ಅಮರಾವತಿ: ಆಡಳಿತಾರೂಢ ತೆಲುಗು ದೇಶಂ ಪಕ್ಷವು (ಟಿಡಿಪಿ) ಆಂಧ್ರಪ್ರದೇಶದ ಮುಂಬರುವ ರಾಜ್ಯಸಭಾ ಚುನಾವಣೆಗೆ ತನ್ನ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದೂ, ಜೂನ್ 6ರ ತಡರಾತ್ರಿ ಪಕ್ಷದ ಪ್ರಕಟಣೆ ಹೊರಬಿದ್ದಿದೆ. ಚುನಾವಣೆ
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಂತಕಾಯಲ ವಿಜಯ್, ಪ್ರಮುಖ ಶಿಕ್ಷಣ ಉದ್ಯಮಿ ಭಾಷ್ಯಂ ರಾಮಕೃಷ್ಣ ಮತ್ತು ಹಾಲಿ ರಾಜ್ಯಸಭಾ ಸದಸ್ಯ ಸನಾ ಸತೀಶ್ ಅವರಿಗೆ ಟಿಡಿಪಿ ಟಿಕೆಟ್ ಘೋಷಿಸಿದೆ. ಟಿಡಿಪಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹಿರಿಯ ನಾಯಕರ ಸಮ್ಮುಖದಲ್ಲಿ ಮೂವರಿಗೂ ಅಧಿಕೃತ ‘ಬಿ-ಫಾರ್ಮ್’ ಹಸ್ತಾಂತರಿಸಿದರು.
ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದ ವಿಜಯ್
ಪಕ್ಷದ ಟಿಕೆಟ್ ದೊರೆತ ಬಳಿಕ ಮಾತನಾಡಿದ ವಿಜಯ್, “ಕಷ್ಟಕಾಲದಲ್ಲಿ ಪಕ್ಷದ ಜೊತೆ ನಿಂತ ಕಾರ್ಯಕರ್ತರು ಮತ್ತು ನಾಯಕರನ್ನು ಪಕ್ಷ ಎಂದಿಗೂ ಕೈಬಿಡುವುದಿಲ್ಲ ಎಂಬುದನ್ನು ಚಂದ್ರಬಾಬು ನಾಯ್ಡು ಮತ್ತು ಐಟಿ ಸಚಿವ ನಾರಾ ಲೋಕೇಶ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಜವಾಬ್ದಾರಿಯನ್ನು ಸಂಪೂರ್ಣ ನಿಷ್ಠೆಯಿಂದ ನಿಭಾಯಿಸುತ್ತೇನೆ” ಎಂದು ಭರವಸೆ ನೀಡಿದರು.
ಇದನ್ನೂ ಓದಿ: ‘ನಮ್ಮ ನೀರು, ನಮ್ಮ ಕಾಡು, ನಮ್ಮ ಭೂಮಿ’: ಪರಿಸರ ಸಂರಕ್ಷಣೆಗೆ ಜನತಾಂತ್ರಿಕ ಪಾಲ್ಗೊಳ್ಳುವಿಕೆ ಅಗತ್ಯ – ಧರ್ಮೇಶ್
ಅಮೆರಿಕ ಮತ್ತು ಭಾರತದ ಪ್ರತಿಷ್ಠಿತ ಸಂಸ್ಥೆಗಳಿಂದ ರಾಜಕೀಯ ನಿರ್ವಹಣೆ ಮತ್ತು ಆಡಳಿತ ವಿಷಯದಲ್ಲಿ ಪದವಿ ಪಡೆದಿರುವ ವಿಜಯ್, ಈ ಹಿಂದೆ ‘ತೆಲುಗು ಯುವತ’ ಸಂಘಟನೆಯ ರಾಜ್ಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ರಾಮಕೃಷ್ಣ ಮುಂಚೂಣಿ
ಬದಲಾಗಲಿದೆಯೇ ಸಂಖ್ಯಾಬಲ?
ಆಂಧ್ರಪ್ರದೇಶದ ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ತೆರವಾಗಲಿರುವ ನಾಲ್ಕು ಸ್ಥಾನಗಳ ಪೈಕಿ ಟಿಡಿಪಿ ಮೂರು ಹಾಗೂ ಜನಸೇನಾ ಪಕ್ಷ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿವೆ.
ಪ್ರಸ್ತುತ ಆಂಧ್ರಪ್ರದೇಶದಿಂದ ರಾಜ್ಯಸಭೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ (YSRCP) 7 ಮತ್ತು ಟಿಡಿಪಿ 2 ಸ್ಥಾನಗಳನ್ನು ಹೊಂದಿವೆ. ಆದರೆ, ಜೂನ್ 18 ರಂದು ನಡೆಯಲಿರುವ ಚುನಾವಣೆಯ ನಂತರ ಈ ಚಿತ್ರಣ ಸಂಪೂರ್ಣ ಬದಲಾಗುವ ಸಾಧ್ಯತೆಯಿದೆ.
175 ಸದಸ್ಯರ ಆಂಧ್ರ ವಿಧಾನಸಭೆಯಲ್ಲಿ ಸದ್ಯ ಟಿಡಿಪಿ 135, ಜನಸೇನಾ 21 ಮತ್ತು ಬಿಜೆಪಿ 8 ಸ್ಥಾನಗಳೊಂದಿಗೆ ಭಾರಿ ಬಹುಮತ ಹೊಂದಿದ್ದರೆ, ಪ್ರತಿಪಕ್ಷ ವೈಎಸ್‌ಆರ್‌ಸಿಪಿ ಕೇವಲ 11 ಸ್ಥಾನಗಳಿಗೆ ಕುಸಿದಿದೆ. ಹೀಗಾಗಿ ಎನ್‌ಡಿಎ ಮೈತ್ರಿಕೂಟದ ಎಲ್ಲಾ ಅಭ್ಯರ್ಥಿಗಳ ಗೆಲುವು ಸುಲಭ ಎನ್ನಲಾಗಿದೆ.
ಇದನ್ನೂ ನೋಡಿ: ಸಾಮಾಜಿಕ ನ್ಯಾಯ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ – ಕೆ.ನೀಲಾ Janashakthi Media
