ಬೆಂಗಳೂರು: ಶಾಲಾ – ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ನಿಗದಿಪಡಿಸಿ 2022 ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದ್ದು, ಹಿಜಾಬ್ ಹಾಗೂ ಜನಿವಾರ , ಟರ್ಬ್‌ನ್ ಮುಂತಾಗಿ ನಂಬಿಕೆ, ಆಚರಣೆಗೆ ಸಂಬಂಧಿಸಿದಂತೆ ಸಂಕೇತಗಳನ್ನು ಧರಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ ಸರ್ಕಾರದ ನಡೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಸ್ವಾಗತಿಸುತ್ತದೆ. ಸಮವಸ್ತ್ರ
ಸಾಂಪ್ರದಾಯಿಕ ಹಾಗೂ ಆಚರಣೆ ಆಧರಿಸಿದ ಸಂಕೇತಗಳನ್ನು ಧರಿಸುವಂತೆಯಾಗಲಿ, ಅಥವಾ ಬಲವಂತವಾಗಿ ತೆಗೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯ ಮಾಡುವಂತಿಲ್ಲ ಎಂದಿದ್ದಾರೆ.
ಶಿಸ್ತು ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆ ಅಡ್ಡಿಯಾಗದಂತೆ ನಿಗದಿತ ಸಮವಸ್ತ್ರದೊಂದಿಗೆ ಸಮಾನ ಸ್ವರೂಪದ ಸಾಂಪ್ರದಾಯಿಕ ಹಾಗೂ ಆಚರಣೆ ಆಧರಿಸಿದ ಸಂಕೇತಗಳನ್ನು ಧರಿಸಬಹುದು ಅಂತಹ ವಿದ್ಯಾರ್ಥಿಗಳಿಗೆ ಯಾವುದೇ ಶಿಕ್ಷಣ ಸಂಸ್ಥೆ ತರಗತಿ ಅಥವಾ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶ ನಿರಾಕರಿಸುವಂತಿಲ್ಲ ಎಂದು ಸೂಚಿಸಿರುವ ನಿಯಮವನ್ನು ರಾಜ್ಯದ ಎಲ್ಲ ಶಾಲಾ – ಕಾಲೇಜುಗಳಲ್ಲಿ ಕಟ್ಟು ನಿಟ್ಟಾಗಿ ಜಾರಿ ಮಾಡಬೇಕೆಂದು ನಮ್ಮ ಸಂಘಟನೆ ಆಗ್ರಹಿಸಿದೆ.
ಇದನ್ನೂ ಓದಿ: ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನ ಮಳೆ: ಐಎಂಡಿ
ಅದೇ ರೀತಿ ಶಾಲಾ ಕಾಲೇಜಿನ ಸಮವಸ್ತ್ರದ ಹೆಸರಿನಲ್ಲಿಯೂ ರಾಜಕಾರಣ ಮಾಡುತ್ತ ಅದನ್ನೂ ಕೋಮುವಾದೀ ಕರಿಸಲು ಹೊರಟಿರುವುದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಈ ಹಿಂದೆಯೂ ಹಿಜಾಬ್ ವಿವಾದ ಎಬ್ಬಿಸಿದಾಗ ಸಮವಸ್ತ್ರ ದ ಹೆಸರಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯಬಾರದೆಂದು ನಮ್ಮ ಸಂಘಟನೆ ರಾಜ್ಯ ದ್ಯಂತ ಹೋರಾಟ ದ ಮೂಲಕ ಅಂದಿನ ಬಿಜೆಪಿ ಸರ್ಕಾರಕ್ಕೂ, ಮಹಿಳಾ ಆಯೋಗ ಮತ್ತು ಶಿಕ್ಷಣ ಇಲಾಖೆಗೂ ಮನವಿ ಮಾಡಿದ್ದನ್ನು ನೆನಪಿಸಿದೆ.
ತಡವಾಗಿಯಾದರೂ ರಾಜ್ಯ ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯಲು ಇಂತಹ ನಿಲುವು ತೆಗೆದುಕೊಂಡಿರುವುದನ್ನು ಮತ್ತೊಮ್ಮೆ ಸಂಘಟನೆ ಸ್ವಾಗತಿಸುತ್ತದೆ. ಮತ್ತು ಇದು ರಾಜಕೀಯಗೊಳ್ಳದೇ ಮಹಿಳೆಯರ ಶಿಕ್ಷಣದ ಹಕ್ಕುಗಳನ್ನು ರಕ್ಷಣೆ ಮಾಡುವ ಪ್ರಾಮಾಣಿಕ ಪ್ರಯತ್ನವಾಗಬೇಕೆಂದು ಒತ್ತಾಯಿಸಿದೆ.
ಅದೇ ರೀತಿ ಅನಗತ್ಯ ಗಲಭೆ ಸೃಷ್ಟಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿಯು ಅಗ್ರಸಿದೆ.
ಇದನ್ನೂ ನೋಡಿ: ಆರೋಗ್ಯ ಸೇವೆ ಕಾರ್ಪೊರೇಟ್ ಕೈಗೆ? : ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ Janashakthi Media
