ನವದೆಹಲಿ: ರೇಖಾ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ನಡೆದ ದೆಹಲಿ ಸಚಿವ ಸಂಪುಟ ಸಭೆಯಲ್ಲಿ ‘ದೆಹಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಆರೋಗ್ಯ ಯೋಜನೆ’ಗೆ ಅನುಮೋದನೆ ನೀಡಲಾಗಿದೆ.
ಈ ಯೋಜನೆಯಿಂದ ನೋಂದಾಯಿತ ಸುಮಾರು 2.70 ಲಕ್ಷ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಸೇರಿ ಸುಮಾರು 10 ಲಕ್ಷ ಜನರಿಗೆ ಪ್ರಯೋಜನವಾಗಲಿದೆ.
ಯೋಜನೆಯಡಿ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳು ಲಭ್ಯವಾಗಲಿವೆ. ಸಂಪೂರ್ಣ ಚಿಕಿತ್ಸಾ ಪ್ರಕ್ರಿಯೆ ನಗದುರಹಿತ (cashless) ಆಗಿದ್ದು, ಯಾವುದೇ ಆರ್ಥಿಕ ಭಾರವನ್ನು ಅವರು ಹೊರುವ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ: ನೀಟ್ ಮರುಪರೀಕ್ಷೆ ಬಳಿಕ ಟೆಲಿಗ್ರಾಮ್ ಮೇಲಿನ ನಿರ್ಬಂಧ ತೆರವು
“ರಾಜಧಾನಿಯ ಅಭಿವೃದ್ಧಿಗೆ ಕಟ್ಟಡ ಕಾರ್ಮಿಕರು ಮೂಲಸ್ತಂಭವಾಗಿದ್ದಾರೆ. ಅವರ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಬಲಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ,” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಈ ಯೋಜನೆಯಡಿ ನೋಂದಾಯಿತ ಕಾರ್ಮಿಕರು, ಅವರ ಪತ್ನಿ/ಪತಿ, ಮಕ್ಕಳು ಹಾಗೂ ಪೋಷಕರು ಸೇರಿದಂತೆ ಅರ್ಹ ಕುಟುಂಬ ಸದಸ್ಯರಿಗೆ ಎಂಪ್ಯಾನೆಲ್ ಮಾಡಲಾದ ಆಸ್ಪತ್ರೆಗಳು ಮತ್ತು ಮೊಬೈಲ್ ಆರೋಗ್ಯ ಘಟಕಗಳ ಮೂಲಕ ಗುಣಮಟ್ಟದ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಪ್ರತಿ ಕಾರ್ಮಿಕನಿಗೆ ₹2 ಲಕ್ಷದವರೆಗೆ ಚಿಕಿತ್ಸೆ ಸೌಲಭ್ಯ ದೊರೆಯಲಿದೆ. ಕುಟುಂಬಕ್ಕೆ ಒಟ್ಟು ₹10 ಲಕ್ಷದವರೆಗೆ ಚಿಕಿತ್ಸೆ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಎಲ್ಲಾ ಸೇವೆಗಳು ಸಂಪೂರ್ಣ ನಗದುರಹಿತವಾಗಿರಲಿವೆ.
ಇದನ್ನೂ ನೋಡಿ: “ಟಾಟಾ ಕಂಪನಿಗೆ ವಿದ್ಯುತ್, ಜನತೆಗೆ ಕಾದಿದೆ ಆಪತ್ತು? | ವಿದ್ಯುತ್ ಖಾಸಗೀಕರಣ ವಿರುದ್ಧ ಸಮಾವೇಶ” Janashakthi Media
