ಜಿಎಸ್‌ಟಿ ಸಂಗ್ರಹ ಹೆಚ್ಚಳದ ನಗಾರಿ

ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬುದು ಕನ್ನಡದ ಒಂದು ಗಾದೆ. ಆರ್ಥಿಕದ ಮಾತುಗಳು ಬಂದಾಗ ಗಾತ್ರ ಹೆಚ್ಚಾಗುವುದೆಲ್ಲಾ ಬೆಳವಣಿಗೆ ಎಂದರೆ ಅದು ನಂಬಿಕೆಗೆ ಅರ್ಹ ವಾಗುವುದಿಲ್ಲ. ಜಿ ಎಸ್‌ ಟಿ ಸಂಗ್ರಹ ಜಾಸ್ತಿ ಆಗಿರುವುದನ್ನು ಇಟ್ಟುಕೊಂಡು ಆರ್ಥಿಕ ಬೆಳವಣಿಗೆ ಆಗಿದೆ ಎಂದು ಹೇಳುವ ಪ್ರಯತ್ನವನ್ನು ಅಧಿಕಾರದಲ್ಲಿರುವವರು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಯಾಕೆಂದರೆ ಜಿ ಎಸ್‌ ಟಿ ಹೇಗೆ ಹೆಚ್ಚಾಯಿತು ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿ ನೋಡಿದರೆ ವಾಸ್ತವ ಸರಿಯಾಗಿ ಅರ್ಥವಾಗುತ್ತದೆ. ಈಗ ಅಂಕಿ-ಸಂಖ್ಯೆಗಳನ್ನು ನೋಡೊಣ. ಜಿಎಸ್‌ಟಿ 

ಇದೇ ಜುಲೈ ತಿಂಗಳಿನ ಜಿ ಎಸ್‌ ಟಿ ಸಂಗ್ರಹ 2.11 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಇದು ಕಳೆದ ವರ್ಷ ದ ಜುಲೈ ತಿಂಗಳ ಸಂಗ್ರಹಕ್ಕಿಂತ ಶೇ 15.4 ರಷ್ಟು ಹೆಚ್ಚು. ಇದು ಆರ್ಥಿಕ ಬೆಳವಣಿಗೆಯಿಂದಾಗಿ ಆದದ್ದು ಎಂದು ಹೇಳುವ ಮೊದಲು ಸರಿಯಾಗಿ ವಿಷಯ ಸಂಗ್ರಹಿಸಿ ವಿಶ್ಲೇಷಣೆ ಮಾಡಿ ನಂತರ ಹೇಳಬೇಕಲ್ಲವೆ? ಆಮದಿನ ಮೇಲಿನ ಶೇ 26.9 ರಷ್ಟು ಹೆಚ್ಚಾದರೆ, ಆಂತರಿಕ ಕಂದಾಯ ಸಂಗ್ರಹಣೆ ಶೇ 4.5 ರಷ್ಟು ಹೆಚ್ಚಿದೆ. ಜಿ ಎಸ್‌ ಟಿ ಸಂಗ್ರಹ ಹೆಚ್ಚಳ ವ್ಯಾಪಾರ ವಹಿವಾಟಿನ ಮೇಲಿನ ತೆರಿಗೆ ಸಂಗ್ರಹ ಹೆಚ್ಚಾದ ಕಾರಣ ಒಟ್ಟಾರೆ ಜಿ ಎಸ್‌ ಟಿ ಸಂಗ್ರಹ ಹೆಚ್ಚಳವಾಗಿದೆ ಹೊರತು ಆಂತರಿಕ ಉತ್ಪಾದನೆ ಹೆಚ್ಚಳವಾಗಿ ಜಿ ಎಸ್‌ ಟಿ ಸಂಗ್ರಹ ಹೆಚ್ಚಳವಾದ ಕತೆಯಲ್ಲ. ಆದ್ದರಿಂದಲೇ ಜಿ ಎಸ್‌ ಟಿ ಸಂಗ್ರಹ ಹೆಚ್ಚಳದ ಒಂದೇ ಮುಖ ನೋಡಿ ಆರ್ಥಿಕ ಬೆಳವಣಿಗೆ ಆಗಿದೆ ಎಂದು ಹೇಳುವುದು ತಪ್ಪು. ಇದಲ್ಲದೆ ಬಂಡವಾಳ ಸರಕುಗಳ (ಸಾಮಾನ್ಯವಾಗಿ ಉತ್ಪಾದನೆಯಲ್ಲಿ ಬಳಕೆಯಾಗುವ ಸರಕುಗಳು) ಆಮದು ಮತ್ತು ರೂಪಾಯಿಯ ಬೆಲೆಯಲ್ಲಿ ಇಳಿತಗಳೂ ಈ  ಜಿ ಎಸ್‌ ಟಿ ಸಂಗ್ರಹ ಹೆಚ್ಚಳದಲ್ಲಿ ಸೇರಿಕೊಂಡಿವೆ ಎನ್ನುವುದನ್ನು ನಾವು ಗಮನಿಸಬೇಕಾಗುತ್ತದೆ. ಜಿಎಸ್‌ಟಿ 

ಇದನ್ನೂ ಓದಿ : ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಒಡಿಶಾದಲ್ಲಿ ಭಾರಿ ಮಳೆ: ಆರೆಂಜ್ ಅಲರ್ಟ್

ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿಯ ಅಪಮೌಲ್ಯಿಕರಣ ಶೇ 10 ರಿಂದ 12 ರವರೆಗೆ ಆದಾಗ ತೈಲ, ಎಲೆಕ್ಟ್ರೊನಿಕ್ಸ, ಯಂತ್ರೋಪಕರಣ ಮತ್ತು ರಾಸಾಯನಿಕಗಳ ಆಮದಿನ ವೆಚ್ಚ ಒಟ್ಟು ಆಮದಿನ ಶೇ50 ರಷ್ಟಾಗುತ್ತದೆ. ಚಿನ್ನದ ಮೇಲಿನ  ಜಿ ಎಸ್‌ ಟಿ ಸೇರಿದರೆ ಆಮದಿನ ಮೇಲಿನ ಜಿ ಎಸ್‌ ಟಿ ಸಾಕಷ್ಟು ದೊಡ್ಡ ಮೊತ್ತವೇ ಆಗುತ್ತದೆ. ಇದಲ್ಲದೆ, ಸಗಟು ಬೆಲೆ ಹಣದುಬ್ಬರ, ಸೇವೆಗಳಲ್ಲಿನ ಕಡಿಮೆ ಬೆಳವಣಿಗೆ ದರ ಇತ್ಯಾದಿಗಳೆಲ್ಲವೂ ಇಲ್ಲಿ ಹಾನಿಕಾರಕ ಪಾತ್ರ ವಹಿಸಿವೆ. ಜಿಎಸ್‌ಟಿ 

ಇನ್ನು ಹಣಕಾಸು ವಾಸ್ತವಕ್ಕೆ ಬಂದರೆ, 16 ರಾಜ್ಯಗಳು ಮಾತ್ರ ದೇಶದ ಸರಾಸರಿಗಿಂತ ಹೆಚ್ಚಿನ ಜಿ ಎಸ್‌ ಟಿ ಬೆಳವಣಿಗೆ ತೋರಿಸಿವೆ. ಆರ್ಥಿಕ ಬೆಳವಣಿಗೆಯನ್ನು ಸರಿಯಾದ ತಳಹದಿಯ ಮೇಲೆ ಗ್ರಹಿಸಿ ಅದು ಆಗಿರುವುದನ್ನು ತೋರಿಸಿದರೆ ಅಂತಹ ವಿಶ್ಲೇಷಣೆಗೆ ವಿಶ್ವಾಸಾರ್ಹತೆ ಬರುತ್ತದೆ. ಬರೀ ನಗಾರಿ ಬಾರಿಸುವುದರಿಂದಲ್ಲ. ಅಲ್ಲವೇ? ಜಿಎಸ್‌ಟಿ 

(ಆಧಾರ: ದಿ ಹಿಂದು ಪತ್ರಿಕೆಯ ದಿನಾಂಕ 06.08.2026 ರ ಸಂಪಾದಕೀಯ)

ಇದನ್ನೂ ನೋಡಿ : ಪಿಟಿಸಿಎಲ್ ಕಾಯ್ದೆ ಇದ್ದರೂ ದಲಿತರ ಭೂಹಕ್ಕು ಏಕೆ ರಕ್ಷಿತವಾಗಿಲ್ಲ? | ಡಾ. ಜಾಮದಾರ್ Janashakthi Media

Donate Janashakthi Media

Leave a Reply

Your email address will not be published. Required fields are marked *