ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಮರುದಿನವೇ ಮೇ 11ರಂದು ಮಾಜಿ ಸಿಎಂ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ರನ್ನು ಭೇಟಿಯಾಗಿದ್ದಾರೆ. ಸಿಎಂ
ಚೆನ್ನೈನಲ್ಲಿರುವ ಸ್ಟಾಲಿನ್ ಅವರ ನಿವಾಸಕ್ಕೆ ವಿಜಯ್ ಭೇಟಿ ನೀಡಿದ್ದೂ, ಉಭಯ ನಾಯಕರು ಕೆಲಕಾಲ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
‘ದಳಪತಿ’ ಎಂದೇ ಜನಪ್ರಿಯರಾಗಿರುವ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮೇ 10ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ನಾಗರಹೊಳೆ| ಆದಿವಾಸಿ ಸಂವಾದಕ್ಕೆ ಅರಣ್ಯ ಇಲಾಖೆ ತಡೆ: ಪ್ರತಿಭಟನೆ ತೀವ್ರ
ಹಿರಿಯ ನಾಯಕ ಕೆ.ಎ. ಸೆಂಗೊಟೈಯನ್ ಮತ್ತು ಯುವ ಮುಖಗಳಾದ ಡಾ. ಟಿ.ಕೆ.ಪ್ರಭು ಹಾಗೂ ಎಸ್.ಕೀರ್ತನಾ ಅವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ವಿಜಯ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಆಧವ್ ಅರ್ಜುನ, ಎನ್. ಆನಂದ್, ಆರ್. ನಿರ್ಮಲ್ ಕುಮಾರ್, ಎ. ರಾಜ್‌ಮೋಹನ್, ಪಿ. ವೆಂಕಟರಮಣನ್ ಮತ್ತು ಕೆ.ಜಿ. ಅರುಣ್‌ರಾಜ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಮತ್ತು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಟಿವಿಕೆಗೆ ಸರ್ಕಾರ ರಚಿಸಲು ಬೆಂಬಲ ನೀಡಿರುವ ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಐಯುಎಂಎಲ್ ಪಕ್ಷಗಳ ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಗ್ರಾಮ ಪಂಚಾಯತಿಗಳಲ್ಲಿ ಹೊರಗುತ್ತಿಗೆ ರದ್ದುಪಡಿಸಿ: ಮೇ 30ಕ್ಕೆ ಬೃಹತ್ ಹೋರಾಟ Janashakthi Media
