ಕೆಲಸದ ಒತ್ತಡ ಅಪಘಾತದಲ್ಲಿ ಎಸ್.ಐ. ಅರ್. ಸೂಪವೈಜರ್ ಸಾವು

ಜನ – ನೌಕರ ಸ್ನೇಹಿ ಕಾರ್ಯವಿಧಾನ ಸಹಾಯ ಕೇಂದ್ರಗಳ ತೆರೆಯುವಿಕೆಗೆ ಸಿಪಿಐ(ಎಂ) ಆಗ್ರಹ
ತುಮಕೂರು: ಗೂಳೂರು ಗ್ರಾಮದ ವ್ಯಾಪ್ತಿಯಲ್ಲಿ ಸಂಭವಿಸಿದ ದ್ವಿಚಕ್ರ ವಾಹನ-ಲಾರಿ ಅಪಘಾತದ ಕೆಲಸದ ಒತ್ತಡ ಅಪಘಾತದಲ್ಲಿ ಎಸ್.ಐ. ಅರ್. ಸೂಪವೈಜರ್ ಭಾವನ ಅವರು ಸಾವಿಗೆ ಇಡಾಗಿದ್ದಾರೆ , ಇದು ಕಳವಳಕಾರಿ ವಿಷಯ ಎಂದು ಸಿಪಿಐ ಎಂ ತುಮಕೂರು ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ.

ಅತಿಯಾದ ಕೆಲಸದ ಒತ್ತಡ, ಪರಸ್ಪರ ವಿರೋಧಾತ್ಮಕ ಸೂಚನೆಗಳು ಮತ್ತು ಅಮಾನುಷ ಕಾರ್ಯವಿಧಾನಗಳಿಂದಾಗಿ ಸೌಕರರು, ವಿಶೇಷವಾಗಿ ಕೆಳ ಹಂತದ ನೌಕರರು ಅಪಾರ ತೊಂದರೆಗಳನ್ನು ಎದುರಿಸುತ್ತಿದ್ದಾರೆಂದು ಸಿಪಿಐ ಎಂ. ತೀವ್ರವಾಗಿ ಆರೋಪಿಸಿದೆ.

ಬಿಎಲ್ಒಗಳು, ಗ್ರಾಮ ಲೆಕ್ಕಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಕ್ಷೇತ್ರ ಸಿಬ್ಬಂದಿಗಳು ದಿನವಿಡಿ ಕರ್ತವ್ಯದಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶ್ರಾಂತಿಯಿಲ್ಲದ ಕೆಲಸ, ಅನಿಶ್ಚಿತ ಸಮಯ ಮತ್ತು ನಿರಂತರ ಟೀಕೆಗಳು ನೌಕರರ ಆರೋಗ್ಯವನ್ನು ಕುಂದಿಸುತ್ತಿವೆ. ಮತದಾರರ ಪಟ್ಟಿ ನವೀಕರಣ, ಹತ್ತು ಹಲವು ಜವಾಬ್ದಾರಿಗಳನ್ನು ಒಬ್ಬೊಬ್ಬ ಸಿಬ್ಬಂದಿಗೆ ವಹಿಸಲಾಗುತ್ತಿದೆ.

ಇದನ್ನೂ ಓದಿ: ಫಿಫಾ ವಿಶ್ವಕಪ್‌ 2026| ರೌಂಡ್ ಆಫ್ 16ಗೆ ವೇದಿಕೆ ಸಜ್ಜು ; ಫುಟ್ಬಾಲ್‌ ದಿಗ್ಗಜರ ನಡುವೆ ಜಿದ್ದಾಜಿದ್ದಿನ ಹಣಾಹಣಿ

ಪ್ರಮುಖ ಸಮಸ್ಯೆಯೆಂದರೆ, ಎಣಿಕೆ (Enumeration) ನಮೂನೆಗಳ ಭರ್ತಿ ವಿಷಯದಲ್ಲಿ ಉನ್ನತ ಅಧಿಕಾರಿಗಳು ವಿರೋಧಾತ್ಮಕ ಸೂಚನೆಗಳನ್ನು ನೀಡಿದ್ದಾರೆ. ಮೊದಲಿಗೆ “ಎಣಿಕೆ ನಮೂನೆಗಳನ್ನು ಭರ್ತಿ ಮಾಡಬೇಡಿ” ಎಂದೂ, ಕೆಲವು ದಿನಗಳ ನಂತರ “ಎಲ್ಲಾ ಎಣಿಕೆ ನಮೂನೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿ” ಎಂದೂ ಆದೇಶಿಸಲಾಗಿದೆ.

ಈ ದ್ವಂದ್ವ ಸೂಚನೆಗಳಿಂದಾಗಿ ಬಿಎಲ್ಒಗಳು ಸಂಪೂರ್ಣ ಗೊಂದಲಕ್ಕೊಳಗಾದರು. ಈಗಾಗಲೇ ಭರ್ತಿ ಮಾಡದೆ ಬಿಟ್ಟಿದ್ದ ನಮೂನೆಗಳನ್ನು ಹಿಂತಿರುಗಿ ಭರ್ತಿ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಇದರಿಂದ ಸಿಬ್ಬಂದಿಗಳಿಗೆ ದುಪ್ಪಟ್ಟು ಕೆಲಸದ ಒತ್ತಡ, ಅತಿಯಾದ ಅವಧಿ ಮತ್ತು ಮಾನಸಿಕ ಒತ್ತಡ ಉಂಟಾಯಿತು. ವಿವಿಧ ಮೂಲಗಳಿಂದ (ವ್ಹಾಟ್ಸಾಪ್, ದೂರವಾಣಿ, ಪತ್ರ, ಇಮೇಲ್) ಪರಸ್ಪರ ವಿರುದ್ಧವಾದ ಸೂಚನೆಗಳು ಬರುತ್ತಿವೆ ಎಂದು ಹಲವು ಬಿ.ಎಲ್ ಓ ಗಳು ಅಳಲು ತೋಡಿಕೊಂಡಿದ್ದಾರೆ ಎಂದು ಸಿಪಿಐ ಎಂ. ಅರೋಪಿಸಿದೆ.

ಅಪಘಾತದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಸರಕಾರಿ ಉದ್ಯೋಗ ನೀಡಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

ಹೆಲ್ಪ್ ಡೆಸ್ಕ್ ಗೆ ಸಿಪಿಐ(ಎಂ) ಬೇಡಿಕೆ:

1. ಪ್ರತಿಯೊಂದು ವಾರ್ಡ್ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸ್ನೇಹಿ ಸಹಾಯ ಕೇಂದ್ರ (ಊeಟಠಿ ಆesಞ) ತೆರೆಯಬೇಕು.

2. ಈ ಕೇಂದ್ರಗಳು ಸಾರ್ವಜನಿಕರಿಗೆ ಎಲ್ಲಾ ಎಸ್.ಐ. ಆರ್ ಮಾಹಿತಿ, ಅರ್ಜಿ ಭರ್ತಿಗೆ ಸಹಾಯ, ದಾಖಲೆಗಳ ಸಂಗ್ರಹಣೆ, ಅರ್ಜಿ ಸ್ಥಿತಿ ಟ್ರ‍್ಯಾಕಿಂಗ್ ಮತ್ತು ದೂರು ನೋಂದಣಿ ಸೌಲಭ್ಯಗಳನ್ನು ಒದಗಿಸಬೇಕು.

3. ಕ್ಷೇತ್ರ ಸಿಬ್ಬಂದಿಗಳಿಗೆ ಕಂಪ್ಯೂಟರ್, ಪ್ರಿಂಟರ್, ಅಂತರ್ಜಾಲ, ತರಬೇತಿ ಮತ್ತು ಪ್ರಚಾರ ಸಾಮಗ್ರಿಗಳನ್ನು ಒದಗಿಸಬೇಕು.

4. ಎರಡು ಸಿಬ್ಬಂದಿಗಳನ್ನು ನಿಯೋಜಿಸಿ – ಒಬ್ಬರು ಕಚೇರಿಯಲ್ಲಿ, ಇನ್ನೊಬ್ಬರು ಗ್ರಾಮಗಳಲ್ಲಿ ಸೇವೆ ನೀಡಬೇಕು.

5. ಕೇಂದ್ರವು ಬೆಳಿಗ್ಗೆ 9.00 ರಿಂದ ಸಂಜೆ 6.00 ರವರೆಗೆ ಕಾರ್ಯನಿರ್ವಹಿಸಬೇಕು.

6. ದ್ವಂದ್ವ ಸೂಚನೆಗಳಿಗೆ ಕಡಿವಾಣ ಹಾಕಬೇಕು.

7. ಎಸ್. ಐ. ಆರ್ ಅರ್ಜಿ ವಿತರಿಸಿದ ನಂತರ ಮತ್ತೆ ನಮೂನೆಗಳನ್ನು ಭರ್ತಿ ಮಾಡುವಂತೆ ಸೂಚಿಸಬಾರದು.

8. ಎಲ್ಲಾ ಸೂಚನೆಗಳು ಲಿಖಿತ ರೂಪದಲ್ಲಿ ಮತ್ತು ಏಕೀಕೃತವಾಗಿರಬೇಕು.

9. ಸೂಚನೆ ಬದಲಾಯಿಸಬೇಕಾದಲ್ಲಿ ಸ್ಪಷ್ಟ ಕಾರಣ ಮತ್ತು ಸಾಕಷ್ಟು ಸಮಯ ನೀಡಬೇಕು.

10. ಪ್ರತಿ ನೌಕರರ ಕರ್ತವ್ಯದ ವ್ಯಾಪ್ತಿ, ಸಮಯ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿವರಿಸಬೇಕು.

11. ನೌಕರರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವಾಗ ಅವರ ಆರೋಗ್ಯ ಮತ್ತು ಸಮಾಜಮುಖಿ ಸೇವೆಯನ್ನು ಗಣನೆಗೆ ತೆಗೆದುಕೊಳ್ಳಬೇಕು.

12. ದೂರುಗಳಿಗೆ ಸ್ವತಂತ್ರ ಸಮಿತಿ ರಚಿಸಬೇಕು.

ಸಿಪಿಐ(ಎಂ) ತುಮಕೂರು ಜಿಲ್ಲಾ ಸಮಿತಿಯು ಸರಕಾರವು ನೌಕರರ ಒತ್ತಡವನ್ನು ಕಡಿಮೆಗೊಳಿಸುವ, ಪಾರದರ್ಶಕ, ಸಮಾಜಮುಖಿ ಮತ್ತು ಜನಸ್ನೇಹಿ ಆಡಳಿತ ವ್ಯವಸ್ಥೆಗೆ ಆದ್ಯತೆ ನೀಡಬೇಕೆಂದು ತೀವ್ರವಾಗಿ ಒತ್ತಾಯಿಸಿದೆ.

ಇದನ್ನೂ ನೋಡಿ: ಆರ್‌ಎಸ್‌ಎಸ್‌ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?

Donate Janashakthi Media

Leave a Reply

Your email address will not be published. Required fields are marked *