ವಿದ್ಯುತ್ ವ್ಯತ್ಯಯದ ಹಿಂದೆ ‘ಸಾಬೋಟಾಜ್’ ಶಂಕೆ: ನಿರ್ಮಲ್ ಕುಮಾರ್ ಆರೋಪ

ಚೆನ್ನೈ: ನಗರ ಮತ್ತು ಉಪನಗರಗಳಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ವಿದ್ಯುತ್ ವ್ಯತ್ಯಯಗಳ ಹಿಂದೆ ಉದ್ದೇಶಪೂರ್ವಕ ಸಾಬೋಟಾಜ್ (sabotage) ಇರುವ ಸಾಧ್ಯತೆ ಇದೆ ಎಂದು ತಮಿಳುನಾಡು ವಿದ್ಯುತ್ ಸಚಿವ ಸಿ.ಟಿ.ಆರ್ ನಿರ್ಮಲ್ ಕುಮಾರ್ ಜೂನ್‌ 9ರಂದು ಹೇಳಿದ್ದಾರೆ. ಸಾಬೋಟಾಜ್

ಕೆಲವರು ಸಾರ್ವಜನಿಕ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಫ್ಯೂಸ್ ತೆಗೆಯುವುದು ಅಥವಾ ವಿದ್ಯುತ್ ಕಡಿತ ಉಂಟುಮಾಡುವ ರೀತಿಯಲ್ಲಿ ಕೃತ್ಯ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸಾಬೋಟಾಜ್

ವಿದ್ಯುತ್ ವ್ಯತ್ಯಯಗಳ ಅವಧಿ ಮತ್ತು ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ತಾಂತ್ರಿಕ ದೋಷಗಳಿಗಿಂತಲೂ ಅನುಮಾನಾಸ್ಪದ ಹಾಗೂ ಮರುಕಳಿಸುವ ಮಾದರಿಗಳು ಕಂಡುಬರುತ್ತಿವೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಬಿಪಿಎಲ್ ರೋಗಿಗಳಿಂದ ಶುಲ್ಕ ಬೇಡ: ಖಾಸಗಿ ಆಸ್ಪತ್ರೆಗಳಿಗೆ ಖಾದರ್ ಎಚ್ಚರಿಕೆ

“ವಿದ್ಯುತ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದವರ ವಿರುದ್ಧ ಪ್ರಕರಣಗಳು ದಾಖಲಿಸಲಾಗುತ್ತಿದ್ದು, ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ,” ಎಂದು ಅವರು ಹೇಳಿದರು.

ಶನಿವಾರ ರಾತ್ರಿ ಉದ್ದಕ್ಕೂ ವಿದ್ಯುತ್ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ಅದರ ಉಪನಗರಗಳ ಹಲವೆಡೆ ನಿವಾಸಿಗಳು ನಿದ್ದೆ ಕಳೆದುಕೊಂಡಿದ್ದರು. ಮೆಡವಕ್ಕಂ, ಪಳ್ಳಿಕರಣೈ, ಪೆರಂಬಕ್ಕಂ, ಶೋಲಿಂಗನಲ್ಲೂರು ಮತ್ತು ಈಸ್ಟ್ ಕೋಸ್ಟ್ ರಸ್ತೆ ಭಾಗಗಳಲ್ಲಿ ಎರಡು ರಿಂದ ನಾಲ್ಕು ಗಂಟೆಗಳವರೆಗೆ ವಿದ್ಯುತ್ ಕಡಿತವಾಗಿದ್ದರಿಂದ ಜನರು ಪ್ರತಿಭಟನೆಗೆ ಮುಂದಾಗಿದ್ದರು.

ಪ್ರತಿಭಟನಾಕಾರರು ಈ ವಿದ್ಯುತ್ ವ್ಯತ್ಯಯಗಳು ಪದೇಪದೇ ಸಂಭವಿಸುತ್ತಿವೆ ಎಂದು ಆರೋಪಿಸಿದರೆ, ತಮಿಳುನಾಡು ವಿದ್ಯುತ್ ಮಂಡಳಿಯ ಹಿರಿಯ ಅಧಿಕಾರಿ ಟ್ರಿಪ್ಪಿಂಗ್ ಮತ್ತು ವಿತರಣಾ ಸಂಬಂಧಿತ ಸಮಸ್ಯೆಗಳೇ ತಾತ್ಕಾಲಿಕ ವ್ಯತ್ಯಯಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ಸಿಸಿಟಿವಿ ಇಲ್ಲದ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವುದು ಅಗತ್ಯ ಎಂದು ಸಚಿವರು ಹೇಳಿದರು.

“ಇಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಫ್ಯೂಸ್ ತೆಗೆಯುವಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಗುರುತಿಸಲಾಗುತ್ತಿದೆ,” ಎಂದು ಅವರು ಹೇಳಿದರು.

ವಿದ್ಯುತ್ ವ್ಯತ್ಯಯಗಳ ಕುರಿತು ತಕ್ಷಣದ ಮಾಹಿತಿ ‘ಮಿನ್ನಗಂ’ ಪೋರ್ಟಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನೀಡಲಾಗುತ್ತಿದೆ. ಇದೇ ವೇಳೆ ನೆಲಮಟ್ಟದ ತಂಡಗಳನ್ನು ಹೆಚ್ಚಿಸಲಾಗಿದ್ದು, ರಾತ್ರಿ ಪಹರೆ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತರ ಚೆನ್ನೈ, ಪೆರಂಬೂರು ಮತ್ತು ವಿಲ್ಲಿವಾಕ್ಕಂ ಪ್ರದೇಶಗಳಲ್ಲಿ ತಕ್ಷಣದ ಪರಿಹಾರ ಕಾರ್ಯಗಳಿಗೆ 20 ಸದಸ್ಯರ ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿದೆ.

ಮಿನ್ನಗಂ ವ್ಯವಸ್ಥೆಯ ಮೂಲಕ ದೂರವಾಣಿ ಕರೆಗಳು ಮತ್ತು ಸಾಮಾಜಿಕ ಜಾಲತಾಣಗಳ ದೂರುಗಳನ್ನು ದಾಖಲಿಸಿ, ವಿತರಣಾ ಇಲಾಖೆಯೊಂದಿಗೆ ಸಂಯೋಜಿಸಿ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಇದಕ್ಕೂ ಮುನ್ನ ಅವಡಿ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯಲ್ಲಿ ಕೆಲ ಅಜ್ಞಾತರು ಪಿಲ್ಲರ್ ಬಾಕ್ಸ್ ತೆರೆಯುವ ಮೂಲಕ ಫ್ಯೂಸ್ ತೆಗೆದು ವಿದ್ಯುತ್ ವ್ಯತ್ಯಯ ಉಂಟುಮಾಡಿದ ಘಟನೆ ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದರು.

ಇದನ್ನೂ ನೋಡಿ: “ಅನ್ನದಾತನ ಬೆನ್ನಿಗೆ ಚೂರಿ? ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಒಂದೇ ನಿಲುವೇ?” | ಬಸವರಾಜ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *