ಶಿರಸಿ: ಏಪ್ರಿಲ್ 25ರಂದು ಪ್ರೊ. ಬಿ. ಎಚ್.ಶ್ರೀಧರ ಅವರ ಎರಡು ಪುಸ್ತಕಗಳು ಬಿಡುಗಡೆಯಾದವು. ಡಾ.ಎಂ.ಜಿ.ಹೆಗಡೆ ಸಂಪಾದಿಸಿದ ಶ್ರೀಧರರ ಇಂಗ್ಲಿಷ್ ಕವನ ಮತ್ತು ಲೇಖನಗಳ ಸಂಗ್ರಹ ‘Afterglow’ ಮತ್ತು ರಾಜಶೇಖರ್ ಹೆಬ್ಬಾರ್ ಸಂಪಾದಿಸಿದ ಶ್ರೀಧರರ ಕವನಗಳ ಸಂಕಲನ ‘ಜೀವವಾಣಿ’ ಯನ್ನು ಹಿರಿಯ ಸಾಹಿತಿ ಶಾಮಸುಂದರ ಬಿದರಕುಂದಿ ಬಿಡುಗಡೆಗೊಳಿಸಿದರು. ಶಿರಸಿ
“ಶ್ರೀಧರರು ಬರಿಯ ಕವಿ, ವಿಮರ್ಶಕರಗಿರಲಿಲ್ಲ ಜ್ಞಾನದ ಭಂಡಾರವಾಗಿದ್ದರು. ಅವರ ಕವನಗಳು ಸಾಕಷ್ಟು ವೈಚಾರಿಕವಾಗಿದ್ದವು. ಜೀವನ ದೃಷ್ಟಿ ಯಿಂದ ತುಂಬಿದ್ದವು” ಎಂದರು.
ಪುಸ್ತಕಗಳ ಕುರಿತು ಡಾ.ಅಮರನಾಥ್ ಮಾತನಾಡಿ, “ ಅಲ್ಲಲ್ಲಿ ಚೆದುರಿಹೋದ ಶ್ರೀಧರರ ಕವನ ಲೇಖನಗಳನ್ನು ಇಲ್ಲಿ ಸಂಗ್ರಹಿಸಿಕೊಡಲಾಗಿದೆ. ಅವರು ಎಲ್ಲದರಲ್ಲೂ ಪರಿಪೂರ್ಣತೆ ಬಯಸುತ್ತಿದ್ದರು” ಎಂದರು.
ಇದನ್ನೂ ಓದಿ: 2 ವರ್ಷಗಳಲ್ಲಿ 59 ರಹಸ್ಯ ವರದಿ: ಕೋಮು ಸಂಘರ್ಷ ತಡೆಗೆ ಗುಪ್ತಚರ ಕ್ರಮ
ಶ್ರೀಧರರ ‘ ಕದಂಬ ವೈಭವ’@60 ಕುರಿತು ಎಂ.ಜಿ. ಹೆಗಡೆ ಮಾತನಾಡಿದರು. “ ಬನವಾಸಿಯ ಉತ್ಖನನ ನಡೆಯುವ ಪೂರ್ವದಲ್ಲೇ ಶ್ರೀಧರರು ಅಪಾರ ಕ್ಷೇತ್ರಕಾರ್ಯ ನಡೆಸಿ ಬನವಾಸಿಯ ಚರಿತ್ರೆ ಬರೆದರು. ಅವರಿಗೆ ಕದಂಬ ರಾಜ್ಯದ ಬಗ್ಗೆ ತುಂಬಾ ಅಭಿಮಾನವಿತ್ತು. ಇದು ಕನ್ನಡ ನಾಡಿನ ಚರಿತ್ರೆಯಾಗಿತ್ತು ” ಎಂದರು.
ಕಿರಣ್ ಭಟ್ ಶ್ರೀಧರರ ಕವನಗಳನ್ನು ಓದಿದರು.ವಿಷ್ಣು ಹೆಗಡೆ ಸ್ವಾಗತಿಸಿದರು.ರಾಜಶೇಖರ್ ಹೆಬ್ಬಾರ್ ಗೌರವಿಸಿದರು.ರೇಖಾ ಬ್ರಹ್ಮಾನಂದ ವಂದಿಸಿದರು.
ಸಮಾರಂಭದಲ್ಲಿ ಶ್ರೀಧರ ಶಿಕ್ಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಬಿ ಎಚ್ ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿ ಕಾರ್ಯಕ್ರಮ ಸಂಘಟಿಸಿತ್ತು.
ಇದನ್ನೂ ನೋಡಿ: ಸಂವಿಧಾನ ಮೌಲ್ಯಗಳ ಪ್ರತಿಧ್ವನಿ: ಸಂವಿಧಾನ ಗೀತೆ | ರವಿ ಮರಿಯಪ್ಪ – ಗುರುರಾಜ ದೇಸಾಯಿ ಮಾತಯಕತೆ Janashakthi Media
