ತುಮಕೂರು: ಸಾಮ್ರಾಜ್ಯವಾದಿ ಶಕ್ತಿಗಳ ಯುದ್ಧ ರಾಜಕಾರಣವನ್ನು ಖಂಡಿಸಿ, ವಿನಾಶಕಾರಿ ಯುದ್ಧಗಳ ವಿರುದ್ಧ ಮಾರ್ಚ್ 10ರ ಸಂಜೆ ನಗರದ ಟೌನ್‌ಹಾಲ್ ಎದುರು ಮೆಣಬತ್ತಿ ಬೆಳಗಿ ಪ್ರತಿಭಟನೆ ನಡೆಸಲಾಯಿತು. ಕಾರ್ಮಿಕ ಸಂಘಟನೆಗಳ ಸಂಯುಕ್ತ ಸಮಿತಿ ಹಾಗೂ ಜನಪರ-ಜೀವಪರ ಸಂಘಟನೆಗಳ ಸಂಯುಕ್ತ ವೇದಿಕೆ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಸಾಮ್ರಾಜ್ಯಶಾಹಿ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪರಿಸರವಾದಿ ಹಾಗೂ ಚಿಂತಕ ಸಿ. ಯತಿರಾಜು, ಶಸ್ತ್ರಾಸ್ತ್ರಗಳ ಮಾರುಕಟ್ಟೆಯನ್ನು ವಿಸ್ತರಿಸುವುದು ಮತ್ತು ತಮ್ಮ ಲಾಭಕ್ಕಾಗಿ ಸಾಮ್ರಾಜ್ಯವಾದಿ ರಾಷ್ಟ್ರಗಳು ಯುದ್ಧಗಳನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದರು. “ಈ ಭೂಮಿ ಎಲ್ಲಾ ಜೀವಿಗಳದ್ದಾಗಿದೆ. ಭೂಮಿಯನ್ನು ನಾಶಮಾಡುತ್ತಿರುವ ಯುದ್ಧಗಳನ್ನು ತಡೆಯಲು ಜಾಗತಿಕ ಶಾಂತಿ ಚಳವಳಿ ಬಲವಾಗಬೇಕಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು. ಸಾಮ್ರಾಜ್ಯಶಾಹಿ
ಚಿಂತಕ ಪ್ರೊ. ಕೆ. ದೋರೈರಾಜು ಮಾತನಾಡಿ, ಪ್ರಕೃತಿ ಸಂಪತ್ತಿನಿಂದ ಸಮೃದ್ಧ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಸಾಮ್ರಾಜ್ಯವಾದಿ ರಾಷ್ಟ್ರಗಳು ಜಾತಿ-ಧರ್ಮದ ವೈಷಮ್ಯವನ್ನು ಉಂಟುಮಾಡಿ ನಿರಪರಾಧಿಗಳನ್ನು ಹತ್ಯೆ ಮಾಡುತ್ತಿವೆ ಎಂದು ಹೇಳಿದರು. “ಮಾನವಕುಲವೇ ಇಂತಹ ಶಕ್ತಿಗಳ ವಿರುದ್ಧ ಒಂದಾಗಿ ಹೋರಾಡಬೇಕು,” ಎಂದು ಕರೆ ನೀಡಿದರು. ಸಾಮ್ರಾಜ್ಯಶಾಹಿ
ಇದನ್ನೂ ಓದಿ: ಅಂಗನವಾಡಿ ಖಾಲಿ ಹುದ್ದೆ ಭರ್ತಿಗೆ 90 ದಿನಗಳೊಳಗೆ ಕ್ರಮ: ಲಕ್ಷ್ಮೀ ಹೆಬ್ಬಾಳಕರ್
ಎಐಟಿಯುಸಿ ಜಿಲ್ಲಾ ನಾಯಕ ಕಾಂಬೆಗೌಡ ಮಾತನಾಡಿ, “ಅಮೆರಿಕ ವಿಶ್ವದ ದಾದಾಗಿರಿಯಂತೆ ವರ್ತಿಸುತ್ತಿದೆ. ತಾವು ಮಾಡುವುದೆಲ್ಲ ಸರಿಯೆಂಬ ಅವರ ದೌರ್ಜನ್ಯ ಮನೋಭಾವವನ್ನು ನಾವು ಒಪ್ಪಲಾರೆವು,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಮ್ರಾಜ್ಯಶಾಹಿ
ಈ ಸಂದರ್ಭದಲ್ಲಿ ಮಾತನಾಡಿದ ಸಿಟು ನಾಯಕ ಸಯ್ಯದ್ ಮುಜೀಬ್, “ಯುದ್ಧಗಳು ಜಗತ್ತಿನಾದ್ಯಂತ ಅನೇಕ ಸಾಮಾಜಿಕ ಸಮಸ್ಯೆಗಳು ಮತ್ತು ದುಃಖವನ್ನು ಉಂಟುಮಾಡುತ್ತಿವೆ. ಎಲ್ಲೆಡೆ ವಿನಾಶ ಉಂಟುಮಾಡುವ ಯುದ್ಧ ಯಾವ ಸಮಸ್ಯೆಯಿಗೂ ಪರಿಹಾರವಲ್ಲ. ನಮ್ಮ ದೇಶದ ಸರ್ಕಾರವು ತನ್ನ ಅಜೋಡಿತ ನೀತಿಯನ್ನು ತ್ಯಜಿಸಿ ಯುದ್ಧೋನ್ಮಾದವನ್ನು ಬೆಂಬಲಿಸಬಾರದು,” ಎಂದು ಹೇಳಿದರು.
ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘದ ಅನುಪಮಾ ಮಾತನಾಡಿ, “ಯುದ್ಧ ಎಲ್ಲೇ ನಡೆದರೂ ಅದರ ಬೆಲೆ ಸಾಮಾನ್ಯ ಜನವೇ ಕಟ್ಟಬೇಕಾಗುತ್ತದೆ. ಯುದ್ಧ ಎಲ್ಲರನ್ನೂ ಸಂಕಷ್ಟಕ್ಕೆ ತಳ್ಳುತ್ತದೆ. ಆದ್ದರಿಂದ ನಾವು ಎಲ್ಲರೂ ಯುದ್ಧವನ್ನು ವಿರೋಧಿಸಬೇಕು,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಂ.ಎಸ್.ಎಸ್. ಕಲ್ಯಾಣಿ, ಮಾನವ ಹಕ್ಕು ಹೋರಾಟಗಾರ ಸಯ್ಯದ್ ತಾಜುದ್ದೀನ್, ಜನವಾದಿ ಮಹಿಳಾ ಸಂಘಟನೆಯ ಟಿ.ಆರ್. ಕಲ್ಪನಾ, ಕಾರ್ಮಿಕ ನಾಯಕ ಗಿರೀಶ್, ಬಂಡಾಯ ಸಾಹಿತ್ಯಿಕ ಅಶ್ವತ್ಥನಾರಾಯಣ ಗುಟ್ಟೆ ಸೇರಿದಂತೆ ಹಲವರು ಮಾತನಾಡಿದರು.
ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷೆ ಅಕ್ಕಮ್ಮ ಸಂಗಡಿಗರ ‘ಒಡೆದ ಮನಸ್ಸುಗಳ ಕಂಡ ಕನಸುಗಳ ಕಟ್ಟ್ವ…’ ಹಾಡನ್ನು ಹಾಡಿದರು. ಮಕ್ಕಳು ಉಸ್ಮಾನ್, ವಿನುತಾ ಮತ್ತು ಎ. ನರಸಿಂಹಮೂರ್ತಿ ಮೆಣಬತ್ತಿ ಬೆಳಗಿಸಿ ಪ್ರತಿಭಟನೆಯನ್ನು ಆರಂಭಿಸಿದರು.
ಈ ಸಂದರ್ಭದಲ್ಲಿ ಎಐಯುಟಿಯುಸಿಯ ಮಂಜುಳಾ, ಸಿಟುದ ರಂಗಧಾಮಯ್ಯ ಮತ್ತು ಶಿವಕುಮಾರಸ್ವಾಮಿ, ವಕೀಲ ಕೆ.ವಿ. ಸತ್ಯನಾರಾಯಣ, ತುಮಕೂರು ವಿಜ್ಞಾನ ಕೇಂದ್ರದ ಪಿ. ಪ್ರಸಾದ್, ಪಿಂಚಣಿದಾರರ ಸಂಘದ ಟಿ.ಜಿ. ಶಿವಲಿಂಗಯ್ಯ, ಸಮುದಾಯದ ಅಶ್ವತ್ಥಯ್ಯ, ಎಐಟಿಯುಸಿಯ ಚಂದ್ರಶೇಖರ್, ಅಂಗನವಾಡಿ ನೌಕರರ ಸಂಘದ ಗೌರಮ್ಮ ಮತ್ತು ಜಬೀನಾ ಖಾತೂನ್, ಕಟ್ಟಡ ಕಾರ್ಮಿಕರ ಸಂಘದ ಖಲೀಲ್, ಪೌರ ಕಾರ್ಮಿಕರ ಸಂಘದ ಮಾರುತಿ, ಶ್ರೀನಿವಾಸ್, ಸಾದಿಕ್, ಡಿವೈಎಫ್‌ಐಯ ಎಸ್. ರಾಘವೇಂದ್ರ ಹಾಗೂ ಉಮರ್ ಫರೂಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ಅಮೆರಿಕ-ಇಸ್ರೇಲ್ ಸೇನಾ ದಾಳಿಯನ್ನು ಖಂಡಿಸಿ, ಯುದ್ಧ ಪ್ರದೇಶಗಳಲ್ಲಿ ಇರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ತರಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ನೋಡಿ: ಸಾಹಿತ್ಯ ಓದಿಗೆ ವಿಮರ್ಶಾತ್ಮಕ ದೃಷ್ಟಿ ಅಗತ್ಯ – ಬಂಜಗೆರೆ ಜಯಪ್ರಕಾಶ Janashakthi Media
