗೆ ಕೋವಿಡ್ ನಿಯಮಗಳ ಹೆಸರಿನಲ್ಲಿ ತೊಂದರೆ ಕೊಡಲು ಹೊರಟಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ನಡೆಯನ್ನು ಕೂಡ ಎಸ್ಎಫ್ಐ ಸಂಘಟನೆ ಖಂಡಿಸುತ್ತದೆ, ಅಲ್ಲದೆ ಧರಣಿಯನ್ನು ಮೊಟಕುಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸುತ್ತಿರುವ ನೀತಿಯನ್ನು ಕೂಡಲೇ ಕೈಬಿಡಬೇಕು ಹಾಗೂ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಅವರವರ ಗ್ರಾಮಗಳಿಗೆ ಕಳಿಸಿಕೊಡಬೇಕೆಂದು ಅಕ್ಟೋಬರ್ -21 ರಂದು ರಾಜ್ಯ ವ್ಯಾಪ್ತಿ ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ಕರೆಯ ಮೇರೆಗೆ ಎಸ್ಎಫ್ಐ ಮೆಡ್ಲೇರಿ ಗ್ರಾಮ ಘಟಕ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಣೇಬೆನ್ನೂರು ತಾಲ್ಲೂಕು ಸಮಿತಿ ಸಹಕಾರ್ಯದರ್ಶಿ ಶ್ರೀಕಾಂತ್ ಭಾರ್ಕಿ. ಗ್ರಾಮ ಘಟಕ ಎಸ್ಎಫ್ಐ ಮುಖಂಡರಾದ ಶಿವರಾಜ್ ದೊಡ್ಡಬಳ್ಳಾಪುರ, ಮಾರುತಿ ತಳವಾರ, ಮಂಜುನಾಥ ಚಕ್ರಸಾಲಿ, ಸುನೀಲ್ ಪೂಜಾರ್, ಚಂದ್ರು ಭಾರ್ಕಿ, ಪುನಿತ್ ವ್ಯಾಪಾರಿ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *