ಬೆಂಗಳೂರು| ಬೃಹತ್ ತ್ಯಾಜ್ಯ ಸಂಗ್ರಹಕ್ಕಾಗಿ ‘D Clutter’ ಆಪ್‌ ಆರಂಭಿಸಿದ BSWML

ಬೆಂಗಳೂರು: ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ನಗರ ನಿವಾಸಿಗಳು ತಮ್ಮ ಮನೆಗಳಿಂದಲೇ ದೊಡ್ಡ ಗಾತ್ರದ ಕಸವನ್ನು ಸಂಗ್ರಹಿಸಲು ಬಳಸಿಕೊಳ್ಳಬಹುದಾದ ‘D Clutter’ ಎಂಬ ಹೊಸ ಮೊಬೈಲ್ ಆಪ್‌ನ್ನು ಆರಂಭಿಸಿದೆ.

ಆಪ್ ಮೂಲಕ ಬುಕ್ಕಿಂಗ್ ಮಾಡಿದ ಬಳಿಕ, ಕಸದ ಪ್ರಮಾಣ ಮತ್ತು ಸ್ವರೂಪದ ಆಧಾರದ ಮೇಲೆ ವಾರಕ್ಕೆ ಒಮ್ಮೆ ಕಸವನ್ನು ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ: ಕೊಲ್ಕತ್ತಾ| ‘ಬಿಡಲು ಬಯಸುವವರು ಹೋಗಲಿ’: ಟಿಎಂಸಿ ನಾಯಕರಿಗೆ ಮಮತಾ ಕರೆ

“ಸಂಗ್ರಹಿಸಲಾದ ತ್ಯಾಜ್ಯವನ್ನು ಸಾಧ್ಯವಾದಲ್ಲಿ ಮಾನ್ಯತೆ ಪಡೆದ ಮರುಬಳಕೆ ಸಂಸ್ಥೆಗಳ ಮೂಲಕ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ. ಮರುಬಳಕೆ ಸಾಧ್ಯವಾಗದ ತ್ಯಾಜ್ಯವನ್ನು ವೆಸ್ಟ್-ಟು-ಎನರ್ಜಿ ಘಟಕಗಳಿಗೆ ಕಳುಹಿಸಿ ಅಂತಿಮ ವಿಲೇವಾರಿ ಮಾಡಲಾಗುತ್ತದೆ. ‘DClutter’ ಆಪ್ ದೊಡ್ಡ ಗಾತ್ರದ ತ್ಯಾಜ್ಯ ನಿರ್ವಹಣೆಯಲ್ಲಿ ಇರುವ ಅಂತರವನ್ನು ನಿವಾರಿಸಿ, ನಾಗರಿಕರಿಗೆ ವಿಶ್ವಾಸಾರ್ಹ ಮತ್ತು ಪರಿಸರ ಸ್ನೇಹಿ ವಿಲೇವಾರಿ ವ್ಯವಸ್ಥೆಯನ್ನು ಒದಗಿಸುವ ಉದ್ದೇಶ ಹೊಂದಿದೆ,” ಎಂದು BSWML ತಿಳಿಸಿದೆ.

BSWML ಸಾಮಾನ್ಯವಾಗಿ ತೇವ ಮತ್ತು ಒಣ ತ್ಯಾಜ್ಯವನ್ನು ನಿಯಮಿತವಾಗಿ ಸಂಗ್ರಹಿಸುತ್ತಿದ್ದರೂ, ಹಳೆಯ ಫರ್ನಿಚರ್, ಸೋಫಾ, ಮೆಟ್ರೆಸ್, ಕಪಾಟು, ಹಾಳಾದ ಸ್ಯಾನಿಟರಿ ಸಾಮಗ್ರಿಗಳು, ಹಳೆಯ ಕಾಮೋಡ್‌ಗಳು ಸೇರಿದಂತೆ ದೊಡ್ಡ ಗಾತ್ರದ ಮನೆ ಬಳಕೆಯ ವಸ್ತುಗಳ ವಿಲೇವಾರಿ ದೊಡ್ಡ ಸಮಸ್ಯೆಯಾಗಿತ್ತು. ಇವುಗಳನ್ನು ನಿಯಮಿತ ಕಸ ಸಂಗ್ರಹಿಸುವವರು ತೆಗೆದುಕೊಳ್ಳದ ಕಾರಣ, ಹಲವಾರು ಬಾರಿ ರಸ್ತೆ ಬದಿಗಳಲ್ಲಿ ತ್ಯಾಜ್ಯವಾಗಿ ಬಿದ್ದಿದ್ದು, ಪರಿಸರ ಮತ್ತು ನಗರದ ಸ್ವಚ್ಛತೆಗೆ ಧಕ್ಕೆಯನ್ನು ಉಂಟುಮಾಡುತ್ತಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು, BSWML ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ರಸ್ತೆ ಬದಿಗಳಲ್ಲಿ ಬಿದ್ದಿದ್ದ ದೊಡ್ಡ ಗಾತ್ರದ ತ್ಯಾಜ್ಯವನ್ನು ಸಂಗ್ರಹಿಸುವ ಪ್ರಯೋಗ ನಡೆಸಿತ್ತು. ಈ ವೇಳೆ ನಗರದಲ್ಲಿನ ವಿವಿಧ ಭಾಗಗಳಿಂದ ಸುಮಾರು 6,000 ಟನ್ ತ್ಯಾಜ್ಯವನ್ನು ಗುರುತಿಸಿ ಸಂಗ್ರಹಿಸಲಾಯಿತು.

ಇದನ್ನೂ ನೋಡಿ: “ತಮಿಳುನಾಡು | ವಿಜಯ್‌ ಗೆದ್ದದ್ದು ಹೇಗೆ? : ಟಿವಿಕೆ ಉದಯದ ಒಳನೋಟ” | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *