‘ಚಲೋ ಸಂಸತ್’ ಮೆರವಣಿಗೆ ಉದ್ವಿಗ್ನತೆ: ಲಾಠಿ ಚಾರ್ಜ್, ಭಾರೀ ಭದ್ರತೆ ನಡುವೆ ಪ್ರತಿಭಟನೆ

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ‘ಚಲೋ ಸಂಸತ್’ ಪ್ರತಿಭಟನೆ ಮೆರವಣಿಗೆ ಜುಲೈ 20ರಂದು ಭಾರೀ ಭದ್ರತಾ ವ್ಯವಸ್ಥೆಯ ನಡುವೆ ಜಂತರ್ ಮಂತರ್‌ನಲ್ಲಿ ಆರಂಭವಾಯಿತು. ಈ ನಡುವೆ ಕಾರ್ಯಕರ್ತ ಸೋನಂ ವಾಂಗ್ಚುಕ್ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಪ್ರತಿಭಟನೆಯಲ್ಲಿ ಆಜಾದ್ ಸಮಾಜ್ ಪಾರ್ಟಿ (ಕಾಂಶೀರಾಮ್) ನಾಯಕ ಚಂದ್ರಶೇಖರ್ ಆಜಾದ್, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯ್ತ್ರಾ ಹಾಗೂ ನಟರಾದ ಪ್ರಕಾಶ್ ರಾಜ್ ಮತ್ತು ಶಬಾನಾ ಅಜ್ಮಿ ಭಾಗವಹಿಸಿ ಬೆಂಬಲ ಸೂಚಿಸಿದರು.

ಇದನ್ನೂ ಓದಿ: ಜಂತರ್ ಮಂತರ್ ಉದ್ವಿಗ್ನತೆ: ಪ್ರತಿಭಟನೆ ಸ್ಥಳದಲ್ಲಿ ಅಶಾಂತಿ ಸೃಷ್ಟಿ ಆರೋಪ

ಸಂಸತ್ತಿನತ್ತ ಮೆರವಣಿಗೆ ಆರಂಭವಾದಾಗ ಕೆಲವರು ಕಲ್ಲು ತೂರಿದರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್ ನಡೆಸಿ, ಸೌಮ್ಯ ಬಲಪ್ರಯೋಗದ ಮೂಲಕ ಗುಂಪನ್ನು ಚದುರಿಸಿದರು.

ಮುಂಗಾರು ಅಧಿವೇಶನದ ಮೊದಲ ದಿನವೇ ಈ ಮೆರವಣಿಗೆ ನಡೆಸಲು ಯೋಜನೆ ಮಾಡಲಾಗಿದ್ದರೂ, ದೆಹಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ನವದೆಹಲಿಯ ಬಹುತೇಕ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಂಸತ್ ಸುತ್ತಮುತ್ತ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ.

ಪ್ರತಿಭಟನೆ ಮತ್ತು ಪೊಲೀಸರ ಕ್ರಮದಿಂದ ರಾಜಧಾನಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ನೋಡಿ: ಪಂಚಮ’ ಪತ್ರಿಕೆ ಆರ್ಥಿಕ ಸಂಕಷ್ಟದಿಂದಲ್ಲ, ಚಳವಳಿಯೊಳಗಿನ ವಿಶ್ವಾಸದ ಕೊರತೆಯಿಂದ ಸ್ಥಗಿತ: ಎಚ್. ಗೋವಿಂದಯ್ಯ

Donate Janashakthi Media

Leave a Reply

Your email address will not be published. Required fields are marked *