ಕೊಲ್ಕತ್ತಾ: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಚುನಾವಣಾ ಆಯೋಗ (EC) ವಿರುದ್ಧ ಕೊಲ್ಕತ್ತಾ ಹೈಕೋರ್ಟ್ನಲ್ಲಿ ಒಟ್ಟು 110 ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ಆಯೋಗ ತಿಳಿಸಿದೆ. ಆದರೆ ಈ ಎಲ್ಲ ಪ್ರಕರಣಗಳಲ್ಲಿಯೂ ನ್ಯಾಯಾಂಗವು ಆಯೋಗದ ನಿರ್ಧಾರಗಳನ್ನು ಸಮರ್ಥಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಸಿ
ಅಧಿಕೃತ ಮಾಹಿತಿಯ ಪ್ರಕಾರ, ಮಾರ್ಚ್ 15ರಂದು ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಸಿ
“ಯಾವುದೇ ಪ್ರಕರಣದಲ್ಲಿಯೂ ಚುನಾವಣಾ ಆಯೋಗದ ವಿರುದ್ಧ ಅನನುಕೂಲಕರ ಆದೇಶ ಹೊರಬಂದಿಲ್ಲ,” ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮಮತಾ ನಿವಾಸದ ಹೊರಗೆ ಭಾರೀ ಭದ್ರತೆ: ಟಿಎಂಸಿ-ಬಿಜೆಪಿ ನಡುವೆ ವಾಗ್ವಾದ
ಏಪ್ರಿಲ್ನಲ್ಲಿ ಎರಡು ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 15 ವರ್ಷದ ಆಡಳಿತಕ್ಕೆ ತೆರೆ ಎಳೆದು ಮೊದಲ ಬಾರಿಗೆ ಸರ್ಕಾರ ರಚಿಸಿತು.
ಈ ಹೈ-ಪ್ರೊಫೈಲ್ ಚುನಾವಣೆಯ ವೇಳೆ ಚುನಾವಣಾ ಆಯೋಗದ ವಿರುದ್ಧ ಹಲವು ಕಾನೂನು ಸವಾಲುಗಳು ಮತ್ತು ಟೀಕೆಗಳು ಕೇಳಿಬಂದಿದ್ದವು. ವಿಶೇಷವಾಗಿ ಟಿಎಂಸಿ, ಬಿಜೆಪಿ ಪರವಾಗಿ ಪಕ್ಷಪಾತದಿಂದ ಚುನಾವಣೆಯನ್ನು ನಡೆಸಲಾಗಿದೆ ಎಂದು ಆರೋಪಿಸಿತ್ತು.
ಇದರ ಜೊತೆಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೇಲೂ ಟಿಎಂಸಿ ಟೀಕೆ ವ್ಯಕ್ತಪಡಿಸಿತ್ತು. ಈ ಅಭಿಯಾನವನ್ನು ಬಿಜೆಪಿ ಬೆಂಬಲಿಸದ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ಆರೋಪಿಸಿತ್ತು.
ಈ ವಿರೋಧದ ಭಾಗವಾಗಿ ಆಗಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಸ್ವತಃ ಹಾಜರಾಗಿ SIR ಪ್ರಕ್ರಿಯೆಯನ್ನು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗ, ಮೃತರು, ನಕಲಿ ನೋಂದಣಿಗಳು, ಸ್ಥಳಾಂತರಗೊಂಡವರು, ಗೈರು ಹಾಜರಿರುವವರು ಹಾಗೂ ವಿದೇಶಿ ಪ್ರಜೆಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದಲೇ SIR ಕೈಗೊಳ್ಳಲಾಗಿದೆ ಎಂದಿದ್ದರು.
ಇದನ್ನೂ ನೋಡಿ: ‘ಜನತಾ ಪ್ರಜಾಪ್ರಭುತ್ವಕ್ಕಾಗಿ ಬದುಕು’: ಕಾರ್ಮಿಕ ಚಳುವಳಿಯ ಹೆಜ್ಜೆಗುರುತು Janashakthi Media
