ಮೇ 15 ರವರೆಗೂ ಹಲವೆಡೆ ಭರ್ಜರಿ ಗುಡುಗು, ಗಾಳಿ ಸಹಿತ ಮಳೆ – ಹವಾಮಾನ ಇಲಾಖೆ

ಬೆಂಗಳೂರು: ಹವಾಮಾನ ಇಲಾಖೆಯು ಈ ವಾರ ಭರ್ಜರಿ ಗುಡುಗು, ಗಾಳಿ ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಟ್ಟಿದೆ. ಬೆಂಗಳೂರಿಗೆ ಮೇ 14ರಿಂದ ಮಳೆ ಆರಂಭ ಆಗಲಿದೆ. ದಕ್ಷಿಣ ಕರ್ನಾಟಕದಲ್ಲಿ ಮೇ 15, 16ಕ್ಕೆ ಭಾರಿ ಮಳೆ ಮುನ್ಸೂಚನೆ ಇದೆ ಎಂದು ತಿಳಿದುಬಂದಿದೆ.

ಕರಾವಳಿಗೆ ಭರ್ಜರಿ ಮಳೆ

ಮೇ.11 ರಿಂದ 15 ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಗುಡಗು ಸಹಿತ ಮಳೆಯಾಗುವ ಅಲರ್ಟ್ ನೀಡಲಾಗಿದೆ. ಮೇ 13 ರಿಂದ ದಕ ದಲ್ಲಿ ಮಾತ್ರ ಹಗುರ ಮಳೆಯಾಗಲಿದೆ. ಉಡುಪಿ, ಉ.ಕದಲ್ಲಿ ಮಳೆ ಕ್ಷೀಣಿಸಲಿದೆ.

ಮೇ. 15 ಹಾಗೂ 16 ರಂದು ದಕ್ಷಿಣ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ. ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆಯಾಗಲಿದೆ.

ಇದನ್ನೂ ಓದಿ: ಜುಲೈ 1 ರಿಂದ MGNREGA ರದ್ದು: ಮೋದಿ ಸರ್ಕಾರ ಘೋಷಣೆ

ತಾಪಮಾನ ಹೆಚ್ಚಳ

ಮುಂದಿನ 5 ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ 2 ರಿಂದ 3 ಡಿಗ್ರಿ.ಸೆ. ಹೆಚ್ಚಾಗುವ ಸಾಧ್ಯತೆ ಇದೆ.

ಮೇ.11 ರಿಂದ ಮೇ 13 ರವರೆಗೆ ಎಲ್ಲೆಲ್ಲಿ ಮಳೆ?

ಉತ್ತರ ಕರ್ನಾಟಕದ ಎಲ್ಲೆಲ್ಲಿ ಮಳೆ?

ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳದಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು ಉಳಿದೆಡೆ ಒಣ ಹವಾಮಾನ ಇರಲಿದೆ.

ದಕ್ಷಿಣ ಒಳನಾಡಲ್ಲಿ ಎಲ್ಲೆಲ್ಲಿ ಮಳೆ?

ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿಗೆ ಭಾರಿ ಗಾಳಿ, ಮಳೆ ಗುಡುಗು ಇರವ ಸಾಧ್ಯತೆ ಇದೆ.

ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದಲ್ಲಿ ಮೇ 14 ಗುರುವಾರದಿಂದ ಮಳೆ ಹೆಚ್ಚಳ

ದಕ್ಷಿಣ ಕರ್ನಾಟಕದಲ್ಲಿ ಗುರುವಾರದಿಂದ ಮಳೆ ಹೆಚ್ಚಳವಾಗಲಿದೆ. ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು,ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯ ಮುನ್ನೆಚ್ಚರಿಕೆ ಕೊಡಲಾಗಿದೆ. ಬೆಂಗಳೂರಿನ ತಾಪಮಾನ ಗರಿಷ್ಠ 34 ಡಿಗ್ರಿ ಸೆ.ಗೆ ಕುಸಿದಿದೆ.

ಶುಕ್ರವಾರದಂದು ಈ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದ್ದು, ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಮಾತ್ರ ಭಾರೀ ಮಳೆಯ ಮುನ್ಸೂಚನೆ ಇದೆ.

ಶನಿವಾರದಂದು ಕೂಡಾ ದಕ್ಷಿಣ ಒಳನಾಡಿನ ಇತರ ಜಿಲ್ಲೆಗಳ ಜೊತೆಗೆ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರಿಗೆ ಭಾರಿ ಮಳೆಯಾಗಲಿದೆ.

ಮೇ 17ಕ್ಕೆ ಎಲ್ಲೆಲ್ಲಿ ಮಳೆ?

ಭಾನುವಾರದಂದು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರಕ್ಕೆ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗಕ್ಕೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕನ್ನಡದಲ್ಲಿ ಹಗುರ ಮಳೆ ಮುನ್ಸೂಚನೆ ಇದೆ.

ಇದನ್ನೂ ನೋಡಿ: ಸಹಬಾಳ್ವೆಯೇ ಭಾರತದ ಶಕ್ತಿ: ಸರ್ವಧರ್ಮ ಸಮಾಜೋತ್ಸವದಲ್ಲಿ ಎಂಜಿ ಹೆಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *