ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ವಿರುದ್ದ ಫೆ.12ರಂದು ದೇಶವ್ಯಾಪಿ ಮುಷ್ಕರಕ್ಕೆ ಕಾರ್ಮಿಕರು ಸಜ್ಜು

ಹಟ್ಟಿ ಚಿನ್ನದ ಗಣಿಯಲ್ಲಿ ಪ್ರಚಾರಸಭೆ ಉದ್ಘಾಟನೆ
ಲಿಂಗಸೂರು: ಇದೇ ಏಪ್ರಿಲ್ 1 ರಿಂದ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ನಾಲ್ಕು ಕರಾಳ ನಾಲ್ಕು ಕಾರ್ಮಿಕ  ಸಂಹಿತೆಗಳು ವಿರುದ್ದ ಇದೇ ಫೆಬ್ರವರಿ 12 ರಂದು ಕೋಟ್ಯಾಂತರ ಶ್ರಮಿಕರು ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ಇದು 2026 ರಲ್ಲಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಕಾರ್ಮಿಕ ಮುಷ್ಕರವಾಗಿ ಇತಿಹಾಸ ದಾಖಲಿಸಲಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷರು ಕಾಮ್ರೆಡ್ ಮೀನಾಕ್ಷಿ ಸುಂದರಂ ಹೇಳಿದರು.

ಫೆಬ್ರವರಿ 2ರಂದು ಹಟ್ಟಿಯಲ್ಲಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ‌ ಕ್ರಿಯಾ ಸಮಿತಿ (JCTU) ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪ್ರಚಾರಾಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ‌ಸರ್ಕಾರ ಈ‌ ರೂಪಿಸಿರುವ ಈ ಸಂಹಿತೆಗಳಿಂದಾಗಿ ಗಣಿ ಕಾರ್ಮಿಕರು ಸೇರಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಂಘ‌ಕಟ್ಟಿಕೊಳ್ಳುವ, ಮುಷ್ಕರ ನಡೆಸುವ ಹಕ್ಕುಗಳು‌ ಮೊಟಕುಗೊಳ್ಳಲಿವೆ, ಅಪಾಯಕಾರಿ ಕೆಲಸಕ್ಕೆ ಮಹಿಳಾ ಕಾರ್ಮಿಕರನ್ನು ನಿಯೋಜಿಸಲಾಗುತ್ತದೆ. ಕೆಲಸದ ಅವಧಿ ಹೆಚ್ಚಳವಾಗಿ ಮಾಲೀಕರಿಗೆ ಮತ್ತಷ್ಟು ಶೋಷಿಸಲು ಅವಕಾಶ ನೀಡಲಿದೆ ಹೀಗಾಗಿ ಈ ಲೇಬರ್ ಕೋಡ್‌ಗಳನ್ನು ಸೋಲಿಸುವ ಕೆಲಸವನ್ನು ಕಾರ್ಮಿಕ ವರ್ಗ ಒಂದಾಗ ನಡೆಸಬೇಕೆಂದು ಕರೆ ನೀಡಿದರು.

ಅತ್ಯಂತ ಅಪಾಯಕಾರಿಯಾಗಿವೆ. ಇವು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕರಾಳ ಕಾನೂನುಗಳು ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜನಾಂದೋಲನ ಮಹಾಮೈತ್ರಿ ಮುಖಂಡರಾದ ರಾಘವೇಂದ್ರ ಕುಷ್ಠಗಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಫಲವಾಗಿ ಬಂದ ಕಾರ್ಮಿಕ ಪರ ಕಾನೂನುಗಳನ್ನು ರದ್ದುಪಡಿಸಿ, ದೇಶಿ–ವಿದೇಶಿ ಬಂಡವಾಳದಾರರ ಪರವಾಗಿ ಕೇಂದ್ರ ಸರ್ಕಾರ ಈ ಸಂಹಿತೆಗಳನ್ನು ಜಾರಿಗೆ ತರುತ್ತಿದೆ ನಾವು ಇಂದು ಇವುಗಳನ್ನು ವಿರೋಧಿಸಿ ಸೋಲಿಸದಿದ್ದರೆ ಭವಿಷ್ಯದ ಯುವ ಪೀಳಿಗೆ ನಮ್ಮನ್ನು ಕ್ಷಮಿಸದು ಎಂದರು  ಆರೋಪಿಸಿದರು.

ಇದನ್ನೂ ಓದಿ: ಕಾರ್ಮಿಕ ವಿರೋಧಿ, ರೈತ ವಿರೋಧಿ, ಫೆಡರಲ್ ವಿರೋಧಿ ಬಜೆಟ್ ಅನ್ನು ಖಂಡಿಸಿದ CITU, AIKS, AIAWU

ಟಿಯುಸಿಐ ರಾಜ್ಯ ಅಧ್ಯಕ್ಷರಾದ ಮಹಮ್ಮದ್ ಆಮೀರ್ ಅಲಿ ಮಾತನಾಡಿ ಕಾರ್ಪೊರೇಟ್ ಕಂಪನಿಗಳ ಲಾಭವನ್ನು ಹೆಚ್ಚಿಸಲು ರೂಪಿಸಿ ಜಾರಿ‌ಮಾಡಲಾಗಿರುವ ಈ ಸಂಹಿತೆಗಳಿಂದಾಗಿ ಕಾರ್ಮಿಕ ವರ್ಗ ಭವಿಷ್ಯದಲ್ಲಿ ತನ್ನ ಹಕ್ಕುಗಳನ್ನು ಕಳೆದುಕೊಂಡು ತೀವ್ರ ಶೋಷಣೆಗೆ ಒಳಗಾಗಲಿದೆ ಆದ್ದರಿಂದ ಈ ನೀತಿಗಳು ಜಾರಿಯಾಗದಂತೆ ಕಾರ್ಮಿಕ ವರ್ಗ ಐಕ್ಯತೆಯಿಂದ ಹೋರಾಡುವುದು ಇವತ್ತಿನ ಅನಿವಾರ್ಯತೆಯಾಗಿದೆ ಎಂದರು.

ಎಐಟಿಯುಸಿ ಜಿಲ್ಲಾ ಮುಖಂಡರಾದ ಸಂಗಯ್ಯ ಸ್ವಾಮಿ ಮಾತನಾಡಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಕೂಡ ಇಂತಹ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಇತರೆ ಜನವಿಭಾಗಗಳನ್ನು ಸೇರಿಸಿ ಫೆಬ್ರವರಿ 12 ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಆರಂಭದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫೀ ಕಳೆದ ಹಲವು ತಿಂಗಳಿಂದ ಮೆಡಿಕಲ್ ಅನ್ ಫೀಟ್ ನೇಮಕಾತಿಗಾಗಿ, ಪಿ.ಎಲ್.ಐ.ಬಿ ಸೌಲಭ್ಯಕ್ಕಾಗಿ, ಬಾಕಿ ಹೆಚ್.ಆರ್.ಗಾಗಿ ಮತ್ತು ಉತ್ಪಾದಕತೆ ಹೆಚ್ಚಳಕ್ಕಾಗಿ ಹಲವು ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಆ ಎಲ್ಲ ಫಲಗಳು ಕಾರ್ಮಿಕ ವರ್ಗಕ್ಕೆ ದೊರೆಕಲಿವೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅದ್ಯಕ್ಷ ಕೆ.ಮಹಾಂತೇಶ್ ‌ ಮಾತನಾಡಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ನೌಕರರ ಸಂಘವು ಈಗಾಗಲೇ ಸಿಬ್ಬಂದಿ ಹಾಗೂ ‌ನೌಕರರ ಹಲವು ಬೇಡಿಕೆಗಳಿಗಾಗಿ ಹೋರಾಟ‌ ಮಾಡುತ್ತಿರುವಾಗಲೇ ಕೇಂದ್ರ ‌ಸರ್ಕಾರ ಜಾರಿಗೊಳಿಸಲು ಹೊರಟಿರುವ ಈ ನೂತನ ಹಾಗೂ ‌ಕಾರ್ಮಿಕರಿಗೆ ಮರಣಶಾಸನವಾಗಿರುವ ಕಾರ್ಮಿಕ ಸಂಹಿತೆಗಳ ವಿರುದ್ದ ನಿರಂತರ ಜಾಗೃತಿ‌ಮೂಡಿಸುವ ಕೆಲಸವನ್ನು ಎಲ್ಲ ಕಾರ್ಯಕರ್ತರು ಮುಖಂಡರು ‌ ಮಾಡಬೇಕು ಎಂದು ಕರೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ನರಸಣ್ಣ‌ನಾಯಕ ಕೇಂದ್ರ ‌ಸರ್ಕಾರ ಉದ್ಯೋಗ ಖಾತ್ರಿ ಕಾನೂನು ರದ್ದು‌ಮಾಡಿ ಗ್ರಾಮೀಣ ಆರ್ಥಿಕತೆಗೆ ಪೆಟ್ಟು‌ನೀಡಿದೆ.ಇದರ ವಿರುದ್ದ ರೈತರು ಕಾರ್ಮಿಕರು ಒಂದಾಗಿ ನಡೆಸುವ ಈ ಹೋರಾಟ ಯಶಸ್ವಿಗೊಳಿಸೋಣ ಎಂದರು.

ಉಪಾಧ್ಯಕ್ಷ ಶಾಂತಪ್ಪ ಆನವೇರಿ ಎಲ್ಲರನ್ನೂ ಸ್ವಾಗತಿಸಿದರೆ ಕಾರ್ಯದರ್ಶಿ  ವೆಂಕೋಬ ಮಿಯಾ ಪುರ ವಂದನಾರ್ಪಣೆ ಮಾಡಿದರು ಸಿಐಟಿಯು ಮುಖಂಡ ರಮೇಶ ವೀರಾಪುರ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಕಾರ್ಮಿಕ ಮುಖಂಡರಾದ ಎಚ್.ವಿ. ಅನಂತಸುಬ್ಬರಾವ್ ಅವರಿಗೆ ಸಭೆ ಶ್ರದ್ಧಾಂಜಲಿ ಸಲ್ಲಿಸಿತು.

ಸಭೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಬಸವ ಮುಖಂಡರಾದಕೋಟಾ ಜಮದಗ್ನೀ, ಮಹ್ಮದ್ ಹನೀಫ್, ರಮೇಶ ಬಾಬು, ನಾಗರಾಜ, ಗೌಸಮೀಯಾ, ಖಜಾಂಚಿ, ಸಿದ್ದಪ್ಪಮುಂಡರಗಿ, ಉಪ ಖಜಾಂಚಿ ಚಂದ್ರಶೇಖರ್ ಗುಂಡಪ್ಪ ಗೌಡ, ಹನುಮಂತಗೌಡ, ಎಐಟಿಯುಸಿ ಮುಖಂಡರಾದ ಮುನೀರ್ ಸಿಐಟಿಯು ಮುಖಂಡರಾದ, ಮೈನೂದ್ದೀನ್‌ ಮಾಲಗತ್ತಿ, ಸೋಮಣ್ಣ, ಅಲ್ಲಾಭಕ್ಷ್ಯ, ಪಕೃದ್ದೀನ್ ಹುಸೇನ, ಭಾಷಾ ಬೂಪೂರ ಬಾಬು, ಯಮನೂರ ಕೋಟಾ, ನವನೂರು ಬಸವರಾಜ್, ವೆಂಕಟೇಶ ಗೋರ್ಕಲ್, ವೆಂಕಟೇಶ ಮೇದಾನಪುರ, ರಫೀ ಮಲ್ಲಾಪುರ ಸೇರಿದಂತೆ ನೂರಕ್ಕೂ ಅಧಿಕ ಜನರ ಭಾಗವಹಿಸಿದ್ದರು.

ಇದನ್ನೂ ನೋಡಿ: “ಮನರೇಗಾ ನಮ್ಮ ಹಕ್ಕು: V B GRAM G ವಿರುದ್ಧ ಜನಪಂಚಾಯತ್‌” | ಉದ್ಯೋಗ ಖಾತರಿ Janashakthi Media

Donate Janashakthi Media

Leave a Reply

Your email address will not be published. Required fields are marked *