BLO ಕೆಲಸದ ಒತ್ತಡ ವಿರೋಧಿಸಿ ಅಂಗನವಾಡಿ ನೌಕರರ ಪ್ರತಿಭಟನೆ

ಬೆಂಗಳೂರು: 6 ವರ್ಷದೊಳಗಿನ ಮಕ್ಕಳನ್ನು ಅಪೌಷ್ಠಿಕತೆಯಿಂದ ಕಾಪಾಡಲು, ಪೂರ್ವ ಪ್ರಾಥಮಿಕ ಶಿಕ್ಷಣ ಕೊಡುವುದು, ಗರ್ಭಿಣಿ – ಬಾಣಂತಿಯರನ್ನು ಕಾಲಕಾಲಕ್ಕೆ ಆರೈಕೆ ಮಾಡುವುದು, ದಿನನಿತ್ಯದ ಕೆಲಸವಾಗಿದೆ 2022 ರಿಂದ ಪ್ರತಿದಿನ ಪೋಷಣ್ ಟ್ರ್ಯಾಕರ್ ಮುಖಾಂತರ ಕೆಲಸದ ಚಟುವಟಿಕೆಗಳನ್ನು ಮೊಬೈಲ್ ಮುಖಾಂತರ ದಾಖಲೀಕರಣ, FRS ಬಂದಿರುವ ಹಿನ್ನಲೆಯಲ್ಲಿ ಪ್ರತಿ ನಿತ್ಯ ಅಂಗನವಾಡಿಯಲ್ಲಿ 6 – 7 ಗಂಟೆ ಸತತ ಕೆಲಸ ಹೀಗೆ ಒತ್ತಡ ಅನೇಕ ರೀತಿಯಲ್ಲಿ ಮಾಡುತ್ತಿದ್ದಾರೆ, ದರ ಜೊತೆ ಈಗ ಬಿಎಲ್‌ಒ ಕೆಲಸ ಹೆಚ್ಚುವರಿಯಾಗುತ್ತಿದೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ  ಅಂಗನವಾಡಿ ನೌಕರರ ಸಂಘ ಜೂನ್‌ 17ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು. ಒತ್ತಡ

ಅಂಗನವಾಡಿ ಕೇಂದ್ರಕ್ಕೆ ಬರುವ ಒಂದು ಮಗುವಿಗೆ ಯಾವುದೆ ಅವಘಡ ಸಂಭವಿಸದ ಹಾಗೆ ನಿಗಾವಹಿಸಿ ಕಾಪಾಡುವ ಕರ್ತವ್ಯ ಅಂಗನವಾಡಿ ಕಾರ್ಯಕರ್ತೆಯದ್ದು ಆಗಿದೆ. ಈ ಹಿನ್ನಲೆಯಲ್ಲಿ BLO ಕೆಲಸ ಸಂಪೂರ್ಣ ಹೆಚ್ಚುವರಿಯಾಗಿದೆ ಎಂದು ಅಧ್ಯಕ್ಷೆ ಎಸ್.ವರಲಕ್ಷ್ಮಿ ಹಾಗೂ ಪ್ರಧಾನ ಕಾರ್ಯದರ್ಶಿ ಸುನಂದಾ. ಹೆಚ್.ಎಸ್ ಹೇಳಿದರು. ಒತ್ತಡ

ಹೆಚ್ಚುವರಿ ಕೆಲಸ ಮಾಡದೇ ICDS ಕೆಲಸಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಮ.ಮ.ಅ.ಇಲಾಖೆ 17/3/2023 ರಲ್ಲಿ ನಿರ್ದೇಶನ ನೀಡಿದೆ, ಚುನಾವಣಾ ಆಯೋಗಕ್ಕೆ ಕೂಡ ಪತ್ರ ಬರೆಯಲಾಗಿದೆ ಎಂದರು. ಒತ್ತಡ

ಇದನ್ನೂ ಓದಿ: ರಾಯಚೂರು | ರೈತರಿಗೆ ಬೀಜ–ಗೊಬ್ಬರ, ಬಡವರಿಗೆ ಸೂರು: ಜಿಲ್ಲಾಧಿಕಾರಿ ಕಚೇರಿ ಎದುರು ಕೆಪಿಆರ್‌ಎಸ್ ಬೃಹತ್ ಧರಣಿ

ಅಂಗನವಾಡಿ ನೌಕರರ ಸಂಘದಿಂದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್‌ರವರಿಗೆ 17/7/2025 ರಂದು ಪತ್ರ ಬರೆದು ಮನವಿಗಳನ್ನು ಕೊಡಲಾಗಿದೆ.ಆದರೂ ಚುನಾವಣಾ ಆಯೋಗದ ತಾಲ್ಲೂಕು ಮತ್ತು ಜಿಲ್ಲಾಧಿಕಾರಿಗಳು ತುಂಬಾ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಸಾವಿರಾರು ಜನರಿಗೆ ಕೆಲಸದಿಂದ ಅಮಾನತ್ತು, ಜೈಲಿಗೆ ಹಾಕಬಹುದು ಎಂಬ ಎಚ್ಚರಿಕೆಯ ನೋಟೀಸ್‌ಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

50 ವರ್ಷಗಳಿಂದ ಗೌರವ ಧನದ ಆಧಾರದ ಮೇಲೆ ಕೆಲಸ ಮಾಡುವ ಈ ಮಹಿಳೆಯರನ್ನು ಇಷ್ಟು ಕ್ರೂರವಾಗಿ ನಡೆಸಿಕೊಳ್ಳುವುದು ನ್ಯಾಯವೇ? ಉಡುಪಿಯಲ್ಲಿ ೩ ಜನರನ್ನು ಕೆಲಸದಿಂದ ತೆಗೆಯಲಾಗಿದೆ. ಈ ಮಾನಸಿಕ ಒತ್ತಡಗಳಿಗೊಳಗಾಗಿ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅನೇಕರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು. ವಿವಿಧ ಜಿಲ್ಲೆಗಳ ಸಾವಿರಾರು ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

BLO ಗಳಾಗಿ ಕೆಲಸ ಮಾಡಲು ಇರುವ ಸಮಸ್ಯೆಗಳು :

1. ಬಹುತೇಕ ಅಂಗನವಾಡಿ ನೌಕರರು ಮಧ್ಯ ವಯಸ್ಸಿನವರು ಮತ್ತು ನಿವೃತ್ತಿಯ ಅಂಚಿನಲ್ಲಿರುವವರು, ಕೆಲವರು ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳು, ಗರ್ಭಕೋಶಕ್ಕೆ ಸಂಬಂಧಿಸಿದ ಖಾಯಿಲೆಗಳು, ಸಕ್ಕರೆ ಖಾಯಿಲೆಯಿಂದ ಕೆಲವರಿಗೆ ಕಣ್ಣಿನ ಸಮಸ್ಯೆ, ಮೂಳೆ ರೋಗಗಳಿಂದ ಬಳಲುತ್ತಿದ್ದಾರೆ. ಮಾತ್ರವಲ್ಲದೇ ಇವರುಗಳು ಸಹಜವಾಗಿ ಅಂಗನವಾಡಿ ಕಾರ್ಯಕರ್ತೆಯ ಹಿಂದಿನ ಆಯ್ಕೆಯ ಮಾನದಂಡಗಳಲ್ಲಿ ವಿದ್ಯಾರ್ಹತೆ S.S.L.C ಮಾತ್ರ ಇದ್ದ ಕಾರಣ ಇತ್ತೀಚಿನ ಮೊಬೈಲ್‌ನ ತಾಂತ್ರಿಕತೆಯಲ್ಲಿ ನೈಪುಣ್ಯತೆ ಕಡಿಮೆ.

2. BLO ಕೆಲಸಗಳಿಗೆ ಪ್ರತ್ಯೇಕ ಯಾವುದೇ ಮೊಬೈಲ್ ನೀಡಿಲ್ಲ.

3. ಮ.ಮ.ಅ.ಇಲಾಖೆಯಿಂದ ನೀಡಿರುವ ಮೊಬೈಲ್‌ನಲ್ಲಿ ಸಾಮರ್ಥ್ಯ ಕಡಿಮೆ ಇದೆ.

4. ಮೊಬೈಲ್‌ಗೆ ಕೊಡುತ್ತಿರುವ ಕರೆನ್ಸಿ ಹಣ ಸಾಕಾಗುತ್ತಿಲ್ಲ.

5. ನೆಟ್‌ವರ್ಕ್ ಸಮಸ್ಯೆ ಬಹಳ ಇರುವುದರಿಂದ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಕಛೇರಿಗಳಿಂದ ಕೆಲಸ ಮಾಡಲು ಒತ್ತಡ ಹೇರುವುದು.

6. ಚುನಾವಣಾ ಅಧಿಕಾರಿಗಳು ಸಂಜೆಯ ಸಮಯದಲ್ಲಿ ಸಭೆಗಳನ್ನು ನಡೆಸುತ್ತಾರೆ. ಗ್ರಾಮಾಂತರ ಪ್ರದೇಶಗಳಿಗೆ ಹೋಗುವುದು ಮಧ್ಯರಾತ್ರಿ ಆಗುವುದರಿಂದ ಪ್ರಯಾಣದ ವೆಚ್ಚ ಹೆಚ್ಚು. ಕೌಟುಂಬಿಕ ಸಮಸ್ಯೆಗಳು ಹೆಚ್ಚಿವೆ.

7. ಈ ರೀತಿಯ ಸಭೆಗಳಿಗೆ ಬಂದು ಹೋಗುವ TA/DA ಹಣ ಇಲ್ಲ.

8. ತನ್ನ ಅಂಗನವಾಡಿ ಕೇಂದ್ರದ ವ್ಯಾಪ್ತಿಯನ್ನು ಬಿಟ್ಟು ಇತರೆ ಪ್ರದೇಶಗಳನ್ನು ಕೂಡ ಕೊಟ್ಟಿದ್ದಾರೆ. ಕೆಲವರಿಗೆ 5 – 6 ಗ್ರಾಮಗಳು ಬರುತ್ತವೆ.

9. ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯೂ ಇರುವುದಿಲ್ಲ ೩ ಸಾವಿರ ಕಾರ್ಯಕರ್ತೆ ಹುದ್ದೆ 9 ಸಾವಿರ ಸಹಾಯಕಿ ಹುದ್ದೆ ಖಾಲಿಯಿದೆ. ಕೆಲವೆಡೆ ಅಂಗನವಾಡಿ ಕಾರ್ಯಕರ್ತೆ ಬೇರೆ ಕೇಂದ್ರದ ಜವಾಬ್ದಾರಿ ನಿರ್ವಹಿಸಬೇಕಿದೆ.

10. ಚುನಾವಣಾ ಆಯೋಗವು ಜಿಲ್ಲಾ ಆಸ್ಪತ್ರೆಯಿಂದಲೇ ಅನಾರೋಗ್ಯ ಪ್ರಮಾಣಪತ್ರ ಪಡೆಯಲು ಒತ್ತಡ ಹೇರಿದೆ ಇದು ಪ್ರಾಯೋಗಿಕವಾಗಿ ಬಹಳ ಕಷ್ಟ ಹಾಗಾಗಿ ಅನಾರೋಗ್ಯದ ಸರ್ಟಿಫಿಕೇಟ್‌ನ್ನು ತಾವು ಚಿಕಿತ್ಸೆ ಪಡೆಯುತ್ತಿರುವ ವೈದ್ಯರಿಂದ ಅಥವಾ ತಾಲ್ಲೂಕು ಮಟ್ಟದ ವೈದ್ಯಧಿಕಾರಿಗಳಿಂದ ಪಡೆದುದ್ದನ್ನು ಪರಿಗಣಿಸಬೇಕು.

BLO ಆಗಿ ಅಂಗನವಾಡಿ ಕಾರ್ಯಕರ್ತೆ ಅನುಭವಿಸುತ್ತಿರುವ ಸಮಸ್ಯೆಗಳು

• BLOಗಳಾಗಿ ಬದಲಾದ ಕೆಲಸದ ವಿಧಾನಗಳ ಬಗ್ಗೆ ತರಬೇತಿ ಇಲ್ಲ.

• ನಿಗದಿತ ಸಮಯದೊಳಗೆ ನಿಗದಿತ ಗುರಿಯನ್ನು ತಲುಪಬೇಕು. ತಲುಪದಿದ್ದರೆ ಕೆಲಸದಿಂದ ತಗೆಯುವ ಬೆದರಿಕೆ.

• ಪ್ರೊಜನಿ ಮಾಡುವಾಗ ಹಲವಾರು ದಾಖಲಾತಿಗಳು ಸರಿ ಇಲ್ಲದಿದ್ದರೂ ಸ್ಥಳೀಯ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಲು ಒತ್ತಾಯಿಸುತ್ತಿದ್ದಾರೆ.

ಉದಾಹರಣೆಗೆ: 2002 ರಿಂದ ಈಚೆ ಇರುವ ಮನೆಯ ಸೊಸೆ ಹೊಸ ಮತದಾನ ಮಡುವುದಿದ್ದರೆ ಅವಳ ತಂದೆ ದಾಖಲಾತಿ ಬೇಕು. ಅವರು ಬೇರೆ ದೂರದ ಜಿಲ್ಲೆ, ಬೇರೆ ರಾಜ್ಯ, ಆಗಿದ್ದರೆ ಆಕೆಯನ್ನು ಗಂಡನ ಮನೆಯ ಮೊಮ್ಮಗಳು ಎಂದು ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಚುನಾವಣೆಗಳು ಹತ್ತಿರ ಬರುವ ಸಮಯದಲ್ಲಿ ಈ ದಾಖಲಾತಿಗಳು ಸುಳ್ಳು ಎಂದೂ ಸಾಬೀತು ಆದಾಗ ಮತದಾರಳು ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾಳೆ.

ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ ಅಂಗನವಾಡಿ ಕಾರ್ಯಕರ್ತೆ ಅಪರಾಧಿಯಾಗುತ್ತಾಳೆ ಮಾತ್ರವಲ್ಲದೇ ಜೈಲಿಗೂ ಹೋಗಬೇಕಾದ ಪರಿಸ್ಥಿತಿ ಬರಬಹುದು. ಆಗ ಅವಳಿಗೆ ರಕ್ಷಣೆ ಕೊಡುವವರು ಯಾರು? ಇದು ಬಹಳ ಗಂಭೀರವಾದ ಪರಿಸ್ಥಿತಿ ಇದೆ.

• ಇದುವರೆಗೂ ವರ್ಷಕ್ಕೊಮ್ಮೆ ಗ್ರಾಮದಲ್ಲಿ ಬಂದಿರುವವರನ್ನು ಸೇರ್ಪಡೆ, ವರ್ಗಾವಣೆ ಮತ್ತು ತಿದ್ದುಪಡಿ ವರ್ಷಕೊಮ್ಮೆ ಮಾಡಲಾಗುತ್ತಿತ್ತು ಈಗ ೩ ತಿಂಗಳಿಗೊಮ್ಮೆ ಮಾಡಬೇಕು.

• ICDS ಯೇತರ ಕೆಲಸ ಮಾಡಿಸಲು ಚುನಾವಣಾಧಿಕಾರಿಗಳು ನಿರ್ದಯವಾಗಿ ವರ್ತಿಸುವುದನ್ನು ನಿಲ್ಲಿಸಬೇಕು.

ಈ ಮೇಲ್ಕಂಡ ಎಲ್ಲ ಕಾರಣಗಳಿಗಾಗಿ ಅಂಗನವಾಡಿ ನೌಕರರನ್ನು BLO ಕೆಲಸಗಳಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತೇವೆ.

ಈ ವರ್ಷ SIR ಕೆಲಸ ಇರುವ ಕಾರಣದಿಂದ ಗುರಿ ನಿರ್ಧರಿತ ಪ್ರೊಜನಿ ಮತ್ತು ಮ್ಯಾಪಿಂಗ್ ಮಾಡುವ ಕೆಲಸಗಳಲ್ಲಿ ವ್ಯತ್ಯಾಸವಾದರೆ ಅಂಗನವಾಡಿ ನೌಕರರನ್ನು ಜವಬ್ದಾರಿ ಮಾಡಬಾರದು ಎಂದೂ ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

ಇದನ್ನೂ ನೋಡಿ: SIR ತೀರ್ಪಿನ ಒಳನೋಟ: ಸಂವಿಧಾನ, ನಾಗರಿಕತ್ವ ಮತ್ತು ಮತದಾನದ ಹಕ್ಕು |ಜಸ್ಟೀಸ್‌ ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *