ಅ.೧೧ರಂದು ಮೆಟ್ರೋ ನಿಲ್ದಾಣಗಳ ಮುಚ್ಚಿಕೆ ಮತ್ತು ಟ್ರೇನ್‌ ರದ್ಧತಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯ ವಿಶೇಷ ವಿಚಾರಣೆ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಿಜೆಪಿ  ಮತ್ತು ವಿರೋಧ ಪಕ್ಷಗಳು ಪ್ರಕಟಿಸಿದ್ದ ಅಕ್ಟೋಬರ್ 10ರ ಪ್ರತಿಭಟನೆಗಳನ್ನು ನಿಭಾಯಿಸುವಾಗ ಸಾರಿಗೆ ಸೇವೆಗಳ ಮೇಲೆ ಸಂಪೂರ್ಣ ನಿಷೇಧ ಹೇರಬಾರದೆಂದು ಅಕ್ಟೋಬರ್ 9ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲಂಘಿಸಿ, ಅಧಿಕಾರಿಗಳು ದೆಹಲಿ ಮೆಟ್ರೋ ನಿಲ್ದಾಣಗಳನ್ನು ಮುಚ್ಚುವುದನ್ನು ಮತ್ತು ರೈಲು ಸೇವೆಗಳನ್ನು ರದ್ದುಗೊಳಿಸುವುದನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಅಕ್ಟೋಬರ್‌೧೧ (ಭಾನುವಾರ)ರಂದು  ವಿಶೇಷವಾಗಿ  ಕಳಿತುಕೊಳ್ಳಲಿದೆ ಎಂದು ಲೈವ್‌ ಲಾ(ಅಕ್ಟೋಬರ್‌೧೦) ವರದಿ ಮಾಡಿದೆ.

ನ್ಯಾಯಮೂರ್ತಿ ಜೊಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ವಿಷಯದ ವಿಚಾರಣೆ ನಡೆಸಲಿದೆ.

ನ್ಯಾಯಾಲಯದ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ (ಐಎಎಸ್), ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ (ಐಪಿಎಸ್) ಮತ್ತು ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ಅಧ್ಯಕ್ಷೆ ಡಿ. ತಾರಾ (ಐಎಎಸ್) ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಈ ಅರ್ಜಿಯನ್ನು ಸಲ್ಲಿಸಿದ ಸೈಲೇಂದ್ರ ಮಣಿ ತ್ರಿಪಾಠಿ ಕೋರಿದ್ದಾರೆ.

ದೆಹಲಿ ನಿವಾಸಿಗಳಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಸಾರ್ವಜನಿಕ ಸಾರಿಗೆಯನ್ನು ನಿಯಂತ್ರಿತ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುಮತಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದರೂ, ಅಧಿಕಾರಿಗಳು ಮೆಟ್ರೋ ನಿಲ್ದಾಣಗಳನ್ನು ಬೇಕಾಬಿಟ್ಟಿಯಾಗಿ  ಮುಚ್ಚುವುದನ್ನು ಮತ್ತು ರೈಲು ಸೇವೆಗಳನ್ನು ಅನಗತ್ಯವಾಗಿ ರದ್ದುಗೊಳಿಸುವುದನ್ನು ಮುಂದುವರಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಇದನ್ನೂ ಓದಿ : ದೆಹಲಿಯಲ್ಲಿ ಎಸ್‌ಐಆರ್‌ ವಿರೋಧಿ ಹೋರಾಟ ಮುಂದುವರಿಕೆ; ನಿಲ್ಲದ ಪೊಲೀಸ್‌ ದೌರ್ಜನ್ಯ

ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿದಿರುವ ನಿರ್ಬಂಧಗಳು ಸಾರ್ವಜನಿಕ ಜೀವನವನ್ನು ತೀವ್ರವಾಗಿ “ಸ್ತಬ್ಧಗೊಳಿಸಿವೆ” ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿವೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ಈ ನ್ಯಾಯಾಂಗ ನಿಂದನೆ ಅರ್ಜಿಯು, ಅಕ್ಟೋಬರ್ 9 ರಂದು ‘ಎಂ.ಎ. ಬೇಬಿ vs ಭಾರತ ಒಕ್ಕೂಟ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶದಿಂದ ಉದ್ಭವಿಸಿದೆ. ಈ ಪ್ರಕರಣದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ joಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಪರಿಶೀಲಿಸಿತ್ತು.

ದಿಲ್ಲಿ ಪೊಲೀಸರು ಡಿಎಂಆರ್‌ಸಿ (DMRC) ಗೆ 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚುವಂತೆ ನಿರ್ದೇಶಿಸಿ ಹೊರಡಿಸಿದ ಸೂಚನೆಗಳು ಹಾಗೂ ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಆಗಮಿಸುವ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ರದ್ದತಿಗೆ ಸಂಬಂಧಿಸಿದ ಮತ್ತೊಂದು ಸೂಚನೆಯನ್ನು ನ್ಯಾಯಾಲಯವು ಗಮನಿಸಿತ್ತು.

ಅಗತ್ಯ ಸಾರ್ವಜನಿಕ ಸಾರಿಗೆಯ ಮೇಲೆ ಸಂಪೂರ್ಣ ನಿಷೇಧ ಹೇರುವಂತಿದ್ದ ಈ ಅಧಿಸೂಚನೆಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ ಕ್ರಮಗಳಂತೆ (overreaching) ಕಂಡುಬರುತ್ತಿವೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಮೆಟ್ರೋ ರೈಲುಗಳ ಸಂಚಾರದ ಮೇಲೆ ಯಾವುದೇ ಸಂಪೂರ್ಣ ನಿಷೇಧವಿರಬಾರದು ಎಂದು ಸ್ಪಷ್ಟಪಡಿಸಿತು. ಅದೇ ವೇಳೆ, ‘ಅನುಪಾತದ ತತ್ವ’ಕ್ಕೆ (principle of proportionality) ಅನುಗುಣವಾಗಿ ಸೂಕ್ತ ರೀತಿಯಲ್ಲಿ ಕಾರ್ಯಾಚರಣೆಯನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಅವಕಾಶ ನೀಡಿತು.

ಇದನ್ನೂ ನೋಡಿ : SIR ಹೋರಾಟ | ಪ್ರಜಾಪ್ರಭುತ್ವಕ್ಕೆ ಬೀಗ ಹಾಕಿದ ಕೇಂದ್ರ! ತಡೆಗೋಡೆ ಭೇದಿಸಿ ಬೀದಿಗಿಳಿದ Gen Z

Donate Janashakthi Media

Leave a Reply

Your email address will not be published. Required fields are marked *